ರಾಯಣ್ಣನ ಪ್ರಮಾಣಿಕತೆ ಮೈಗೂಡಿಸಿಕೊಳ್ಳಿ

ಮಾಡಿಯಾಳದಲ್ಲಿ ಹಮ್ಮಿಕೊಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿಯನ್ನು ಶ್ರೀ ಡಾ.ಚನ್ನಮಲ್ಲ ಶಿವಾಚಾರ್ಯರು ಉದ್ಘಾಟಿಸಿದರು. ಶ್ರೀ ಮರಳಸಿದ್ಧ ಸ್ವಾಮೀಜಿ, ಶಿಲ್ಪಾ ಕುದುರಗೊಂಡ, ಸಿದ್ದರಾಮ ಪ್ಯಾಟಿ ಇತರರಿದ್ದರು.
ಮಾಡಿಯಾಳದಲ್ಲಿ ಹಮ್ಮಿಕೊಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿಯನ್ನು ಶ್ರೀ ಡಾ.ಚನ್ನಮಲ್ಲ ಶಿವಾಚಾರ್ಯರು ಉದ್ಘಾಟಿಸಿದರು. ಶ್ರೀ ಮರಳಸಿದ್ಧ ಸ್ವಾಮೀಜಿ, ಶಿಲ್ಪಾ ಕುದುರಗೊಂಡ, ಸಿದ್ದರಾಮ ಪ್ಯಾಟಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷೆ ಶಿಲ್ಪಾ ಕುದರಗೊಂಡ ಕರೆ
  • ಮಾಡಿಯಾಳದಲ್ಲಿ ಜಯಂತಿ ಸಂಭ್ರಮ
ನಿಂಬರ್ಗಾ: ಸಂಗೊಳ್ಳಿ ರಾಯಣ್ಣ ಯಾವುದೇ ಆಸೆ-ಆಮಿಷಗಳಿಗೆ ಬಲಿಯಾಗದೆ ಆಂಗ್ಲರ ವಿರುದ್ಧ ಹೋರಾಡಿದ ಮಹಾನ್​ ವ್ಯಕ್ತಿ. ಪ್ರತಿಯೊಬ್ಬರೂ ರಾಯಣ್ಣನ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರ್ನಾಟಕ ಪ್ರದೇಶ ಮಹಿಳಾ ಯುವ ಕುರುಬ ಸಂಘದ ಅಧ್ಯೆಕ್ಷ ಶಿಲ್ಪಾ ಎಸ್​. ಕುದುರಗೊಂಡ ಹೇಳಿದರು.
ಮಾಡಿಯಾಳದ ಶ್ರೀ ಅಮೋಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 228ನೇ ಜಯಂತಿಯಲ್ಲಿ ಮಾತನಾಡಿ, ಕುರುಬ ಸಮಾಜದ ಜನರು ವಿದ್ಯೆಗೆ ಆದ್ಯತೆ ನೀಡಬೇಕು. ಪರಸ್ಪರ ಕಾಲು ಎಳೆಯುವುದು ಬಿಟ್ಟು ಸಮಾಜದ ಪ್ರಗತಿಗೆ ಶ್ರಮಿಸಬೇಕು. ಒಗ್ಗಟ್ಟಾಗಿ ಹೋರಾಟಿದಾಗ ಮಾತ್ರ ಸಮುದಾಯ ಬಲಿಷ್ಠವಾಗುತ್ತದೆ ಎಂದರು.
ಶ್ರೀ ಮರಳಸಿದ್ಧ ಸ್ವಾಮಿಜಿ ಆಶೀರ್ವಚನ ನೀಡಿ, ಹೇಡಿಯಾಗಿ ನೂರು ವರ್ಷ ಬದುಕುವುದಕ್ಕಿಂತ ರಾಯಣ್ಣನಂತೆ ವೀರನಾಗಿ ಒಂದು ದಿನ ಬಾಳುವುದು ಶ್ರೇಷ್ಠ. ನಿಮ್ಮ ಮಕ್ಕಳನ್ನು ರಾಯಣ್ಣನಂತೆ ಬೆಳೆಸಿ ಎಂದು ಕರೆ ನೀಡಿದರು.
ಜಿಪಂ ಮಾಜಿ ಸದಸ್ಯ ಸಿದ್ದರಾಮ ಪ್ಯಾಟಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂದ ಅಧ್ಯಕ್ಷ ಬಾಲಾಜಿ ಘೋಡಕೆ, ವಿಜಯಲಕ್ಷ್ಮೀ ಎಸ್​.ಮುಗಳಿ, ಅರ್ಜುನ ಹತ್ತಿ ಮಾತನಾಡಿದರು.
ಮಾಡಿಯಾಳದ ಶ್ರೀ ಡಾ.ಚನ್ನಮಲ್ಲ ಶಿವಾಚಾರ್ಯರು ಉದ್ಘಾಟಿಸಿದರು.
ಪ್ರಭುರಾಯ ಪೂಜಾರಿ, ಅವಧೂತಪ್ಪ ಪೂಜಾರಿ, ಅಮೋಸಿದ್ದ ಪೂಜಾರಿ, ಜಿಲ್ಲಾ ಕುರುಬ ನೌಕರರ ಸಂಘದ ಅಧ್ಯಕ್ಷ ಯಲಗುಂಡ ಹಿರೇಕುರುಬ, ಪ್ರಮುಖರಾದ ಶಿವಯೋಗಿ ಇಟಗಿ, ಕಲ್ಯಾಣರಾವ ಪಾಟೀಲ್​, ಬೀರಣ್ಣ ವಗ್ಗಿ, ಚನ್ನು ಬಿರಾದಾರ, ಸಂಗಣ್ಣ ಮುದ್ದಡಗಿ, ಸುಭಾಷ ಪಾಟೀಲ್​, ರೇವಣಸಿದ್ದ ಶ್ರೀಗಣಿ, ಸಿದ್ದರಾಮ ಶಿರೋಳ, ಬಸವರಾಜ ಕೌಲಗಿ, ಮಲ್ಲಿನಾಥ ಸುಗೂರ, ಅನೀಲ ನಾಯ್ಕೋಡಿ, ಯಲ್ಲಾಲಿಂಗ ಶಿರೂರ, ಗುರುಶಾಂತ ದುತ್ತರಗಿ, ಸೂರ್ಯಕಾಂತ, ಯಲ್ಲಮ್ಮ ಪೂಜಾರಿ, ವಿಠ್ಠಲ ಪೂಜಾರಿ ಇತರರಿದ್ದರು.
ಹಣಮಂತ ಶಿರೂರ ಸ್ವಾಗತಿಸಿದರು. ಗಂಗಾಧರ ಶಿರೂರ ನಿರೂಪಣೆ ಮಾಡಿದರು. ಸಿದ್ದಲಿಂಗ ಉಪ್ಪಾರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net