ಬಸವಕಲ್ಯಾಣ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕು ಸಮಿತಿ ಪದಾಧಿಕಾರಿಗಳನ್ನು ಸಂದ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಜಯರಾಮ್ ಗಾಯಕವಾಡ (ಅಧ್ಯಕ್ಷ), ಸಿದ್ದರಾಮ ಹಾರ್ಕೂಡೆ (ಉಪಾಧ್ಯಕ್ಷ), ಮಹಾದೇವ ಮಠಪತಿ (ಪ್ರಧಾನ ಕಾರ್ಯದರ್ಶಿ), ರಾಕೇಶ್ ಪುರುವಂತ್ ( ಕಾರ್ಯದರ್ಶಿ), ಫಿರೋಜ್ ಖಾನ್ (ಸಂಘಟನಾ ಕಾರ್ಯದರ್ಶಿ), ಹಿದಾಯತ್ ಖಾನ್, (ಕೋಶಾಧ್ಯಕ್ಷ), ಇಸ್ಮಾಯಿಲ್, ಶ್ರೀಕಾಂತ ಹರಳೆ, ಜಗದೀಶ, ಸಚಿನ್, ಗುರುಪಾದ್ ಸ್ವಾಮಿ (ನಿರ್ದೇಶಕರು).