ಉನ್ನತ ಶಿಕ್ಷಣದಲ್ಲಿ ಉದ್ಯಮಶೀಲತೆ ಚಿಂತನೆ ಅಗತ್ಯ

ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಾಣಿಜ್ಯ ಅಧ್ಯಯನ ನಿಕಾಯದ ವಾಣಿಜ್ಯ ವಿಭಾಗವು ಗುರುವಾರ ಆಯೋಜಿಸಿದ್ದ ನವೋದ್ಯಮ ಪರಿಸರ ವ್ಯವಸ್ಥೆ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಪ್ರೊ.ಎಸ್​.ರುನಾಥರೆಡ್ಡಿ, ಪ್ರೊ.ಪಾಂಡುರಂಗ ಪತ್ತಿ, ಡಾ.ರಾಜೀವ ಜೋಶಿ, ಸುಜಯ್​ ಮುದಗಲ್​, ಬಸವರೆಡ್ಡಿ ಎಸ್​.ಎಂ, ಡಾ.ರಂಗನಾಥಂ, ಡಾ.ಪದ್ಮಶ್ರೀ ಇತರರಿದ್ದರು.
ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಾಣಿಜ್ಯ ಅಧ್ಯಯನ ನಿಕಾಯದ ವಾಣಿಜ್ಯ ವಿಭಾಗವು ಗುರುವಾರ ಆಯೋಜಿಸಿದ್ದ ನವೋದ್ಯಮ ಪರಿಸರ ವ್ಯವಸ್ಥೆ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಪ್ರೊ.ಎಸ್​.ರುನಾಥರೆಡ್ಡಿ, ಪ್ರೊ.ಪಾಂಡುರಂಗ ಪತ್ತಿ, ಡಾ.ರಾಜೀವ ಜೋಶಿ, ಸುಜಯ್​ ಮುದಗಲ್​, ಬಸವರೆಡ್ಡಿ ಎಸ್​.ಎಂ, ಡಾ.ರಂಗನಾಥಂ, ಡಾ.ಪದ್ಮಶ್ರೀ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವೇಮನ ವಿವಿ ಪ್ರಾಧ್ಯಾಪಕ ಪ್ರೊ.ರುನಾಥ ರೆಡ್ಡಿ ಹೇಳಿಕೆ
  • ಸಿಯುಕೆಯಲ್ಲಿ ನವೋಧ್ಯಮ ಪರಿಸರ ವ್ಯವಸ್ಥೆ ಕಾರ್ಯಾಗಾರ
ಕಲಬುರಗಿ: ಉನ್ನತ ಶಿಕ್ಷಣದಲ್ಲಿ ಉದ್ಯಮಶೀಲತಾ ಚಿಂತನೆ ಇಂದಿನ ತುರ್ತು ಅಗತ್ಯ ಎಂದು ಆಂಧ್ರಪ್ರದೇಶದ ಯೋಗಿ ವೇಮನ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಎಸ್​.ರುನಾಥ ರೆಡ್ಡಿ ಹೇಳಿದರು.
ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಾಣಿಜ್ಯ ಅಧ್ಯಯನ ನಿಕಾಯದ ವಾಣಿಜ್ಯ ವಿಭಾಗವು ಬುಧವಾರ ಆಯೋಜಿಸಿದ್ದ ನವೋದ್ಯಮ ಪರಿಸರ ವ್ಯವಸ್ಥೆ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿದ ಮಾತನಾಡಿದರು.
ವಿದ್ಯಾರ್ಥಿಗಳು ಸಾಂಪ್ರದಾಯಿಕ ವೃತ್ತಿ ಮಾರ್ಗ ಮೀರಿ ನವೋದ್ಯಮ ಪ್ರಾರಂಬಿಸುವತ್ತ ಹೆಚ್ಚಿನ ಗಮನ ಹರಿಸಬೇಕು. ಅದೊಂದು ಪ್ರಭಾವಶಾಲಿ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ವಿಶ್ವವಿದ್ಯಾಲಯದ ಇನ್​ಕ್ಯೂಬೇಷನ್​ ಸೆಂಟರ್​ನ ನಿರ್ದೇಶಕ ಡಾ.ರಾಜೀವ ಜೋಶಿ ಮಾತನಾಡಿದರು. ಕರ್ನಾಟಕ ಡಿಜಿಟಲ್​ ಎಕಾನಮಿ ಮಿಷನ್​ (ಕೆಇಡಿಎಂ)ನ ಕಲಬುರಗಿ ಕ್ಲಸ್ಟರ್​ ಮುಖ್ಯಸ್ಥ ಸುಜಯ ಮುದ್ಗಲ್​ ಅವರು ಸರ್ಕಾರದ ಉಪಕ್ರಮಗಳು, ಡಿಜಿಟಲ್​ ಆರ್ಥಿಕತೆಯಲ್ಲಿನ ಅವಕಾಶ ಮತ್ತು ನವೋದ್ಯಮಗಳಿಗೆ ನೀತಿಯ ಬೆಂಬಲದ ಕುರಿತು ಮಾತನಾಡಿದರು.
ಕಲಬುರಗಿಯ ಇಮೈಲ್​ ಏಜ್​ ಇನಿಶಿಯೇಟಿವ್​ ಪ್ರೈವೇಟ್​ ಲಿಮಿಟೆಡ್​ನ ಸಂಸ್ಥಾಪಕ ಮತ್ತು ಸಿಇಒ ಬಸವರೆಡ್ಡಿ ಎಸ್​.ಎಂ. ಅವರು ತಮ್ಮ ಉದ್ಯಮಶೀಲತಾ ಅನುಭವ ಹಂಚಿಕೊಂಡು, ಸುಸ್ಥಿರ ನವೋದ್ಯಮ ನಿರ್ಮಿಸುವಲ್ಲಿನ ಸವಾಲು ಮತ್ತು ಅವಕಾಶಗಳ ಕುರಿತು ಚರ್ಚಿಸಿದರು.
ಅಧ್ಯಕ್ಷತೆ ವಹಿಸಿದ್ದ ಸ್ಕೂಲ್​ ಆಫ್​ ಬಿಸಿನೆಸ್​ ಸ್ಟಡಿಸ್​ನ ಡೀನ್​ ಪ್ರೊ.ಪಾಂಡುರಂಗ ವಿ.ಪತ್ತಿ ಮಾತನಾಡಿ, ಶೈಕ್ಷಣಿಕ ಸಂಸ್ಥೆಗಳು ನಾವೀನ್ಯತೆ&ಚಾಲಿತ ಕಲಿಕೆ ಮತ್ತು ಉದ್ಯಮದ ತೊಡಗಿಸಿಕೊಳ್ಳುವಿಕೆಯನ್ನು ಸಕ್ರಿಯವಾಗಿ ಉತ್ತೇಜಿಸುವ ಅಗತ್ಯವನ್ನು ಒತ್ತಿ ಹೇಳಿದರು.
ಕಾರ್ಯಕ್ರಮ ಸಂಯೋಜಕ ಡಾ.ಜಿ.ರಂಗನಾಥಂ ಸ್ವಾಗತಿಸಿ, ನಿರೂಪಿಸಿದರು. ಪ್ರೊ.ಪದ್ಮಶ್ರೀ, ಪ್ರೊ.ಎಂ.ಎ.ಅಸ್ಲಾಂ, ಡಾ. ಮಹೇಂದ್ರ, ಡಾ.ರಾಜಲಿಂಗಂ, ಅಧ್ಯಾಪಕರು, ಸಂಶೋಧನಾ ವಿದ್ವಾಂಸರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
"

ಮಾರ್ಗದರ್ಶನ, ಹಣಕಾಸು ಬೆಂಬಲ ಮತ್ತು ಉದ್ಯಮ ಸಂಪರ್ಕಗಳ ಮೂಲಕ ವಿದ್ಯಾರ್ಥಿ ಉದ್ಯಮಿಗಳನ್ನು ಬೆಂಬಲಿಸಲು ವಿಶ್ವವಿದ್ಯಾಲಯದಲ್ಲಿ ಇನ್​ಕ್ಯೂಬೇಷನ್​ ಸೆಂಟರ್​ ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು.

ಡಾ.ರಾಜೀವ್​ ಜೋಶಿ,ನಿರ್ದೇಶಕ,

ಇನ್​ಕ್ಯೂಬೇಷನ್​ ಸೆಂಟರ್​ ಸಿಯುಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net