ಕಲಬುರಗಿ ರಂಗಾಯಣದಲ್ಲಿ ಮಾ.21ರಂದು ವಿಶ್ವ ರಂಗ ನಾಟಕ ಮತ್ತು ನೃತ್ಯ ಸೇವಾ ಸಂಘ ಹಾಗೂ ರಂಗಾಯಣ ಕಲಬುರಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ "ರಂಗ ಯುಗಾದಿ" ಮೂರು ದಿನಗಳ ನಾಟಕೋತ್ಸವವನ್ನು ನಗಾರಿ ಬಾರಿಸಿ ಉದ್ಘಾಟಿಸಿದ ನಂತರ ಮಾತನಾಡಿ ನಾಟ್ಯ ಶಾಸ್ತ್ರದಲ್ಲಿ ಹೇಳುವಂತೆ ನಾಟಕವು ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕ ಈ ನಾಲ್ಕು ಬಗ್ಗೆ ಅಭಿನಯದಿಂದ ಸಹೃದಯರ ಮನಸ್ಸಿಗೆ ಮುಟ್ಟುತ್ತದೆ.ಅದಕ್ಕಾಗಿ ರಂಗಾಯಣಕ್ಕೆ ಹೆಚ್ಚಿನ ಆರ್ಥಿಕ ನೆರವು ಒದಗಿಸಿದರೆ "ಕಾಲಚಕ್ರ" ದಂತಹ ಉತ್ತಮ ನಿರ್ಮಾಣ ಸಾಧ್ಯವಾಗುತ್ತದೆ. ನಾಟಕ ಕಲಾವಿದರು, ನಿರ್ದೇಶಕರು, ನಾಟಕ ರಚನೆಕಾರರಿಂದ ಸಮೃದ್ಧವಾಗಿರುವ ಈ ಭಾಗದಲ್ಲಿ ಕಲಬುರಗಿ ಆಕಾಶವಾಣಿ ನಿರ್ಮಾಣ ಮಾಡಿದ ಸಂಧ್ಯಾ ಹೊನಗುಂಟಿಕರ್ ಅವರ