ಮಕ್ಕಳಲ್ಲಿ ಶಿಕ್ಷಣದ ಹಸಿವು ಹೆಚ್ಚಿಸುವ ಕೆಲಸವಾಗಲಿ

ಚಿತ್ತಾಪುರದಲ್ಲಿ ತಾಲೂಕು ಅನುದಾನ ರಹಿತ (ಖಾಸಗಿ) ಶಿಕ್ಷಣ ಸಂಸ್ಥೆ ಮತ್ತು ಆಡಳಿತ ಮಂಡಳಿಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಸಾಧಕರಿಗೆ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಶ್ರೀ ಸಿದ್ಧಲಿಂಗ ಸ್ವಾಮೀಜಿ, ನಾಗರೆಡ್ಡಿ ಪಾಟೀಲ್​, ಡಾ.ಫಾರೂಕ್​ ಮಣೂರ, ಜಗದೇವ ದಿಗ್ಗಾಂವಕರ್​, ರವಿ ಕುಲಕರ್ಣಿ, ಶ್ರೀನಿವಾಸ ಪೆಂದು, ಅನ್ವರ್​ ಇತರರಿದ್ದರು.
ಚಿತ್ತಾಪುರದಲ್ಲಿ ತಾಲೂಕು ಅನುದಾನ ರಹಿತ (ಖಾಸಗಿ) ಶಿಕ್ಷಣ ಸಂಸ್ಥೆ ಮತ್ತು ಆಡಳಿತ ಮಂಡಳಿಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಸಾಧಕರಿಗೆ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಶ್ರೀ ಸಿದ್ಧಲಿಂಗ ಸ್ವಾಮೀಜಿ, ನಾಗರೆಡ್ಡಿ ಪಾಟೀಲ್​, ಡಾ.ಫಾರೂಕ್​ ಮಣೂರ, ಜಗದೇವ ದಿಗ್ಗಾಂವಕರ್​, ರವಿ ಕುಲಕರ್ಣಿ, ಶ್ರೀನಿವಾಸ ಪೆಂದು, ಅನ್ವರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಾಗರೆಡ್ಡಿ ಪಾಟೀಲ್​ ಕರದಾಳ ಆಶಯ
  • ಚಿತ್ತಾಪುರದಲ್ಲಿ ಶಿಕ್ಷಕರ ದಿನಾಚರಣೆ
ಚಿತ್ತಾಪುರ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಹಸಿವು ಹೆಚ್ಚಿಸುವ ಕೆಲಸ ಶಿಕ್ಷಕರು ಮಾಡಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿ ಸದಸ್ಯ ನಾಗರೆಡ್ಡಿ ಪಾಟೀಲ್​ ಕರದಾಳ ಹೇಳಿದರು.
ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಅನುದಾನ ರಹಿತ(ಖಾಸಗಿ) ಶಿಕ್ಷಣ ಸಂಸ್ಥೆ ಮತ್ತು ಆಡಳಿತ ಮಂಡಳಿಗಳ ಒಕ್ಕೂಟದಿಂದ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸರ್ಕಾರಿ, ಖಾಸಗಿ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಸ್ಪರ್ಧಾ ಮನೋಭಾವ ಬೆಳೆಸಿಕೊಂಡು ಕಲಿಕೆಗೆ ಒತ್ತು ನೀಡಿದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆ ಫಲಿತಾಂಶ ಹೆಚ್ಚಳವಾಗಲು ಸಾಧ್ಯ ಎಂದರು.
ವಿಧಾನ ಪರಿಷತ್​ ಸದಸ್ಯ ಶಶೀಲ್​ ನಮೋಶಿ, ಅನುದಾನ ರಹಿತ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸುನಿಲ್​ ಹುಡಗಿ, ಮುಖಂಡರಾದ ಲಿಂಗಾರೆಡ್ಡಿಗೌಡ ಭಾಸರೆಡ್ಡಿ, ಸಮಾಜ ಸೇವಕ ಡಾ.ಫಾರೂಕ್​ ಮಣ್ಣೂರ ಮಾತನಾಡಿದರು.
ರಾವೂರಿನ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ, ತಾಲೂಕು ಅಧ್ಯಕ್ಷ ಜಗದೇವ ದಿಗ್ಗಾಂವಕರ್​ ಅಧ್ಯಕ್ಷತೆ ವಹಿಸಿದ್ದರು.
ಖಾಸಗಿ ಸಂಸ್ಥೆಗಳ ತಾಲೂಕು ಪ್ರಧಾನ ಕಾರ್ಯದರ್ಶಿ ರವಿ ಕುಲಕರ್ಣಿ, ಪ್ರಮುಖರಾದ ಶ್ರೀನಿವಾಸ ಪೆಂದು, ಅನ್ವರ್​, ವೆಂಕಟೇಶ ಕುಲಕರ್ಣಿ, ಹಮೀದ್​ ರೀಗಲ್​, ಜಗದೀಶ ಪಾಟೀಲ್​, ಸುರೇಶ ವಿಶ್ವಕರ್ಮ, ಚಂದ್ರಶೇಖರ ಸುಣಗಾರ, ಶಿವರಾಮ ಪವಾರ್​, ಪ್ರಕಾಶ ಹಂಚನಾಳ, ನಾಗರಾಜ ಕುಲಕರ್ಣಿ, ಆಶಾರಾಣಿ, ಸರಿತಾ ಜಳಕಿ, ಇಂದಿರಾ, ಸಂತೋಷ ಪಸಾರ್​, ಮುನ್ನಾ, ಭಾರತಿ ದಾಸ್​ ಇತರರಿದ್ದರು.
ಪ್ರಾಥಮಿಕ ಮತ್ತು ಫ್ರೌಢಶಾಲೆ ಸೇರಿ ಒಟ್ಟು 64 ಶಿಕ್ಷಕರಿಗೆ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಶಿವಕುಮಾರ ಘಾವರಿಯಾ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ಬೊಮ್ಮನಳ್ಳಿ ಸ್ವಾಗತಿಸಿದರು. ಪ್ರದಿಪ ಕುಲಕರ್ಣಿ ನಿರೂಪಣೆ ಮಾಡಿ ವಂದಿಸಿದರು.
"

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬೇರೆ ಶಾಲೆಗಳೊಂದಿಗೆ ಪೈಪೋಟಿ ನಡೆಸಿಕೊಂಡು ಖಾಸಗಿ ಶಾಲೆಗಳು ನಡೆಸುವುದು ಕಷ್ಟಕರ ಕೆಲಸವಾಗಿದೆ. ಸರ್ಕಾರ ಖಾಸಗಿ ಶಾಲೆಗಳಿಗೆ ವಿಧಿಸುತ್ತಿರುವ ಕಠಿಣ ನೀತಿಗಳನ್ನು ಸಡಿಲಗೊಳಿಸಿ ಅವರಿಗೆ ಅನುಕೂಲ ಮಾಡಿಕೊಟ್ಟಲ್ಲಿ ಫಲಿತಾಂಶದಲ್ಲಿ ಸುಧಾರಣೆ ಕಾಣಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net