ಸ್ಮಾರ್ಟ್ ಮೀಟರ್ಗಳ ದರ ಸಿಂಗಲ್ ಫೇಸ್ಗೆ (ಬಾಕ್ಸ್ ಸಹಿತ) 4,983 ರೂ., ತ್ರಿಫೇಸ್ಗೆ (ಬಾಕ್ಸ್ ಸಹಿತ) 8,800 ರೂ. ಹಾಗೂ ತ್ರಿಫೇಸ್ ಸಿ.ಟಿ. ಆಪರೇಟೆಡ್ ಸ್ಮಾರ್ಟ್ ಮೀಟರ್ಗೆ (ಬಾಕ್ಸ್ ಸಹಿತ) 27,500 ರೂ. (ಜಿಎಸ್ಟಿ ಸೇರಿ) ನಿಗದಿಯಾಗಿದೆ. ಗ್ರಾಹಕರಿಗೆ ಪ್ರಿಪೇಡ್ ಅಥವಾ ಪೋಸ್ಟ್ಪೇಡ್ ಆಯ್ಕೆ ನೀಡಲಾಗಿದೆ. ಆದರೆ ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯವಾಗಿದೆ.