ಚಿಂಚೋಳಿ ತಾಲೂಕಿನ ಗಾರಂಪಳ್ಳಿಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್ ಭೇಟಿ ನೀಡಿ ಕಸ್ಕೊಟಾ ಕಳೆ ತಳಿಯನ್ನು ವೀಕ್ಷಿಸಿದರು. ವೀರಶೆಟ್ಟಿ ರಾಠೋಡ್, ಅಭಿಲಾಷ ಸುಬೇದಾರ, ಇಮ್ರಾನ್ ಅಲಿ, ಗೋಪಾಲ ಗಾರಂಪಳ್ಳಿ ಇತರರಿದ್ದರು. 1103 ಚಿಂಚೋಳಿ 01(ಎ)/ ಕಸ್ಕೊಟಾ ತಳಿಯಿಂದ ರೈತರು ಅನುಭವಿಸುತ್ತಿರುವ ಸಮಸ್ಯೆ ಕುರಿತು ವಿಜಯವಾಣಿ ದಿನಪತ್ರಿಕೆ ಮಾ.6ರಂದು ಪ್ರಕಟಿಸಿದ್ದ ವಿಶೇಷ ವರದಿ.
ಚಿಂಚೋಳಿ: ಕಸ್ಕೊಟಾ ಕಳೆ ತಳಿ ನಿಮೂರ್ಲನೆಗೆ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಕೃಷಿ ತಜ್ಞರ ತಂಡ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಶ್ರೀ ವರದಿ ಸಲ್ಲಿಸಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್ ಹೇಳಿದರು.
ಗಾರಂಪಳ್ಳಿ ಗ್ರಾಮಕ್ಕೆ ಬುಧವಾರ ಭೇಟಿ ನೀಟಿ ಅರಬ್ ಮೂಲದ ಕಸ್ಕೊಟಾ ಕಳೆ ತಳಿಯನ್ನು ಪರಿಶೀಲಿಸಿದ ಅವರು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಬಗ್ಗೆ ತಜ್ಞರಿಗೆ ಮತ್ತೊಂದು ಪತ್ರ ಬರೆಯಲಾಗಿದ್ದು, ಶ್ರೀ ಜಮೀನುಗಳಿಗೆ ಭೇಟಿ ನೀಡಿ ಸಂಶೋಧನೆ ನಡೆಸುವಂತೆ ಮನವಿ ಮಾಡಿದ್ದೇನೆ. ಕಸ್ಕೊಟಾದಿಂದ ಬೆಳೆ ಕಳೆದುಕೊಂಡವರಿಗೆ ಪರಿಹಾರ ಕಲ್ಪಿಸುವುದು ಹಾಗೂ ಔಷಧಿ ಕಂಡುಹಿಡಿಯುವುದು ಸರ್ಕಾರದ ಹಂತದಲ್ಲಿದೆ ಎಂದರು.
ಕಸ್ಕೊಟಾ ಕಳೆ ತಳಿಯಿಂದ ಆಗುತ್ತಿರುವ ಹಾನಿ ಹಾಗೂ ರೈತರ ಸಮಸ್ಯೆಯನ್ನು ಉನ್ನತ ಅಧಿಕಾರಿಗಳು ಹಾಗೂ ಸಂಬಂಧಪಟ್ಟದ ಸಚಿವರ ಗಮನಕ್ಕೆ ತರಲಾಗಿದೆ. ಶ್ರೀದಲ್ಲಿಯೇ ಈ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಲಾಗುವುದು. ರೈತಾಪಿ ವರ್ಗ ಧೈರ್ಯದಿಂದ ಇರಬೇಕು, ನಿಮ್ಮೊಂದಿಗೆ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಇದೆ ಎಂದು ಭರವಸೆ ನೀಡಿದರು.
ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೋಡ್, ಪ್ರಮುಖರಾದ ಅಭಿಲಾಷ ಸುಬೇದಾರ್, ಇಮ್ರಾನ್ ಅಲಿ, ಗೋಪಾಲ ಗಾರಂಪಳ್ಳಿ, ಸಂಗಪ್ಪ ಚಿಂಚೋಳಿ, ಮರೇಪ್ಪ, ತಿಪ್ಪಣ್ಣ ಜಮಾದಾರ, ಶಿವಕುಮಾರ, ರಾಮಯ್ಯ ಬೋವಿ, ಪ್ರಭು ಮುಸ್ತರಿ, ವಿನಾಯತ್ ಅಲಿ ಇತರರಿದ್ದರು.
ಔಷಧಿ ಹುಡುಕಿ, ಇಲ್ಲವೇ ಪರಿಹಾರ ಕೊಡಿ
ಈಗಾಗಲೇ ಅತಿವೃಷ್ಟಿಯಿಂದ ಬೆಳೆಯನ್ನು ಕಳೆದುಕೊಂಡು ರೋಡಿಗೆ ಬಂದಿದ್ದೇವೆ. ಇದೀಗ ಕಸ್ಕೊಟಾ ಕಾಟದಿಂದಾಗಿ ಅಳಿದುಳಿದ ಬೆಳೆಯೂ ಹಾಳಾಗಿದೆ. ಯಾವುದೇ ಬಿತ್ತನೆ ಮಾಡಬೇಕು ಎಂಬುದು ತೋಚದಂತಾಗಿದೆ. ತೊಗರಿ, ಹೆಸರು, ಉದ್ದು, ಈರುಳ್ಳಿ, ವಿಳ್ಯದೆಲೆ ಸೇರಿ ಪ್ರತಿ ಬೆಳೆಗೂ ಕಸ್ಕೊಟಾ ಕಳೆ ವಕ್ಕರಿಸುತ್ತಿದೆ. ಕೇವಲ 10&15 ದಿನಗಳಲ್ಲಿಯೇ ಬೆಳೆಗಳು ಸಂಪೂರ್ಣ ಹಾಳಾಗುತ್ತಿವೆ. ಹೀಗಾಗಿ ಕೂಡಲೇ ಇದಕ್ಕೆ ಔಷಧ ನೀಡಿ, ಇಲ್ಲದಿದ್ದರೆ ಸೂಕ್ತ ಪರಿಹಾರಕ್ಕಾಗಿ ಸರ್ಕಾರಕ್ಕೆ ಶಿಪಾರಸು ಮಾಡಿ ಎಂದು ರೈತರು ಒತ್ತಾಯಿಸಿದರು.
ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದ್ದ ವಿಜಯವಾಣಿ
ಕಸ್ಕೊಟಾ ಕಳೆ ತಳಿಯಿಂದ ಚಿಂಚೋಳಿ ಹಾಗೂ ಸೇಡಂ ಮತಕ್ಷೇತ್ರದ ರೈತಾಪಿ ವರ್ಗ ಅನುಭವಿಸುತ್ತಿರುವ ಸಮಸ್ಯೆಗೆ ವಿಜಯವಾಣಿ ಧ್ವನಿಯಾಗಿದೆ. ಮಾ.6ರಂದು "ರೈತರನ್ನು ಕಾಡುತ್ತಿರುವ ಕಸ್ಕೊಟಾ' ತಲೆಬರಹದಡಿ ವಿಸತ ವರದಿಯನ್ನು ಪ್ರಕಟಿಸಿ ರೈತರ ಪರದಾಟದ ಬಗ್ಗೆ ಬೆಳಕು ಚೆಲ್ಲಿತ್ತು. ಈ ವರದಿಯಿಂದ ಜಿಲ್ಲಾಡಳಿತ ಎಚ್ಚೆತ್ತಿದ್ದು, ರೈತರ ಜಮೀನಿಗೆ ಭೇಟಿ ನೀಡಿ ಸಮಸ್ಯೆ ಆಲಿಸುವ ಕೆಲಸ ಮಾಡುತ್ತಿದೆ. ವಿಜಯವಾಣಿ ಕಾರ್ಯಕ್ಕೆ ರೈತಾಪಿ ವರ್ಗ ಮೆಚ್ಚುಗೆ ವ್ಯಕ್ತಪಡಿಸಿದ್ದು, ರೈತಪರ ಕಾಳಜಿಗೆ ಧನ್ಯವಾದ ತಿಳಿಸಿದ್ದಾರೆ.