ಪ್ರತಿಯೊಬ್ಬರೂ ಗುರು ಪರಂಪರೆ ಗೌರವಿಸಿ

ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ರುಕ್ಮಾಪುರ ಗ್ರಾಮದಲ್ಲಿ ಗುರುವಂದನಾ ನಿಮಿತ್ತ ಹಮ್ಮಿಕೊಂಡ ಧಾರ್ಮಿಕ ಸಭೆಯನ್ನು ಹಾರಕೂಡ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವಿರ ಶಿವಾಚಾರ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮಲ್ಲಿಕಾರ್ಜುನ ಚಟ್ಟಿ, ಬಸವರಾಜ ಮಿಣಜಗಿ, ಬಸವರಾಜ ಬಡಗ, ಉಮಾಕಾಂತ ಮಿಣಜಗಿ, ರಾಜಶೇಖರ ಮಿಣಜಗಿ, ಸುರೇಶ ಚಟ್ಟಿ, ಬಸವರಾಜ ಎಸ್​. ಮಿಣಜಗಿ, ದೇವರಾಜ ಚಟ್ಟಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಡಾ.ಚನ್ನವಿರ ಶಿವಾಚಾರ್ಯರು ಅಭಿಮತ
  • ರುಕ್ರಮಾಪುರದಲ್ಲಿ ಧಾರ್ಮಿಕ ಸಭೆ
ಸುರಪುರ: ಗುರು ಪರಂಪರೆಯನ್ನು ಗೌರವಿಸುವುದು ಮತ್ತು ಅವರ ದಿವ್ಯ ಮಾರ್ಗದರ್ಶನದಲ್ಲಿ ನಡೆಯುವುದು ಭಾರತೀಯ ಸಂಸತಿಯ ಶ್ರೇಷ್ಠ ಮೌಲ್ಯವಾಗಿದ್ದು, ಹೀಗಾಗಿ ಪ್ರತಿಯೊಬ್ಬರೂ ಗುರು ಪರಂಪರೆಯನ್ನು ಗೌರವಿಸಬೇಕು ಎಂದು ಸುೇತ್ರ ಹಾರಕೂಡ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವಿರ ಶಿವಾಚಾರ್ಯರು ನುಡಿದರು.
ತಾಲೂಕಿನ ರುಕ್ಮಾಪುರ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಆಧುನಿಕ ಜೀವನದ ಒತ್ತಡಗಳ ನಡುವೆ ಆಧ್ಯಾತ್ಮಿಕ ಚಿಂತನೆ ಮಾನವನಿಗೆ ನೆಮ್ಮದಿ ಮತ್ತು ಆತ್ಮಬಲ ನೀಡುತ್ತವೆ. ಧರ್ಮ ಕೇವಲ ಆಚರಣೆಗಳಿಗೆ ಸೀಮಿತವಾಗಿರದೆ, ನೈತಿಕ ಮೌಲ್ಯ, ಮಾನವೀಯತೆ ಹಾಗೂ ಸೌಹಾರ್ದತೆಯ ಬದುಕನ್ನು ರೂಪಿಸುವ ಶಕ್ತಿ ಅದರಲ್ಲಿ ಅಡಗಿದೆ ಎಂದರು. ಹೀಗಾಗಿ ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಧರ್ಮ, ಸತ್ಯ, ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಧಾರ್ಮಿಕ ಪ್ರೆಯನ್ನು ಬೆಳೆಸುವಲ್ಲಿ ಇಂತಹ ಧಾರ್ಮಿಕ ಸಭೆಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಯುವ ಪೀಳಿಗೆಯಲ್ಲಿ ಸಂಸ್ಕಾರ, ಭಕ್ತಿ ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸಲು ಧಾರ್ಮಿಕ ಕಾರ್ಯಕ್ರಮ ಬಹಳ ಅಗತ್ಯವಾಗಿವೆ ಎಂದರು.
ಹಾಡಕೂಡ ಶ್ರೀಗಳ ಆಗಮನದ ಹಿನ್ನೆಲೆಯಲ್ಲಿ ಇಡೀ ಗ್ರಾಮದಲ್ಲಿ ಭಕ್ತಿಯ ವಾತಾವರಣ ನಿರ್ಮಾಣವಾಗಿತ್ತು. ಭಕ್ತರು ಶ್ರೀಗಳಿಗೆ ಭವ್ಯ ಸ್ವಾಗತ ಕೋರಿದರು. ಪ್ರಮುಖರಾದ ಮಲ್ಲಿಕಾರ್ಜುನ ಚಟ್ಟಿ, ಬಸವರಾಜ ಮಿಣಜಗಿ, ಬಸವರಾಜ ಬಡಗಾ, ಉಮಾಕಾಂತ ಮಿಣಜಗಿ, ರಾಜಶೇಖರ ಮಿಣಜಗಿ, ಸುರೇಶ ಚಟ್ಟಿ, ಬಸವರಾಜ ಎಸ್​.ಮಿಣಜಗಿ ಹಾಗೂ ದೇವರಾಜ ಚಟ್ಟಿ ಇತರರಿದ್ದರು. ಈ ವೇಳೆ ರುಕ್ಮಾಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಭಕ್ತರು, ಮಹಿಳೆಯರು ಹಾಗೂ ಯುವಕರು ಭಾಗವಹಿಸಿ, ಶ್ರೀಗಳ ಆಶೀರ್ವಾದ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net