ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ

ಆಡಕಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿಶಾಲೆ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿಂದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದ ನಿಮಿತ್ತ ಸಸಿ ನೆಡಲಾಯಿತು. ಸಂಜೀವಕುಮಾರ ಕುಂಬಾರಗೇರಿ, ಸಿದ್ದಯ್ಯಸ್ವಾಮಿ ಆಡಕಿ, ಸೋಮಶೇಖರ ಇತರರಿದ್ದರು.
ಆಡಕಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿಶಾಲೆ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿಂದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದ ನಿಮಿತ್ತ ಸಸಿ ನೆಡಲಾಯಿತು. ಸಂಜೀವಕುಮಾರ ಕುಂಬಾರಗೇರಿ, ಸಿದ್ದಯ್ಯಸ್ವಾಮಿ ಆಡಕಿ, ಸೋಮಶೇಖರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಿಐ ಸಂಜೀವಕುಮಾರ ಸಲಹೆ
  • ಆಡಕಿಯಲ್ಲಿ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮ
ಸೇಡಂ: ಪರಿಸರ ಸಂರಕ್ಷಣೆ ಎಲ್ಲರ ಹೊಣೆಗಾರಿಕೆಯಾಗಿದ್ದು, ಪ್ರತಿಯೊಬ್ಬರೂ ಕನಿಷ್ಠ ಒಂದು ಸಸಿ ನೆಟ್ಟು ಪೋಷಿಸುವ ಮೂಲಕ ಹಸಿರು ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಮುಧೋಳ ಪೊಲೀಸ್​ ಠಾಣೆ ನಿರೀಕ್ಷಕ ಸಂಜೀವಕುಮಾರ ಕುಂಬಾರಗೇರಿ ಸಲಹೆ ನೀಡಿದರು.
ಆಡಕಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶ್ರೀ ೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್​ ಸಹಯೋಗದಡಿ ಶನಿವಾರ ಆಯೋಜಿಸಿದ್ದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಅನೇಕ ಸಂ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ ವಿಶೇಷವಾದ ಕೆಲಸ ಕಾರ್ಯಗಳ ಮೂಲಕ ಧರ್ಮಸ್ಥಳ ಸಂಸ್ಥೆ ಜನರ ಮನಸ್ಸಿನಲ್ಲಿ ಸ್ಥಾನ ಪಡೆದುಕೊಂಡಿದೆ ಎಂದರು.
ಪ್ರಾದೇಶಿಕ ಕೇಂದ್ರದ ಜನಜಾಗೃತಿ ಯೋಜನಾಧಿಕಾರಿ ರಾಜೇಶ, ಪತ್ರಕರ್ತ ಸಿದ್ದಯ್ಯಸ್ವಾಮಿ ಆಡಕಿ ಮಾತನಾಡಿದರು. ತಾಲೂಕು ಯೋಜನಾಧಿಕಾರಿ ಸೋಮಶೇಖರ ಶಾಲೆಗೆ ಗಿಡಗಳನ್ನು ಹಸ್ತಾಂತರಿಸಿದರು.
ಪ್ರಾಂಶುಪಾಲ ಮಲಕಪ್ಪ ಬಿರಾದಾರ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಶಿವಕುಮಾರ ಜಾಡರ, ಕಾಶಿನಾಥ, ಭಾಗ್ಯಲಕ್ಷ್ಮೀ ನಾಯ್ಕೋಡಿ, ವಿಪತ್ತು ನಿರ್ವಹಣಾ ಟಕದ ಪ್ರತಿನಿಧಿ ಜಗದೀಶ ಹಿರೇಮಠ ಇದ್ದರು. ಸಂಸ್ಥೆಯ ಕೃಷಿ ಅಧಿಕಾರಿ ಶಂಕರ ಬಂಡಿ ಸ್ವಾಗತಿಸಿದರು. ರುಪತಿ ರೆಡ್ಡಿ ನಿರೂಪಣೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net