ಮಿಡಕನಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಡಾ.ಮೋಹನ ಭಸ್ಮೆ, ಎಸ್.ವಿ .ಕುಲಕರ್ಣಿ, ಎಸ್.ಬಿ .ಹನುಮಂತನವರ ಇತರರಿದ್ದರು.
ಮಮದಾಪುರ: ಮಕ್ಕಳ ಶೈಣಿಕ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕಲಿಕಾ ಸಾಮರ್ಥ್ಯ ವೃದ್ಧಿಸಲು ಕಲಿಕಾ ಹಬ್ಬ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಹಸೀಲ್ದಾರ್ ಡಾ.ಮೋಹನ ಭಸ್ಮೆ ಹೇಳಿದರು.
ಗೋಕಾಕ ತಾಲೂಕಿನ ಮಿಡಕನಟ್ಟಿ ಗ್ರಾಮದ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮೂಹ ಸಂಪನ್ಮೂಲ ಕೇಂದ್ರ ಖನಗಾವ ಕ್ಲಸ್ಟರ್ ಮಟ್ಟದ ಎ್ಎಲ್ಎನ್ ಆಧಾರಿತ ಕಲಿಕಾ ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಪಂ ಇಒ ಪರಶುರಾಮ ಸ್ತೆ, ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುವುದು ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಓದಿನತ್ತ ಆಕರ್ಷಿಸಿ ಜಾಗೃತಿ ಮೂಡಿಸುವುದೇ ಕಲಿಕಾ ಹಬ್ಬದ ಮೂಲ ಆಶಯವಾಗಿದೆ ಎಂದು ತಿಳಿಸಿದರು.
ೇತ್ರ ಸಮನ್ವಯಾಧಿಕಾರಿ ಎಸ್.ವಿ.ಕುಲಕರ್ಣಿ, ದೈಹಿಕ ಶಿಣಾಧಿಕಾರಿ ಎಲ್.ಕೆ.ತೋರಣಗಟ್ಟಿ, ತಾಲೂಕು ಶಿಕರ ಸಂದ ಅಧ್ಯಕ್ಷ ಜಿ.ಆರ್.ಸನದಿ ಮಾತನಾಡಿದರು.
ಸಿಆರ್ಪಿ ನಾಗೇಶ ತಳವಾರ, ಬಿಆರ್ಪಿ ಮಂಜುನಾಥ ಕಂಬಾರ, ಎಂ.ಬಿ.ಪಾಟೀಲ, ಮುಖ್ಯಶಿಕ ಎಸ್.ಬಿ.ಹನಮಂತನ್ನವರ, ತಾಪಂ ಮಾಜಿ ಸದಸ್ಯ ಸಿದ್ಧಪ್ಪ ಸನನಾಯಕ, ಪಿಡಿಒ ಬಸವರಾಜ ದೊಡ್ಡಮನಿ, ಶಿಕರಾದ ಬಿ.ಎನ್.ಮಾಟೋಳ್ಳಿ, ಬಿ. ಎನ್.ಬಸೆಟ್ಟಿ, ಆರ್.ವೈ.ನಾಯ್ಕ, ಡಿ.ಬಿ.ಉಜ್ಜನಕೊಪ್ಪ, ಎಸ್.ಎಚ್.ಯಾಲಕ್ಕಿ ಇತರರಿದ್ದರು.