ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ

ಮಳಖೇಡ ಪೊಲೀಸ್​ ಠಾಣೆ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು. ರಾಜಶೇಖರ ಪುರಾಣಿಕ, ಮಹ್ಮದ್​ ಸಿರಾಜ್​, ಶರಣಪ್ಪ ಜಾಕನಳ್ಳಿ, ಚೇತನ ವಾ್ಮೂರೆ ಇತರರಿದ್ದರು.
ಮಳಖೇಡ ಪೊಲೀಸ್​ ಠಾಣೆ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು. ರಾಜಶೇಖರ ಪುರಾಣಿಕ, ಮಹ್ಮದ್​ ಸಿರಾಜ್​, ಶರಣಪ್ಪ ಜಾಕನಳ್ಳಿ, ಚೇತನ ವಾ್ಮೂರೆ ಇತರರಿದ್ದರು.
Published on
ಮಳಖೇಡ: ಸ್ವಚ್ಛ ಪರಿಸರದಿಂದ ಸದೃಢ ಆರೋಗ್ಯ ದೊರೆಯುತ್ತದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಪ್ರತಿ ನಾಗರಿಕರ ಹೊಣೆಯಾಗಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರ ಪುರಾಣಿಕ ಹೇಳಿದರು.
ಪೊಲೀಸ್​ ಠಾಣೆ ಆವರಣದಲ್ಲಿ ಅಲ್ಟ್ರಾಟೆಕ್​ ವೆಲ್​ಫೇರ್​ ಫೌಂಡೇಷನ್​ ಹಾಗೂ ಮೆಟ್ರೋ ಕಂಪ್ಯೂಟರ್​ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಪರಿಸರ ದಿನ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿದ ಅವರು, ಗಿಡ-ಮರ ಬೆಳೆಸುವುದರಿಂದ ಉತ್ತಮ ವಾತಾವರಣದ ಜತೆಗೆ ಭರ್ಜರಿ ಮಳೆಯಾಗುತ್ತದೆ ಎಂದರು.
ಪಿಎಸ್​ಐ ಶರಣಪ್ಪ ಜಾಕನಳ್ಳಿ, ಫೌಂಡೇಷನ್​ ಮುಖ್ಯಸ್ಥ ಚೇತನ ವಾ್ಮೂರೆ, ಮೆಟ್ರೋ ಕಂಪ್ಯೂಟರ್​ನ ಮಹ್ಮದ್​ ಸಿರಾಜ್​, ಪ್ರಮುಖರಾದ ದೇವಿಂದ್ರಪ್ಪ ಹಳಿಜೋಳ, ನಾಗರಾಜ ನಂದೂರ, ತೌಸಿಫ್​ಖಾನ್​, ಅಕ್ಬರ್​ ಭಾಗೋಡಿ, ಅನುಖಾನ್​, ನಬಿಸಾಬ್​, ಶರಣಪ್ಪ ಯರಗೋಳ, ಕಾಶಿಬಾಯಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net