ದೃಷ್ಟೀಹಿನರ ಸಬಲೀಕರಣ ಅಗತ್ಯ

ಕಲಬುರಗಿ ಸಿಯುಕೆನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಡಾ.ಉದಯ್​ ಕಿರಣ್​ ಕೆ.ಟಿ, ಆನಂದ ದಂಡೋತಿ, ಸಿದ್ದರಾಮ ಸೀತನೂರ್​, ಡಾ.ಪಿ.ಎಸ್​.ಕಟ್ಟಿಮನಿ, ಪ್ರೊ.ವೆಂಕಟರಮಣ ದೊಡ್ಡಿ, ಡಾ.ದೀತ್​, ಡಾ.ರಾಜ್​ಕುಮಾರ್​ ಕಲ್ಯಾಣಿ, ಡಾ.ಪ್ರಕಾಶ್​ ಎಸ್​.ಎನ್​ ಇತರರಿದ್ದರು.
ಕಲಬುರಗಿ ಸಿಯುಕೆನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಡಾ.ಉದಯ್​ ಕಿರಣ್​ ಕೆ.ಟಿ, ಆನಂದ ದಂಡೋತಿ, ಸಿದ್ದರಾಮ ಸೀತನೂರ್​, ಡಾ.ಪಿ.ಎಸ್​.ಕಟ್ಟಿಮನಿ, ಪ್ರೊ.ವೆಂಕಟರಮಣ ದೊಡ್ಡಿ, ಡಾ.ದೀತ್​, ಡಾ.ರಾಜ್​ಕುಮಾರ್​ ಕಲ್ಯಾಣಿ, ಡಾ.ಪ್ರಕಾಶ್​ ಎಸ್​.ಎನ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿಕೆ
  • ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ಕಾರ್ಯಾಗಾರ
ಕಲಬುರಗಿ: ಆಧುನಿಕ ತಂತ್ರಜ್ಞಾನದ ಮೂಲಕ ದೃಷ್ಟೀಹಿನರನ್ನು ಸಮಾಜದ ಮುಖ್ಯವಾಹಿನಿ ಮತ್ತು ಆರ್ಥಿಕತೆಯೊಂದಿಗೆ ಸಂಯೋಜಿಸಬೇಕಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಕಲಬುರಗಿಯ ನವ ಕಲ್ಯಾಣ ಜ್ಯೋತಿ ಜನಪರ ವೇದಿಕೆಯ ಸಹಯೋಗದೊಂದಿಗೆ ವಿಶ್ವವಿದ್ಯಾಲಯದ ಸೆಂಟ್ರಲ್​ ಲೈಬ್ರರಿ ಬುಧವಾರ ಆಯೋಜಿಸಿದ್ದ ದೃಷ್ಟಿ ಮೀರಿದ ದೃಷ್ಟಿ: ದೃಷ್ಟೀಹಿನರನ್ನು ಸಬಲೀಕರಣಗೊಳಿಸುವುದು ಎಂಬ ವಿಷಯ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪ್ರಾದೇಶಿಕ ಭಾಷೆಗಳನ್ನು ಬೆಂಬಲಿಸುವ, ದೃಷ್ಟೀಹಿನ ಬಳಕೆದಾರರಿಗೆ ಪ್ರವೇಶಸಾಧ್ಯತೆ ಹೆಚ್ಚಿಸುವ ಬಹುಭಾಷಾ ಹಾರಿಜಾನ್​ ಒಸಿಆರ್​ ಸಾಫ್ಟ್​ವೇರ್​ಗೂ ಚಾಲನೆ ನೀಡಿ, ನಾವು ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್​ ಉಪಕರಣಗಳ ಉಪಯುಕ್ತತೆಯನ್ನು ಮೌಲ್ಯಮಾಪನ ಮಾಡಬೇಕು. ಮಿಷನ್​ ವಿಕಸಿತ ಭಾರತದೊಂದಿಗೆ ಜೋಡಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಸಿಯುಕೆಯ ಸಂಗೀತ ವಿಭಾಗದ ಸಹಪ್ರಾಧ್ಯಾಪಕ ಡಾ.ಉದಯ್​ ಕಿರಣ್​ ಕೆ.ಟಿ. ಮಾತನಾಡಿ, ವಿಶ್ವವಿದ್ಯಾಲಯದ ಬ್ರೈಲ್​ ಸಂಪನ್ಮೂಲ ಕೇಂದ್ರವು ದೃಷ್ಟೀಹಿನರ ಬೋಧನೆ ಮತ್ತು ಕಲಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ವೈಯಕ್ತಿಕವಾಗಿ ನಾನು ಕೇಂದ್ರಕ್ಕೆ ಕೊಡುಗೆ ನೀಡಲು ಬದ್ಧನಾಗಿದ್ದೇನೆ. ಲೂಯಿಸ್​ ಬ್ರೈಲ್​ ಮತ್ತು ಜ್ಞಾನಯೋಗಿ ಡಾ.ಪಂಡಿತ್​ ಪುಟ್ಟರಾಜ್​ ಗವಾಯಿ ದೃಷ್ಟೀಹಿನ ಸಮುದಾಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಕಲಬುರಗಿಯ ನವ ಕಲ್ಯಾಣ ಜ್ಯೋತಿ ಜನಪರ ವೇದಿಕೆಯ ಅಧ್ಯಕ್ಷ ಸಿದ್ದರಾಮ ಸೀತನೂರ್​, ಲೂಯಿಸ್​ ಬ್ರೈಲ್​ ಮತ್ತು ಜ್ಞಾನಯೋಗಿ ಡಾ.ಪಂಡಿತ್​ ಪುಟ್ಟರಾಜ್​ ಗವಾಯಿ ಅವರ ದೂರದೃಷ್ಟಿಯ ಕೆಲಸದ ಕುರಿತು ಮಾತನಾಡಿದರು.
ಕಲಬುರಗಿಯ ಗುಲ್ಬರ್ಗ ಉತ್ತರ ರೋಟರಿ ಕ್ಲಬ್​ ಅಧ್ಯಕ್ಷ ಆನಂದ ದಂಡೋತಿ, ಕ್ಲಬ್​ನ ಉಪಕ್ರಮಗಳ ಬಗ್ಗೆ ಚರ್ಚಿಸಿ, 20 ಜನ ದೃಷ್ಟೀಹಿನರಿಗೆ ವಾಕಿಂಗ್​ ಸ್ಟಿಕ್​ ವಿತರಿಸಿದರು.
ವಿಶ್ವವಿದ್ಯಾಲಯದ ಗ್ರಂಥಪಾಲಕ ಡಾ.ಪಿ.ಎಸ್​.ಕಟ್ಟಿಮನಿ ಸ್ವಾಗತಿಸಿ, ಕಾರ್ಯಾಗಾರದ ಉದ್ದೇಶ ವಿವರಿಸಿದರು. ಸಿಯುಕೆಯಲ್ಲಿ ಇಬ್ಬರು ಶಾಶ್ವತ ದೃಷ್ಟೀಹಿನ ಅಧ್ಯಾಪಕ ಸದಸ್ಯರಾದ ಡಾ.ಉದಯ್​ ಕಿರಣ್​ ಕೆ.ಟಿ. ಮತ್ತು ಜಯಂತ್​ ಬರುಹಾ ಅವರನ್ನು ನೇಮಿಸಿದ್ದಕ್ಕಾಗಿ ಕುಲಪತಿಗಳಿಗೆ ವಿಶೇಷ ಧನ್ಯವಾದ ಅರ್ಪಿಸಿದರು.
ರಾಜ್​ಕುಮಾರ್​ ಕಲ್ಯಾಣಿ ನಿರೂಪಿಸಿದರೆ, ಡಾ.ಪ್ರಕಾಶ್​ ಎಸ್​.ಎನ್​. ವಂದಿಸಿದರು. ಪ್ರೊ.ವೆಂಕಟರಮಣ ದೊಡ್ಡಿ, ಡಾ.ದೀತ್​, ಸಾಗರ, ಸತೀಶ, ಬಸವರಾಜ, ಶಿವಕುಮಾರ ಮತ್ತು 75 ದೃಷ್ಟೀಹಿನರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
"

ಕಲ್ಯಾಣ ಕರ್ನಾಟಕ ಪ್ರದೇಶದ ದೃಷ್ಟೀಹಿನ ವಿದ್ಯಾರ್ಥಿಗಳಿಗೆ ಸಿಯುಕೆ ಮುಕ್ತವಾಗಿದೆ. ವಿಶ್ವವಿದ್ಯಾಲಯದಲ್ಲಿ ಎನ್​ಇಪಿ&2020 ಅನುಷ್ಠಾನದ ಮೂಲಕ ದೃಷ್ಟೀಹಿನರು ಸೇರಿ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳಿಗೆ ಆದ್ಯತೆ ನೀಡಲಾಗಿದೆ.

ಪ್ರೊ.ಬಟ್ಟು ಸತ್ಯನಾರಾಯಣ,

ಕುಲಪತಿ, ಸಿಯುಕೆ ಕಲಬುರಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net