ಪ್ಯಾಸ್ಟಿಕ್​ಮುಕ್ತ ಗ್ರಾಮಕ್ಕೆ ಎಲ್ಲರೂ ಸಹಕರಿಸಿ

ಔರಾದ್​ ತಾಲೂಕಿನ ಸೋರಳ್ಳಿ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಹಾಗೂ ಪ್ಲಾಸ್ಟಿಕ್​ಮುಕ್ತ ಅಭಿಯಾನದಲ್ಲಿ ಮುಖ್ಯ ಶಿಕ್ಷಕ ಗುಂಡಪ್ಪ ಹುಡುಗೆ, ವೀರಕುಮಾರ, ಗಜಾನನ ಮಳ್ಳಾ, ಬಾಲಾಜಿ ಅಮರವಾಡಿ, ಶಿವಾಜಿ, ಪ್ರಕಾಶ ತಾಂದಳೆ, ಮನೋಹರ ಅಂಬಾಟೆ, ಇತರರಿದ್ದರು.
ಔರಾದ್​ ತಾಲೂಕಿನ ಸೋರಳ್ಳಿ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಹಾಗೂ ಪ್ಲಾಸ್ಟಿಕ್​ಮುಕ್ತ ಅಭಿಯಾನದಲ್ಲಿ ಮುಖ್ಯ ಶಿಕ್ಷಕ ಗುಂಡಪ್ಪ ಹುಡುಗೆ, ವೀರಕುಮಾರ, ಗಜಾನನ ಮಳ್ಳಾ, ಬಾಲಾಜಿ ಅಮರವಾಡಿ, ಶಿವಾಜಿ, ಪ್ರಕಾಶ ತಾಂದಳೆ, ಮನೋಹರ ಅಂಬಾಟೆ, ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯಶಿಕ್ಷಕ ಗುಂಡಪ್ಪ ಹುಡುಗೆ ಮನವಿ >
  • ಸೋರಳ್ಳಿ ತಾಂಡಾದಲ್ಲಿ ಪರಿಸರ ದಿನಾಚರಣೆ
ಔರಾದ್​: ಜನಾರೋಗ್ಯ ಮತ್ತು ಪರಿಸರಕ್ಕೆ ಮಾರಕವಾಗಿ ಪರಿಣಮಿಸಿರುವ ಏಕ ಬಳಕೆಯ ಪ್ಲಾಸ್ಟಿಕ್​ಗೆ ಕಡಿವಾಣ ಹಾಕಲು ಎಲ್ಲರೂ ಕೈಜೋಡಿಸಬೇಕು ಎಂದು ಮುಖ್ಯಶಿಕ್ಷಕ ಗುಂಡಪ್ಪ ಹುಡುಗೆ ಹೇಳಿದರು.
ತಾಲೂಕಿನ ಸೋರಳ್ಳಿ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಹಾಗೂ ಪ್ಲಾಸ್ಟಿಕ್​ಮುಕ್ತ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಕ್ಯಾನ್ಸರ್​ ಸೇರಿ ಹಲವು ಮಾರಕ ರೋಗಗಳು ಬರುತ್ತಿರುವುದಕ್ಕೆ ಪ್ಲಾಸ್ಟಿಕ್​ ಕಾರಣವಾಗಿದೆ. ಜನ, ಜಾನುವಾರು, ನೀರು, ಗಾಳಿ, ಪರಿಸರಕ್ಕೆ ಪ್ಲಾಸ್ಟಿಕ್​ ಕುತ್ತಾಗಿದೆ. ಗ್ರಾಮವನ್ನು ಸ್ವಚ್ಛ ಹಾಗೂ ಪ್ಯಾಸ್ಟಿಕ್​ಮುಕ್ತ ಮಾಡಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಶಿಕ್ಷಕ ವೀರಕುಮಾತ ಮಾತನಾಡಿ, ಮಕ್ಕಳಲ್ಲಿ ಪ್ರಾಥಮಿಕ ಹಂತದಿಂದಲೇ ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್​ ಬಳಕೆ ನಿಷೇಧದ ಕುರಿತು ಮಾಹಿತಿ ನೀಡಬೇಕಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ತಾಲೂಕು ಅಧ್ಯಕ್ಷ ಗಜಾನನ ಮಳ್ಳಾ, ಕಸಾಪ ಅಧ್ಯಕ್ಷ ಬಾಲಾಜಿ ಅಮರವಾಡಿ, ಅಜೀಂ ಪ್ರೇಮಜಿ ಫೌಂಡೇಷನ್​ ಸಮನ್ವಯಾಧಿಕಾರಿ ಶಿವಾಜಿ, ಪ್ರಕಾಶ ತಾಂದಳೆ ಮಾತನಾಡಿದರು. ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ಮನೋಹರ ಅಂಬಾಟೆ, ಸಿಆರ್​ಪಿ ದುಶ್ಯಂತ, ನೌಕರ ಸಂಘದ ನಿರ್ದೇಶಕ ಬಾಲಾಜಿ ಬಿರಾದಾರ್​, ರವೀಂದ್ರ ಡಿಗ್ಗಿ, ಎಸ್​ಡಿಎಂಸಿ ಅಧ್ಯಕ್ಷ ಸಂತೋಷ, ಮುಖ್ಯ ಶಿಕ್ಷಕ ಉಮಾಕಾಂತ, ಭೀಮಾಶಂಕರ ಇತರರಿದ್ದರು. ಸೌಮ್ಯ ಸಚಿನ ಕೋಳಾರ(ಕೆ) ಅವರಿಂದ 200 ಬಟ್ಟೆ ಚೀಲ ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net