ಸವದತ್ತಿ: ಸಮಾನತೆ, ಸಾಮರಸ್ಯ ಹಾಗೂ ಸಂಸ್ಕಾರಗಳ ಮಹತ್ವ ಸಾರಿದ ಜಗದ್ಗುರು ರೇಣುಕಾಚಾರ್ಯರ ತತ್ತ$$$್ವಗಳು ಸಮಾಜಕ್ಕೆ ಪ್ರೇರಣೆಯಾಗಿವೆ ಎಂದು ಮುನವಳ್ಳಿ ಸೋಮಶೇಖರ ಮಠದ ಮುರುಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕಾಡಳಿತದಿಂದ ಭಾನುವಾರ ಹಮ್ಮಿಕೊಂಡಿದ್ದ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ರೇಣುಕಾಚಾರ್ಯರ ಉಪದೇಶಗಳು ಶಾಂತಿ ಮತ್ತು ಸೌಹಾರ್ದ ಬಲಪಡಿಸುವಲ್ಲಿ ಮಾರ್ಗದರ್ಶಕವಾಗಿವೆ ಎಂದರು.
ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ಉದ್ಯಮಿ ಅಶ್ವತ್ಥ ವೈದ್ಯ ಮಾತನಾಡಿ, ಸಮಾಜದಲ್ಲಿ ಒಗ್ಗಟ್ಟು ಮತ್ತು ಸೌಹಾರ್ದ ಬೆಳವಣಿಗೆಗೆ ರೇಣುಕಾಚಾರ್ಯರ ಸಂದೇಶಗಳು ಪ್ರಸ್ತುತವಾಗಿವೆ ಎಂದರು.