ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ

ಕಲಬುರಗಿ ಸಿದ್ಧಾರ್ಥ ಕಾನೂನು ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಫ್ಯಾಮಿಲಿ ಕೋರ್ಟ್​ ನ್ಯಾಯಾಧೀಶ ಪ್ರಭಾಕರರಾವ್​ ಸಸಿ ನೆಡುವ ಮೂಲಕ ಚಾಲನೆ ನೀಡಿದರು. ಉದಯಕುಮಾರ ಹೊನಗುಂಟಿಕರ್​, ಚಂದ್ರಶೇಖರ ಶೀಲವಂತ, ಡಾ.ಎಸ್​.ಚಂದ್ರಶೇಖರ, ಅಮೃತಾ ಹೊನಗುಂಟಿಕರ್​ ಇತರರಿದ್ದರು.
ಕಲಬುರಗಿ ಸಿದ್ಧಾರ್ಥ ಕಾನೂನು ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಫ್ಯಾಮಿಲಿ ಕೋರ್ಟ್​ ನ್ಯಾಯಾಧೀಶ ಪ್ರಭಾಕರರಾವ್​ ಸಸಿ ನೆಡುವ ಮೂಲಕ ಚಾಲನೆ ನೀಡಿದರು. ಉದಯಕುಮಾರ ಹೊನಗುಂಟಿಕರ್​, ಚಂದ್ರಶೇಖರ ಶೀಲವಂತ, ಡಾ.ಎಸ್​.ಚಂದ್ರಶೇಖರ, ಅಮೃತಾ ಹೊನಗುಂಟಿಕರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಫ್ಯಾಮಿಲಿ ಕೋರ್ಟ್​ ನ್ಯಾಯಾಧೀಶ ಪ್ರಭಾಕರರಾವ್​ ಅನಿಸಿಕೆ
  • ಸಿದ್ಧಾರ್ಥ ಕಾನೂನು ಕಾಲೇಜಿನಲ್ಲಿ ವಿಶ್ವ ಪರಿಸರ ದಿನ
ಕಲಬುರಗಿ: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಉತ್ತಮ ಪರಿಸರ ನಿರ್ಮಾಣದಿಂದ ಸಮಾಜದ ಬೆಳವಣಿಗೆ ಸಾಧ್ಯ ಎಂದು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಪ್ರಭಾಕರರಾವ್​ ಹೇಳಿದರು.
ನಗರದ ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯದಲ್ಲಿ ಸಿದ್ಧಾರ್ಥ ಲೀಗಲ್​ ಏಡ್​ ಸೆಂಟರ್​, ಎನ್​ಎಸ್​ಎಸ್​ ಟಕ, ಐಕ್ಯೂಎಸಿ, ಪರಿಸರ ಕ್ಲಬ್​, ಮಾನವ ಹಕ್ಕುಗಳ ಕ್ಲಬ್​ ಹಾಗೂ ರೋಟರಿ ಕ್ಲಬ್​ ಆಫ್​ ಗುಲ್ಬರ್ಗ ಸಹಯೋಗದಲ್ಲಿ ವಿಶ್ವ ಪರಿಸರ ದಿನ ಹಾಗೂ ವಿಶ್ವ ಆಹಾರ ಸುರಕ್ಷತಾ ದಿನದ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕುಟುಂಬದಲ್ಲಿ ಪರಸ್ಪರ ನಂಬಿಕೆ, ಗೌರವ ಮತ್ತು ಅರ್ಥೈಸಿಕೊಳ್ಳುವ ಮನೋಭಾವದ ವಾತಾವರಣ ಇದ್ದರೆ ಕುಟುಂಬಗಳು ಬಲಿಷ್ಠವಾಗುತ್ತವೆ. ಇದರಿಂದ ಕೌಟುಂಬಿಕ ಕಲಹ ಮತ್ತು ವಿಚ್ಛೇದನ ಪ್ರಕರಣ ಕಡಿಮೆಯಾಗುವುದರೊಂದಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ದಾರಿ ಮಾಡಿಕೊಡುತ್ತದೆ. ಜತೆಗೆ ಪರಿಸರ ಸಂರಕ್ಷಣೆ, ಸ್ವಚ್ಛತೆ ಹಾಗೂ ಸುರತ ಆಹಾರದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಹೈಕೋರ್ಟ್​ ವಕೀಲರೂ ಆದ ರೋಟರಿ ಕ್ಲಬ್​ ಆಫ್​ ಗುಲ್ಬರ್ಗ ಅಧ್ಯಕ್ಷ ಉದಯ್​ ಹೊನಗುಂಟಿಕರ್​ ಮತ್ತು ರೋಟೇರಿಯನ್​ ಪಿಎಚ್​ಎಫ್​ ಮಲ್ಕಣ್ಣ ಕಣ್ಣಿ ಅವರು ಪರಿಸರ ಸಂರಕ್ಷಣೆ, ಸಾಮಾಜಿಕ ಜವಾಬ್ದಾರಿ ಹಾಗೂ ರೋಟರಿ ಸಂಸ್ಥೆಯ ಸೇವಾ ಚಟುವಟಿಕೆಗಳ ಕುರಿತು ವಿವರಿಸಿದರು.
ಕರ್ನಾಟಕ ಪೀಪಲ್ಸ್​ ಎಜುಕೇಷನ್​ ಸೊಸೈಟಿ ಆಡಳಿತಾಧಿಕಾರಿ ಚಂದ್ರಶೇಖರ ಶೀಲವಂತ್​ ವಿಶ್ವ ಪರಿಸರ ದಿನ ಹಾಗೂ ವಿಶ್ವ ಆಹಾರ ಸುರಕ್ಷತಾ ದಿನದ ಮಹತ್ವ ವಿವರಿಸಿ, ಪರಿಸರ ಸಂರಕ್ಷಣೆ ಮತ್ತು ಸುರತ ಆಹಾರದ ಕುರಿತು ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್​.ಚಂದ್ರಶೇಖರ ಮಾತನಾಡಿದರು. ಉದಯ್​ ಹೊಂಗುಂಟಿಕರ್​ ಅವರು ತಮ್ಮ ವೈಯಕ್ತಿಕ ದೇಣಿಗೆಯೊಂದಿಗೆ ರೋಟರಿ ಕ್ಲಬ್​ ಆಫ್​ ಗುಲ್ಬರ್ಗ ವತಿಯಿಂದ ಕಾಲೇಜಿಗೆ ಸ್ಯಾನಿಟರಿ ಪ್ಯಾಡ್​, ಡಿಸ್ಪೋಸಲ್​ ಯಂತ್ರ ಹಾಗೂ ವಾಟರ್​ ಫಿಲ್ಟರ್​ ನೀಡಿದರು.
ಕಾರ್ಯಕ್ರಮದ ಸಂಯೋಜಕಿ ಅಮೃತಾ ಹೊನಗುಂಟಿಕರ್​ ಸ್ವಾಗತಿಸಿ, ಕಾರ್ಯಕ್ರಮದ ಉದ್ದೇಶ ಮತ್ತು ಮಹತ್ವ ವಿವರಿಸಿದರು. ಎನ್​ಎಸ್​ಎಸ್​ ಕಾರ್ಯಕ್ರಮ ಅಧಿಕಾರಿ ಪ್ರೊ.ಕೆ.ಜಿ. ಜವಳಿ, ಕವಿತಾ ಎನ್​.ಜಿ, ಡಾ.ತಿಪ್ಪೇಸ್ವಾಮಿ, ಡಾ.ಅಪರ್ಣಾ ಮಾಲೆ, ಪ್ರೊ. ಮಹಾಂತೇಶ್​ ಬಿ. ಇತರರಿದ್ದರು. ಅಂತಿಮ ವರ್ಷದ ವಿದ್ಯಾರ್ಥಿ ಸುಮೀತ್​ ಕಾಂಬಳೆ ನಿರೂಪಿಸಿದರು.
"

ಆರೋಗ್ಯಕರ ಜೀವನಕ್ಕಾಗಿ ಉತ್ತಮ ಪರಿಸರ, ಮಿತ ಹಾಗೂ ಪೌಷ್ಠಿಕ ಆಹಾರ ಸೇವನೆ ಅತ್ಯಗತ್ಯ. ವಿಶೇಷವಾಗಿ ವಿದ್ಯಾರ್ಥಿ, ಯುವ ಸಮೂಹ ಪರಿಸರ ಸಂರಕ್ಷಣೆ ಜತೆಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.

— ಡಾ.ಎಸ್​.ಚಂದ್ರಶೇಖರ, ಪ್ರಾಚಾರ್ಯ, ಸಿದ್ಧಾರ್ಥ ಕಾನೂನು ಕಾಲೇಜು.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net