ಅಂಗಾಂಗ ದಾನದಿಂದ ಉಳಿಯಲಿದೆ 8 ಜೀವ

ಚಿತ್ತಾಪುರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಷ್ಟಿ$ಯ ದೇಹಾಂಗದಾನ ಜಾಗೃತಿ ಸಮಿತಿ ಟ್ರಸ್ಟ್​ ತಾಲೂಕು ಅಧ್ಯಕ್ಷ ಬಸವರಾಜ ಬೊಮ್ಮನಳ್ಳಿ ಅವರನ್ನು ಸನ್ಮಾನಿಸಲಾಯಿತು. ಶಿವಾನಂದ ಹೂಗಾರ, ಪ್ರಿಯಾಂಕಾ ಬೊಮ್ಮನಳ್ಳಿ, ರಾಚಪ್ಪ ಬೊಮ್ಮನಳ್ಳಿ, ಮಹಾದೇವ ಇದ್ದರು.

Published on
ಚಿತ್ತಾಪುರ: ಮರಣದ ನಂತರ ವ್ಯಕ್ತಿಯ ಅಂಗಾಂಗ ದಾನ ಮಾಡುವುದರಿಂದ ಎಂಟು ಜನರ ಜೀವ ಉಳಿಸಬಹುದಾಗಿದೆ ಎಂದು ದೇಹಾಂಗದಾನ ಜಾಗೃತಿ ಸಮಿತಿ ಟ್ರಸ್ಟ್​ ಅಧ್ಯಕ್ಷ ಶಿವಾನಂದ ಹೂಗಾರ ಹೇಳಿದರು. ಎಕ್ಸಲೆಂಟ್​ ಕಿರಿಯ, ಹಿರಿಯ ಮತ್ತು ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿ ಟ್ರಸ್ಟ್​, ಬೈಲಹೊಂಗಲದ ಡಾ. ರಾಮಣ್ಣವರ ಚಾರಿಟೇಬಲ್​ ಟ್ರಸ್ಟ್​ ಹಾಗೂ ಶ್ರೀಗುರು ಬಸವ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಭಾರತೀಯ ಅಂಗಾಂಗ ದಾನ ದಿನ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಟ್ರಸ್ಟ್​ ತಾಲೂಕು ಅಧ್ಯಕ್ಷ ಬಸವರಾಜ ಬೊಮ್ಮನಳ್ಳಿ ಅವರನ್ನು ಸತ್ಕರಿಸಲಾಯಿತು. ಉದ್ಯಮಿ ರಾಚಪ್ಪ ಬೊಮ್ಮನಹಳ್ಳಿ, ಮುಖ್ಯಗುರು ಪ್ರಿಯಾಂಕಾ ಬೊಮ್ಮನಳ್ಳಿ, ಪ್ರಮುಖರಾದ ಮಹಾದೇವ, ಅಶ್ವಿನಿ, ವಸಂತ, ಸಾಧನ ಶಿಲ್ಪಿ, ಸುಜಾತಾ, ಅಂಕಿತಾ, ಮಮತಾ, ಆಫ್ರೀನ್​, ಸಲೀಂ, ದೇವರಾಜ, ಪ್ರಶಾಂತ, ಸುನೀತಾ, ಸುಮಾ, ಸಬೇರಾ, ಅನ್ನಪೂರ್ಣ, ನಾಗರಾಜ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net