ಶಿಕ್ಷಣಕ್ಕೆ ಶಕ್ತಿ ಕಾಯಕ ಸೇವೆಗೆ ಸ್ಫೂರ್ತಿ

ಕಲಬುರಗಿಯಲ್ಲಿ ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಜೆ.ಪಿ.ಸುಧಾಕರ್​, ಎಂಎಲ್​ಸಿ ಜಗದೇವ ಗುತ್ತೇದಾರ, ಶಿವಾನಂದ ಎಚ್​.ಎಲ್​, ಮಂಜಪ್ಪ ಜಿ.,ಪೂರ್ಣೇಶ ಎಂ.ಆರ್​., ಕುಸುಮ ಅಜಯ, ಸತೀಶ ಗುತ್ತೇದಾರ, ಸುರೇಶ ಗುತ್ತೇದಾರ ಬೆಡಸೂರ ಇತರರಿದ್ದರು.
ಕಲಬುರಗಿಯಲ್ಲಿ ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಜೆ.ಪಿ.ಸುಧಾಕರ್​, ಎಂಎಲ್​ಸಿ ಜಗದೇವ ಗುತ್ತೇದಾರ, ಶಿವಾನಂದ ಎಚ್​.ಎಲ್​, ಮಂಜಪ್ಪ ಜಿ.,ಪೂರ್ಣೇಶ ಎಂ.ಆರ್​., ಕುಸುಮ ಅಜಯ, ಸತೀಶ ಗುತ್ತೇದಾರ, ಸುರೇಶ ಗುತ್ತೇದಾರ ಬೆಡಸೂರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೆ.ಪಿ.ಸುಧಾಕರ ಹೇಳಿಕೆ
  • ಜೆಪಿಎನ್​ಪಿಯಿಂದ 20 ಲಕ್ಷ ರೂ. ಪ್ರೋತ್ಸಾಹ ಧನ
ಕಲಬುರಗಿ: ಜೆ.ಪಿ.ನಾರಾಯಣಸ್ವಾಮಿ ಅವರು ಶಿಕ್ಷಣಕ್ಕೆ ಶಕ್ತಿ ತುಂಬಿ, ಕಾಯಕ, ಸೇವೆಗೆ ಪ್ರೇರಣೆ ಆಗುವ ದೃಷ್ಟಿಯೊಂದಿಗೆ ಇಡೀ ಜೀವನ ಸಮರ್ಪಿಸಿದರು. ಅವರ ಸದ್ವಿಚಾರದ ಪ್ರೇರಣೆಯೊಂದಿಗೆ ಬೆಂಗಳೂರಿನ ಜೆ.ಪಿ.ನಾರಾಯಣ ಸ್ವಾಮಿ ಪ್ರತಿಷ್ಠಾನ ಸೇವಾ ಕಾರ್ಯ ಮಾಡುತ್ತಿದ್ದು, ಸೇವೆ ಜತೆಗೆ ಶಿಕ್ಷಣಕ್ಕೆ ಶಕ್ತಿ ತುಂಬಲಾಗುತ್ತಿದೆ ಎಂದು ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಜೆ.ಪಿ.ಸುಧಾಕರ್​ ಹೇಳಿದರು.
ನಗರದ ಖಾಸಗಿ ಸಭಾಂಗಣದಲ್ಲಿ ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನದಿಂದ ಭಾನುವಾರ ಏರ್ಪಡಿಸಿದ್ದ ಕಲಬುರಗಿ, ಬೀದರ್​, ಯಾದಗಿರಿ, ವಿಜಯಪುರ, ರಾಯಚೂರು ಮತ್ತು ಬಾಗಲಕೋಟೆ ಜಿಲ್ಲೆಗಳ 216 ಅರ್ಹ ವಿದ್ಯಾರ್ಥಿಗಳಿಗೆ 20 ಲಕ್ಷ ರೂ. ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಷ್ಠಾನದಿಂದ ವಿದ್ಯಾರ್ಥಿವೇತನ ನೀಡುತ್ತಿದ್ದು, ರಾಜ್ಯದ ಬೇರೆ ಭಾಗದಲ್ಲಿ ಶೇ.80, 90 ಅಂಕ ಪಡೆದವರಿಗೆ ನೀಡುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೇ.60 ಅಂಕ ಗಳಿಸಿದರೂ ವಿದ್ಯಾರ್ಥಿ ಪುರಸ್ಕಾರ ನೀಡಿ, ಪ್ರೋತ್ಸಾಹಿಸಲಾಗುತ್ತಿದೆ.
ವಿಧಾನ ಪರಿಷತ್​ ಸದಸ್ಯ ಜಗದೇವ ಗುತ್ತೇದಾರ ಮಾತನಾಡಿ, ಜೆಪಿಎನ್​ ಪ್ರತಿಷ್ಠಾನದಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆಯಿಂದ ಶಿಕ್ಷಣಕ್ಕೆ ಶಕ್ತಿ ದೊರೆಯಲಿದೆ. ಈಡಿಗ ಸಮುದಾಯದ ಜನರು ಅಭಿವೃದ್ಧಿಗೆ ಸರ್ಕಾರದ ಹಂತದಲ್ಲಿ ಭಿನ್ನ, ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಲು ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗಿದೆ ಎಂದು ಹೇಳಿದರು.
ಪ್ರತಿಷ್ಠಾನದ ಅಧ್ಯಕ್ಷ ಶಿವಾನಂದ ಎಚ್​.ಎಲ್​ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಉಪಾಧ್ಯಕ್ಷ ಮಂಜಪ್ಪ ಜಿ., ಸದಸ್ಯರಾದ ಪೂರ್ಣೇಶ ಎಂ.ಆರ್​., ಕಾರ್ಯದರ್ಶಿ ಕುಸುಮ ಅಜಯ, ಪ್ರಮುಖರಾದ ಡಾ.ಸದಾನಂದ ಪೆರ್ಲ, ಅನಂತರಾಮ ಚೌಧರಿ, ಕೆ.ಎಸ್​.ಮಲ್ಲಿಕಾರ್ಜುನ ಬೆಳಗಾವಿ, ಸತೀಶ ಗುತ್ತೇದಾರ, ಸುರೇಶ ಗುತ್ತೇದಾರ ಬೆಡಸೂರ, ಪ್ರಭಾಕರ ತಾನಾಜಿ, ಆನಂದ ತೆಲಂಗ, ಮಂಜುನಾಥ ಹಾನಗಲ್​, ರಾಜಕುಮಾರ ಗುತ್ತೇದಾರ, ಸುರೇಶ ಗುತ್ತೇದಾರ ಮಟ್ಟೂರು, ಹನುಮಯ್ಯ ಆಲೂರು ಇತರರಿದ್ದರು. ಸಹನಾ ಪ್ರಾರ್ಥನಾ ಗೀತೆ ಹಾಡಿದರು. ವೆಂಕಟೇಶ ಮಾಸ್ತರ ಈಳಿಗೇರ ನಿರೂಪಣೆ ಮಾಡಿದರು. ರೂಪಾ ಅಬಕಾರಿ ವಂದಿಸಿದರು.

ಪ್ರತಿಭಾವಂತರಿಗೆ ಪುರಸ್ಕಾರ

ಕಲಬುರಗಿ, ಬೀದರ್​, ಯಾದಗಿರಿ, ವಿಜಯಪುರ, ರಾಯಚೂರು ಮತ್ತು ಬಾಗಲಕೋಟೆ ಜಿಲ್ಲೆಗಳ 216 ಅರ್ಹ ವಿದ್ಯಾರ್ಥಿಗಳಿಗೆ 20 ಲಕ್ಷ ರೂ. ಪ್ರೋತ್ಸಾಹ ಧನದ ಚೆಕ್​ ವಿತರಿಸಲಾಯಿತು. ಪದವಿ, ಸ್ನಾತಕೋತ್ತರ ಪದವಿ, ಬಿ.ಇಡಿ ಸೇರಿ ವಿವಿಧ ಪದವಿಯಲ್ಲಿ ಅಧ್ಯಯನ ನಿರತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಚೆಕ್​ ವಿತರಿಸಿ, ಪ್ರೋತ್ಸಾಹಿಸಲಾಯಿತು.
"

ಜೆಪಿಎನ್​ಪಿ ಪ್ರತಿಷ್ಠಾನವೂ ನಾರಾಯಣ ಗುರುಗಳ ತತ್ವದಡಿ ಕಾಯಕ ನಿರತವಾಗಿದ್ದು, ಸಮುದಾಯದ ಎಲ್ಲರೂ ಒಗ್ಗೂಡಿ ಸಮಾಜ ಕಟ್ಟುವ ಕಾಯಕದಲ್ಲಿ ಕೈಜೋಡಿಸಬೇಕು. ವಿದ್ಯಾರ್ಥಿಗಳು ಮೊಬೈಲ್​ ದಾಸರಾಗದೆ ಉತ್ತಮ ಶಿಕ್ಷಣ ಪಡೆದು ದೇಶದ ಆದರ್ಶ ನಾಗರಿಕರಾಗಿ ಸಮಾಜಕ್ಕೆ ಸೇವಾ ಕೊಡುಗೆ ನೀಡಬೇಕು.

> ಜೆ.ಪಿ.ಸುಧಾಕರ್​,

ಸಂಸ್ಥಾಪಕಅಧ್ಯಕ್ಷ, ಜೆಪಿಎನ್​ ಪ್ರತಿಷ್ಠಾನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net