ಆಂತರಿಕ ಹ್ಯಾಕಥಾನ್ಗೆ ವಿವಿಯ 55 ತಂಡಗಳು ನೋಂದಾಯಿಸಿವೆ. ಕಂಪ್ಯೂಟರ್ ವಿಜ್ಞಾನ, ಎಂಸಿಎ, ಗಣಿತ ಮತ್ತು ಕಂಪ್ಯೂಟಿಂಗ್, ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್, ಇಲೆಕ್ಟ್ರಿಕಲ್ ಇಂಜಿನಿಯರಿಂಗ್, ಜೆನೆಟಿಕ್ಸ್ ಮತ್ತು ಜೀನೋಮಿಕ್ಸ್ ಹಾಗೂ ಸ್ಟ್ಯಟಿಸ್ಟಿಕ್ಸ್ ಮತ್ತು ಡೇಟಾ ಅನಾಲಿಟಿಕ್ಸ್ ವಿಭಾಗದ ಸುಮಾರು 246 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೌಲ್ಯಮಾಪನದ ಬಳಿಕ ವಿವಿಧ ಸಮಸ್ಯೆ ಹೇಳಿಕೆ ಮತ್ತು ವಿಷಯಗಳ ಆಧಾರದ ಮೇಲೆ ರಾಷ್ಟ್ರೀಯ ಮಟ್ಟದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ಗೆ ಅಂತಿಮವಾಗಿ 45 ತಂಡಗಳ ನಾಮನಿರ್ದೇಶನ ಮಾಡಲಾಯಿತು.