ಭಾಲ್ಕಿ ಪೂಜ್ಯರಿಂದ ಶೈಕ್ಷಣಿಕ ಕ್ರಾಂತಿ

ಔರಾದ್​ ತಾಲೂಕಿನ ಸಂತಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೀ
ಔರಾದ್​ ತಾಲೂಕಿನ ಸಂತಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೀ
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್​ ಪಾಟೀಲ್​ ಅನಿಸಿಕೆ
  • ಸಂತಪುರದಲ್ಲಿ ಕಾರ್ಯಕ್ರಮ ಭಾಲ್ಕಿ ಪೂಜ್ಯರಿಂದ ಶೈಕ್ಷಣಿಕ ಕ್ರಾಂತಿ
ಔರಾದ್​: ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯರು ಗಡಿಭಾಗದಲ್ಲಿ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಿ ಗುಣಮಟ್ಟದ ಶಿಕ್ಷಣ ಮತ್ತು ಸಂಸ್ಕೃತಿ ನೀಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತ ಶೈಕ್ಷಣಿಕ ಕ್ರಾಂತಿ ಮಾಡುತ್ತಿದ್ದಾರೆ ಎಂದು ತಹಸೀಲ್ದಾರ್​ ಮಹೇಶ ಪಾಟೀಲ್​ ಹೇಳಿದರು.
ಸಂತಪುರ ಪಟ್ಟಣದ ಅನುಭವ ಮಂಟಪದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ 103ನೇ ತಿಂಗಳ ಅನುಭವ ಮಂಟಪ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸ್ಥಾಪಿಸಿದ ಸಂಸ್ಥೆಯಲ್ಲಿ ಸಂಸ್ಕಾರದೊಂದಿಗೆ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಹೀಗಾಗಿ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಮಕ್ಕಳು ಅದ್ಭುತ ಸಾಧನೆ ಮಾಡುತ್ತಿದ್ದಾರೆ ಎಂದರು.
ಇಲ್ಲಿನ ಸಿದ್ದರಾಮೇಶ್ವರ ಕಾಲೇಜು ಜಿಲ್ಲೆ ಮತ್ತು ತಾಲೂಕಿಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಎಂಟು ವರ್ಷದಿಂದ ದ್ವೀತಿಯ ಪಿಯುಸಿಯಲ್ಲಿ 100ಕ್ಕೆ ನೂರು ಫಲಿತಾಂಶ ಮತ್ತು ಅನುಭವ ಮಂಟಪ ಗುರುಕುಲ ಪ್ರೌಢಶಾಲೆ ತಾಲೂಕಿಗೆ ಪ್ರಥಮ ಸ್ಥಾನದೊಂದಿಗೆ 16 ವರ್ಷದಿಂದ ಪ್ರತಿಶತ ಫಲಿತಾಂಶ ಪಡೆಯುತ್ತಿರುವುದರ ಸಂಪೂರ್ಣ ಶ್ರೇಯಸ್ಸು ಭಾಲ್ಕಿ ಪಟ್ಟದೇವರಿಗೆ ಸಲ್ಲುತ್ತದೆ ಎಂದು ಹೇಳಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ವಿದ್ಯಾ ಸಂಸ್ಥೆಗಳನ್ನು ತೆರೆದು ಮಕ್ಕಳ ಭವಿಷ್ಯ ರೂಪಿಸುತ್ತಿದ್ದಾರೆ ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ರತಿಕಾಂತ ಸ್ವಾಮಿ, ಡಾ.ಸಂಜೀವಕುಮಾರ ಜುಮ್ಮಾ ಮಾತನಾಡಿದರು.
ಗುತ್ತಿಗೆದಾರ ರಾಜಕುಮಾರ ಮಾಳಗೆ ಗುರುಬಸವ ಪೂಜೆ ನೆರವೇರಿಸಿದರು. ಡಾ.ಅಭಿಷೇಕ ಸ್ವಾಮಿ, ಬಸವರಾಜ ಬಿರಾದಾರ್​ ಇತರರಿದ್ದರು. ಪ್ರಾಂಶುಪಾಲ ನವೀಲಕುಮಾರ ಉತ್ಕಾರ ಸ್ವಾಗತಿಸಿದರು. ಸಂಗಮೇಶ ಬ್ಯಾಳೆ ನಿರೂಪಣೆ ಮಾಡಿದರು. ಮುಖ್ಯಗುರು ಶಿವಕುಮಾರ ಹಿರೇಮಠ ವಂದಿಸಿದರು. ಹಾವಗಿರಾವ ಶೆಂಬೆಳ್ಳಿ ಮತ್ತು ಗೋವಿಂದರಡ್ಡಿ ವಚನ ಸಂಗೀತ ನಡೆಸಿಕೊಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net