ಬಿಟಿಡಿಎ ಕಚೇರಿ ಬಂದ್ ಮಾಡಿ ನೌಕರರ ಪ್ರತಿಭಟನೆ

ಬಾಗಲಕೋಟೆ ‌ನಗರದ ಬಿಟಿಡಿಎ ಎದುರು ಸಿಬ್ಬಂದಿ- ಅಭಿನಂದನೆಗಳು ಪ್ರತಿಭಟನೆ ನಡೆಸಿದರು.
ಬಾಗಲಕೋಟೆ ‌ನಗರದ ಬಿಟಿಡಿಎ ಎದುರು ಸಿಬ್ಬಂದಿ- ಅಭಿನಂದನೆಗಳು ಪ್ರತಿಭಟನೆ ನಡೆಸಿದರು.
Published on
ಬಾಗಲಕೋಟೆ: ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಽಕಾರ ನೌಕರರೊಬ್ಬರ ಮೇಲೆ ಚಪ್ಪಲಿಯಿಂದ ಹೊಡೆದು ಹಲ್ಲೆ ಮಾಡಿದ ಬಸಪ್ಪ ದೊಡ್ಡಮನಿ ಅವರನ್ನು ಬಂಽಸಬೇಕು ಎಂದು ಆಗ್ರಹಿಸಿ ಬಿಟಿಡಿಎ ಸಿಬ್ಬಂದಿ ಕಚೇರಿ ಬಂದ್ ಮಾಡಿ ಸೋಮವಾರ ಪ್ರತಿಭಟನೆ ನಡೆಸಿದರು.
ಬಿಟಿಡಿಎದ ಮುಖ್ಯದ್ವಾರ ಬಂದ್ ಮಾಡಿ ಧರಣಿ ಆರಂಭಿಸಿದ ಸಿಬ್ಬಂದಿ, ಬೇಕೇ ಬೇಕು ನ್ಯಾಯ ಬೇಕು ಎಂಬ ಘೋಷಣೆ ಕೂಗಿದರು. ನೌಕರರಿಗೆ ರಕ್ಷಣೆ ಇಲ್ಲದಂತಾಗಿದೆ. ಸೂಕ್ತ ರಕ್ಷಣೆ ನೀಡದಿದ್ದರೆ, ಕೆಲಸ ಹೇಗೆ ಮಾಡಬೇಕು ಎಂದು ಪ್ರಶ್ನಿಸಿದರು. ಹಲ್ಲೆಗೆ ಒಳಗಾದ ನೌಕರನ ಕುಟುಂಬದ ಸದಸ್ಯರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪರಿಹಾರ ವಿತರಣೆ ಆಗಿರದಿದ್ದರೆ, ಅಽಕಾರಿಗಳನ್ನು ಕೇಳಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿತ್ತು. ಅದು ಬಿಟ್ಟು, ಪರಿಹಾರ ವಿಷಯಕ್ಕೆ ಸಂಬAಧಪಡದ ನೌಕರರೊಬ್ಬರ ಮೇಲೆ ಹಲ್ಲೆ ಮಾಡಿದ್ದು ಏಕೆ? ಹಲ್ಲೆ ಮಾಡಿದವರನ್ನು ಬಂಽಸಿಲ್ಲ. ನಾಳೆ ಬಂದು ಇನ್ನೊಬ್ಬರು ಹಲ್ಲೆ ಮಾಡಿದರೆ ಏನು ಮಾಡಬೇಕು. ಹಲ್ಲೆ ಮಾಡಿದವರ ವಿರುದ್ಧ ಕ್ರಮ ಆಗಲೇಬೇಕು ಎಂದು ಒತ್ತಾಯಿಸಿದರು.
ಕರ್ತವ್ಯದ ಮೇಲಿದ್ದ ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿದೆ. ಕೊಲೆ ಯತ್ನ, ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರು ನೀಡಲಾಗಿದೆ. ಆದರೂ, ಪೊಲೀಸರು ೭ ವರ್ಷದೊಳಗಿನ ಅಪರಾಧ ಪ್ರಕರಣಗಳಿವೆ ಎಂದು ಹಲ್ಲೆ ಮಾಡಿದವರನ್ನು ವಿಚಾರಣೆ ಮಾಡಿ, ಬಿಟ್ಟು ಕಳುಹಿಸಿದ್ದಾರೆ. ಜೀವ ಬೆದರಿಕೆ ಇರುವುದರಿಂದ ಕೂಡಲೇ ಬಂಽಸಬೇಕು ಎಂದು ಆಗ್ರಹಿಸಿದರು.
ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅವರೊಂದಿಗೆ ಜಿಲ್ಲಾಽಕಾರಿ ಕಚೇರಿಗೆ ಬಂದ ಬಿಟಿಡಿಎ ಹಾಗೂ ಸರ್ಕಾರಿ ನೌಕರರ ಸಂಘದ ಮುಖಂಡರು ಜಿಲ್ಲಾಽಕಾರಿ ಸಂಗಪ್ಪ ಅವರನ್ನು ಭೇಟಿಯಾಗಿ ಕೂಡಲೇ ಹಲ್ಲೆ ಮಾಡಿದವರನ್ನು ಬಂಽಸಬೇಕು ಎಂದು ಮನವಿ ನೀಡಿದರು. ನಂತರ ಅಲ್ಲಿಂದ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಸಿದ್ದಾರ್ಥ ಗೋಯಲ್ ಅವರನ್ನು ಭೇಟಿಯಾಗಿ ಬಂಧನಕ್ಕೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಟಿಡಿಎ ಮುಖ್ಯ ಎಂಜಿನಿಯರ್ ಚಂದ್ರಹಾಸ ಬಂಡಿ, ಆರ್‌ಒ ಪ್ರಶಾಂತ ಬಾರಿಗಿಡದ, ಇಇ ಪಾತ್ರೋಟ, ಸರ್ಕಾರಿ ನೌಕರರ ಸಂಘದ ಸಂಜೀವರಡ್ಡಿ ಸತ್ಯರಡ್ಡಿ, ವಿಠ್ಠಲ ವಾಲೀಕಾರ, ಗೋಪಾಲ ನೀಲನಾಯಕ, ಸುರೇಶ ಇಂಜನಗೇರಿ ಮತ್ತಿತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net