ಎಲ್ಲರೂ ಇಷ್ಟಲಿಂಗ ಸದಾ ಧರಿಸಿ

ಕಲಬುರಗಿಯಲ್ಲಿ ಹಮ್ಮಿಕೊಂಡಿದ್ದ ಸಿದ್ಧಾಂತ ಶಿಖಾಮಣಿ ವಚನ ಸಾಹಿತ್ಯ ಸಮನ್ವಯಾತ್ಮಕ ಹಾಗೂ ಇಷ್ಟಲಿಂಗ ಬಹಿರಂಗ ಮಹಾಪೂಜೆಯಲ್ಲಿ ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಪಾಲ್ಗೊಂಡಿದ್ದರು. ಶ್ರೀ ವೀರಭದ್ರ ಶಿವಾಚಾರ್ಯ, ಶ್ರೀ ರಾಚೋಟೇಶ್ವರ ಶಿವಾಚಾರ್ಯ, ಸಿದ್ರಾಮಪ್ಪ ಆಲಗೂಡಕರ್​ ಇತರರಿದ್ದರು.
ಕಲಬುರಗಿಯಲ್ಲಿ ಹಮ್ಮಿಕೊಂಡಿದ್ದ ಸಿದ್ಧಾಂತ ಶಿಖಾಮಣಿ ವಚನ ಸಾಹಿತ್ಯ ಸಮನ್ವಯಾತ್ಮಕ ಹಾಗೂ ಇಷ್ಟಲಿಂಗ ಬಹಿರಂಗ ಮಹಾಪೂಜೆಯಲ್ಲಿ ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಪಾಲ್ಗೊಂಡಿದ್ದರು. ಶ್ರೀ ವೀರಭದ್ರ ಶಿವಾಚಾರ್ಯ, ಶ್ರೀ ರಾಚೋಟೇಶ್ವರ ಶಿವಾಚಾರ್ಯ, ಸಿದ್ರಾಮಪ್ಪ ಆಲಗೂಡಕರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉಜ್ಜಯಿನಿ ಜಗದ್ಗುರುಗಳು ಕರೆ
  • ಸಿದ್ಧಾಂತ ಶಿಖಾಮಣಿ ಪ್ರವಚನ
ಕಲಬುರಗಿ: ಇಷ್ಟಲಿಂಗವು ಮನುಷ್ಯನ ದೇಹದ ಅವಿಭಾಜ್ಯ ಅಂಗ. ಅದನ್ನು ಸದಾ ಧರಿಸಬೇಕು. ಅಷ್ಟಾವರ್ಣಗಳಾದ ಭಸ್ಮ, ರುದ್ರಾ ಹಾಗೂ ಗುರುಗಳು ಬೋಧಿಸಿದ ಮಂತ್ರ ನಿರಂತರ ಸ್ಮರಿಸಬೇಕು. ಗುರು ಬೋಧಿಸಿದ ಜ್ಞಾನ ಮನನ ಮಾಡಿಕೊಳ್ಳಬೇಕು ಎಂದು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ನುಡಿದರು. 
ಶ್ರೀ ಗುರುಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಿದ್ಧಾಂತ ಶಿಖಾಮಣಿ ವಚನ ಸಾಹಿತ್ಯ ಸಮನ್ವಯಾತ್ಮಕ ಹಾಗೂ ಇಷ್ಟಲಿಂಗ ಬಹಿರಂಗ ಮಹಾಪೂಜೆಯಲ್ಲಿ ಆರ್ಶೀವಚನ ನೀಡಿ, ಗುರು ಬೋಧಿಸುವುದನ್ನು ಕೇಳುವುದು ಮರೆಯುವದಕ್ಕಲ್ಲ, ಕೇಳಿದ್ದನ್ನು ಅರಿತು, ಅರಿತಿದ್ದನ್ನು ಮರೆಯದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಷ್ಟಾವರ್ಣಗಳನ್ನು ನಮ್ಮ ದೇಹದ ಅಂಗಾಂಗಳಂತೆ ಸದಾ ನಮ್ಮೊಂದಿಗೆ ಇಟ್ಟುಕೊಂಡು ಇಷ್ಟಲಿಂಗ ಪೂಜೆ ಆಚರಿಸಿದರೆ ಇದೇ ಜನ್ಮದಲ್ಲಿ ಮುಕ್ತಿ ಹೊಂದಲು ಸಾಧ್ಯ ಎಂದರು.
ಕಡಗಂಚಿಯ ಶ್ರೀ ವೀರಭದ್ರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಚಂದನಕೇರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ, ಕಿಣಗಿಯ ಶ್ರೀ ಶಿವಶಾಂತಲಿಂಗೇಶ್ವರ ಶಿವಾಚಾರ್ಯ, ಕಪನೂರದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಟೆಂಗಳಿ, ಸುಲೇಪೇಟ, ಕಡಗಂಚಿ ಶ್ರೀಗಳು ಸಮ್ಮುಖ ವಹಿಸಿದ್ದರು.
ಪ್ರಮುಖರಾದ ಅಣ್ಣಾರಾವ ಬೆಣ್ಣೂರ, ಅಪ್ಪಾರಾವ ಬೆಣ್ಣೂರ, ಶಿವಾನಂದ ಬೆಣ್ಣೂರ, ಸಿದ್ದೇಶ್ವರ ಶಾಸಿ, ಸಿದ್ರಾಮಪ್ಪ ಆಲಗೂಡಕರ ಇತರರಿದ್ದರು. ಚೇತನ ಬೀದಿಮನಿ, ಮಹಾಂತಯ್ಯಸ್ವಾಮಿ ನಿಂಗದಳ್ಳಿ ಅವರಿಂದ ಸಂಗೀತ ಜರುಗಿತು. ಯುವ ಸಾಹಿತಿ ಶಿವಯ್ಯ ಮಠಪತಿ ನಿರೂಪಣೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net