ಸೇಡಂನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ನಗರಸಭೆ ಪೌರಾಯುಕ್ತ ಶರಣಯ್ಯಸ್ವಾಮಿ ಹಿರೇಮಠ ನೇತೃತ್ವದಲ್ಲಿ ಮತದಾರರ ಪಟ್ಟಿ ಮ್ಯಾಪಿಂಗ್ ಕುರಿತು ಸಭೆ ನಡೆಯಿತು. ಅನುರಾಧಾ ಪಾಟೀಲ್, ಬಸವರಾಜ, ಮಲ್ಲಿಕಾರ್ಜುನ ಇತರರಿದ್ದರು. ===
ಸೇಡಂನಲ್ಲಿ ಸಿಬ್ಬಂದಿ ಸಭೆ ಮ್ಯಾಪಿಂಗ್ಗೆ ಪ್ರತಿಯೊಬ್ಬರೂ ಸಹಕರಿಸಿ
ಸೇಡಂ: ರಾಜ್ಯದಲ್ಲಿ ಕೇಂದ್ರ ಚುನಾವಣಾ ಆಯೋಗದಿಂದ 2002ರ ಮತದಾರರ ಪಟ್ಟಿಯನ್ನು 2025 ಪಟ್ಟಿಗೆ ಜೋಡಣೆ ಮಾಡುವ ಮ್ಯಾಪಿಂಗ್ ಕಾರ್ಯ ಪ್ರಗತಿಯಲ್ಲಿದ್ದು, ಮಾಹಿತಿ ಪಡೆಯಲು ಬರುವ ಬೂತ್ ಮಟ್ಟದ ಅಧಿಕಾರಿಗಳಿಗೆ ಸಹಕಾರ ನೀಡುವಂತೆ ನಗರಸಭೆ ಪೌರಾಯಕ್ತ ಶರಣಯ್ಯಸ್ವಾಮಿ ಹಿರೇಮಠ ಮನವಿ ಮಾಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಧಿಕಾರಿಗಳು, ಸಿಬ್ಬಂದಿ ಸಭೆಯಲ್ಲಿ ಮಾತನಾಡಿ, ಈಗಾಗಲೇ ಹಲವು ಬಾರಿ ಎಲ್ಲ ಮತದಾರರಿಗೆ ಮ್ಯಾಪಿಂಗ್ಗಾಗಿ ದಾಖಲೆ ನೀಡುವಂತೆ ಪತ್ರಿಕಾ ಪ್ರಕಟಣೆ, ಧ್ವನಿವರ್ಧಕ, ಮತಗಟ್ಟೆ ಅಧಿಕಾರಿಗಳ ಮೂಲಕ ಮನವಿ ಮಾಡಲಾಗಿದೆ. ಆದರೂ ಸೇಡಂ ನಗರ ವ್ಯಾಪ್ತಿಯ 4978 ಮತದಾರರು ಮ್ಯಾಪಿಂಗ್ ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ. ಸಂಬಂಧಪಟ್ಟ ಮತಗಟ್ಟೆ ಅಧಿಕಾರಿಗಳಿಗೆ ಅಥವಾ ತಹಸಿಲ್ ಕಾರ್ಯಾಲಯದ ಚುನಾವಣಾ ಶಾಖೆಗೆ ಕೂಡಲೇ ಭೇಟಿ ನೀಡಿ ಅಗತ್ಯ ದಾಖಲೆ ನೀಡಿ ಮ್ಯಾಪಿಂಗ್ ಕಾರ್ಯಕ್ಕೆ ಸಹಕರಿಸಬೇಕು ಎಂದರು.
ನಗರ ವ್ಯಾಪ್ತಿಯ 23 ವಾರ್ಡ್ಗಳಲ್ಲಿ ಮ್ಯಾಪಿಂಗ್ಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ನಗರಸಭೆಯಿಂದ ಬಿಎಲ್ಒಗಳನ್ನು ನೇಮಕ ಮಾಲಾಗಿದೆ. ಇದಲ್ಲದೇ ನಗರಸಭೆಯಿಂದ 15 ಜನ ಸಿಬ್ಬಂದಿಯನ್ನೂ ನೇಮಕ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನುರಾಧಾ ಪಾಟೀಲ್, ನಗರಸಭೆ ಕಚೇರಿ ವ್ಯವಸ್ಥಾಪಕ ಗುಂಡಪ್ಪ ಯಡ್ಡಳ್ಳಿ, ಸಿಬ್ಬಂದಿ ಮಲ್ಲಿಕಾರ್ಜುನ, ನಾಗಣ್ಣ, ಶ್ರೀಕಾಂತ, ಕುಪ್ಪಣ್ಣ, ಜಗದೀಶ ಇತರರಿದ್ದರು.