ನಂತರ ನಡೆದ ಚುನಾವಣೆಯಲ್ಲಿ ಒಟ್ಟು 14 ಸ್ಥಾನಗಳಿಗೆ 40 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಶಾಲೆಯ ಶಿಕ್ಷಕರು ಪ್ರತಿಯೊಂದು ಹಂತದ ಚುನಾವಣೆಯ ಪ್ರಕ್ರಿಯೆಯನ್ನು ಬ್ಯಾಲೆಟ್ ಪೇಪರ್ ಮೂಲಕ ವ್ಯವಸ್ಥಿತ ರೀತಿಯಲ್ಲಿ ನಡೆಸಿ, 14 ಜನ ವಿದ್ಯಾರ್ಥಿಗಳನ್ನು ಶಾಲಾ ಸಂಸತ್ಗೆ ಆಯ್ಕೆ ಮಾಡಿದರು. 10ನೇ ತರಗತಿ ಪ್ರಭುಗೌಡ ಶಾಲಾ ಮುಖ್ಯಮಂತ್ರಿಯಾಗಿ, ಸಿದ್ದಮ್ಮ ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಉಳಿದಂತೆ ಅಶ್ವಿನಿ, ದೇವಮ್ಮ, ಶ್ರೀನಿಧಿ, ಭಾಗ್ಯಶ್ರೀ, ಹಣಮಂತ, ಕುಮಾರಗೌಡ, ವಿಜಯ, ರತ್ಮಮ್ಮ, ಅಭಿಷೇಕ, ರೇಣುಕಾ, ಶ್ರೀದೇವಿ ಶಾಲಾ ಸಂಸತ್ನ ಮಂತ್ರಿಮಂಡಲದ ಸದಸ್ಯರಾಗಿ ಆಯ್ಕೆಯಾದರು.