ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸಿ

ಅಫಜಲಪುರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ತಾಲೂಕು ಅಧ್ಯ ಪ್ರಕಾಶ ಜಮಾದಾರ ಮಾತನಾಡಿದರು. ತಾಪಂ ಇಒ ಶಂಕರ ರಾಠೋಡ್​ ಇದ್ದರು.
ಅಫಜಲಪುರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ತಾಲೂಕು ಅಧ್ಯ ಪ್ರಕಾಶ ಜಮಾದಾರ ಮಾತನಾಡಿದರು. ತಾಪಂ ಇಒ ಶಂಕರ ರಾಠೋಡ್​ ಇದ್ದರು.
Published on
ಅಫಜಲಪುರ: ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಅಧಿಕಾರಿಗಳಿಂದ  ಆಗಬೇಕಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪ್ರಕಾಶ ಜಮಾದಾರ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯತೆ ವಹಿಸಿ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯಡಿ 52,984 ಫಲಾನುಭವಿಗಳಿಗೆ 32 ಕಂತಿನಲ್ಲಿ 339 ಕೋಟಿ ರೂ. ಹಣ ಜಮೆ ಮಾಡಲಾಗಿದೆ. ಗೃಹಜ್ಯೋತಿಯಡಿ 43,168 ಗ್ರಾಹಕರ ಲಾಭ ಪಡೆದಿದ್ದು, 63.55 ಕೋಟಿ ರೂ. ವ್ಯಯಿಸಲಾಗಿದೆ. 1,77,000 ಮಹಿಳೆಯರು ಶಕ್ತಿ ಯೋಜನೆಯ ಲಾಭ ಪಡೆದಿದ್ದು, 72.92 ಕೋಟಿ ರೂ. ಖರ್ಚು ಮಾಡಲಾಗಿದೆ. ಯುವನಿಧಿ ಅಡಿ 3,257 ಪದವೀಧರರಿಗೆ 37.36 ಲಕ್ಷ ರೂ ಜಮೆಯಾಗಿದೆ. ಅನ್ನಭಾಗ್ಯದಡಿ 59,847 ಪಡಿತರ ಚೀಟಿಗಳಲ್ಲಿ 2,20,595 ಫಲಾನುಭವಿಗಳು ಲಾಭ ಪಡೆದಿದ್ದಾರೆ ಎಂದು ತಿಳಿಸಿದರು.
ಪಂಚ ಗ್ಯಾರಂಟಿಗಳ ವ್ಯಾಪ್ತಿಗೊಳಪಡುವ ಇಲಾಖೆಗಳಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಹೆಲ್ಪ್​ ಡೆಸ್ಕ್​ ಮಾಡಿ ಸಿಬ್ಬಂದಿ ನಿಯೋಜಿಸಬೇಕು. ಜೆಸ್ಕಾಂ ಸಿಬ್ಬಂದಿ ಮನೆ& ಮನೆಗೆ ಭೇಟಿ ನೀಡಿ ಪರಿಷ್ಕರಣೆ ನಡೆಸಿ, ಜನರು ಯೋಜನೆಯಿಂದ ಹೊರಗುಳಿಯದಂತೆ ನೋಡಿಕೊಳ್ಳವೇಕು  ಎಂದು ತಾಕೀತು ಮಾಡಿದರು.
ಜೆಸ್ಕಾಂ ಅಧಿಕಾರಿ ಚಿದಾನಂದ ಕೊಳ್ಳಿ ಮಾತನಾಡಿ, ಗೃಹಜ್ಯೋತಿ ಪರಿಷ್ಕರಣೆಯಲ್ಲಿ ಶೇ.90 ಪ್ರಗತಿ ಸಾಧಿಸಲಾಗಿದೆ. ಚೌಡಾಪುರ ಉಪ ವಿಭಾಗದಲ್ಲಿ ಶೇ.92 ಪ್ರಗತಿ ಸಾಧಿಸಲಾಗಿದೆ. ಇನ್ನುಳಿದವರ ಮನೆ&ಮನೆಗೆ ಭೇಟಿ ನೀಡಿ ಶ್ರೀಘ್ರದಲ್ಲೆ ಪೂರ್ಣ ಮಾಹಿತಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ತಾಪಂ ಇಒ ಶಂಕರ ರಾಠೋಡ್​, ಸದಸ್ಯರಾದ ರಾಜಕುಮಾರ ಬಬಲಾದ, ಅಂಬರೀಶ ಬುರಲಿ, ಗಾಲಿಬ್​ ಮುಜಾವರ, ದತ್ತು ಘಾಣೂರ, ಪ್ರವಿಣ ಕಲ್ಲೂರ, ನಿಜಗುಣ ಚಕ್ರವರ್ತಿ, ಕಿರಣ ಮಾಸ್ತರ್​, ಅನುಸುಯಾ ಸುಲೇಕರ, ಬಿಸ್ಮಿಲ್ಲಾ ಖೇಡ, ಅಧಿಕಾರಿಗಳಾದ ಸೊಹೆಬ್​ ಪಟೇಲ್​, ದತ್ತಾತ್ರೇಯ ಗುಡೂರ, ಪ್ರೇಮಾನಂದ, ಎಸ್​.ಎಂ.ವಾಲಿಕಾರ, ಶರಣಪ್ಪ, ರವಿ ನಾಟಿಕಾರ ಇತರರಿದ್ದರು.

ಆದೇಶ ಧಿಕ್ಕರಿಸುವ ನ್ಯಾಯಬೆಲ 

ಅಂಗಡಿಗಳ ಪರವಾನಗಿ ರದ್ದು ಮಾಡಿ:

ಸರ್ಕಾರದ ಆದೇಶದಂತೆ ನ್ಯಾಯಬೆಲೆ ಅಂಗಡಿಗಳು ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಆಹಾರ ಧಾನ್ಯ ವಿತರಿಸಬೇಕೆಂಬ ನಿಯಮ ಜಾರಿಯಿದ್ದರೂ ಪಾಲಿಸುತ್ತಿಲ್ಲ. ಅಂತಹವರ ಮೇಲೆ ಕ್ರಮವಾಗಬೇಕು ಎಂದು ಸದಸ್ಯರು ಆಗ್ರಹಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯ ಪ್ರಕಾಶ ಜಮಾದಾರ, ಅಂತಹ ಅಂಗಡಿಗಳಿಗೆ ನೋಟಿಸ್​ ನೀಡಿ ಪರವಾನಗಿ ರದ್ದು ಪಡಿಸಿ. ಅಲ್ಲದೆ ಅಂಗಡಿ ಅವರು ಫಲಾನುಭವಿಗಳಿಗೆ ಪ್ರತಿ ತಿಂಗಳು ನೀಡುವ ಆಹಾರ ಧಾನ್ಯಗಳ ತೂಕದ ಕುರಿತು ಬೋರ್ಡ್​ ಹಾಕಿಸಬೇಕು ಎಂದು ಆಹಾರ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net