ಸ್ವಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ, ಬೀದರ್ ಗುರುನಾನಕ ದೇವ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿದ ಬಳಿಕ 2020ರಿಂದ 2023ರವರೆಗೆ ಡಿಆರ್ಡಿಒದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿದರು. ನಂತರ ಸ್ಕೆರೂಟ್ ಏರೋಸ್ಪೇಸ್ ಖಾಸಗಿ ಸಂಸ್ಥೆಯಲ್ಲಿ ಕ್ಯಾಡ್ ಆ್ಯಂಡ್ ಕಾನ್ಫಿಗರೇಶನ್ ವಿಭಾಗದಲ್ಲಿ ರಚನಾತ್ಮಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸುವ ಮೂಲಕ ವಿಕ್ರಮ್-&1 ತಂಡದ ಸದಸ್ಯರಾಗಿ ರಾಕೆಟ್ ಇಂಜಿನ್ ಪರೀಕ್ಷೆ, ವಿನ್ಯಾಸ ಮತ್ತು ಅಭಿವೃದ್ಧಿ ಹಂತದಲ್ಲಿ ತಾಂತ್ರಿಕ ಕೌಶಲ ಪ್ರದರ್ಶಿಸಿ ದೇಶ ಹೆಮ್ಮೆ ಪಡುವಂಥ ಕಾರ್ಯದಲ್ಲಿ ಭಾಗಿಯಾಗಿ ನಾಡಿಗೆ ಕೀರ್ತಿ ತಂದಿದ್ದಾರೆ.