ಶಿಕ್ಷಣಕ್ಕಿದೆ ಎಲ್ಲರ ಬದುಕು ಬದಲಿಸುವ ಶಕ್ತಿ

ಆಳಂದನಲ್ಲಿ ಧಂಗಾಪುರ ಸರ್ಕಾರಿ ಪ್ರೌಢಶಾಲೆಯ 2000-01ನೇ ಸಾಲಿನ ಹಳೇ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಶಿಕರನ್ನು ಸನ್ಮಾನಿಸಲಾಯಿತು. ಸ್ನೇಹಲತಾ ನಾಡಗೌಡ, ಸತೀಶ ಧಂಗಾಪುರ, ರವೀಂದ್ರ ಕಣ್ಣಿ, ರಾಮಚಂದ್ರ ಸುತಾರ, ಗಂಗಾಬಾಯಿ ಪಾಟೀಲ್​ ಇದ್ದರು.
ಆಳಂದನಲ್ಲಿ ಧಂಗಾಪುರ ಸರ್ಕಾರಿ ಪ್ರೌಢಶಾಲೆಯ 2000-01ನೇ ಸಾಲಿನ ಹಳೇ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಶಿಕರನ್ನು ಸನ್ಮಾನಿಸಲಾಯಿತು. ಸ್ನೇಹಲತಾ ನಾಡಗೌಡ, ಸತೀಶ ಧಂಗಾಪುರ, ರವೀಂದ್ರ ಕಣ್ಣಿ, ರಾಮಚಂದ್ರ ಸುತಾರ, ಗಂಗಾಬಾಯಿ ಪಾಟೀಲ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯಶಿಕ್ಷಕಿ ಸ್ನೇಹಲತಾ ಅನಿಸಿಕೆ
  • ಧಂಗಾಪುರ ಶಾಲೆಯ ಹಳೇ ವಿದ್ಯಾರ್ಥಿಗಳಿಂದ ಗುರುವಂದನೆ
ಆಳಂದ: ಶಿಕ್ಷಣಕ್ಕೆ ಪ್ರತಿಯೊಬ್ಬರ ಭವಿಷ್ಯವನ್ನು ಬದಲಾಯಿಸಬಲ್ಲ ಶಕ್ತಿಯಿದೆ. ಗುರುವಿಲ್ಲದ ಜ್ಞಾನ ಅಪೂರ್ಣ, ಶಿಕ್ಷಕ ವಿದ್ಯಾರ್ಥಿಯ ಜೀವನದ ಶಿಲ್ಪಿಯಾಗಿದ್ದಾನೆ ಎಂದು ಮುಖ್ಯಶಿಕ್ಷಕಿ ಸ್ನೇಹಲತಾ ನಾಡಗೌಡ ಹೇಳಿದರು.
ಖಾಸಗಿ ಹೋಟೆಲ್​ನಲ್ಲಿ ಧಂಗಾಪುರದ ಸರ್ಕಾರಿ ಪ್ರೌಢಶಾಲೆಯ 2000-01ನೇ ಸಾಲಿನ ಹಳೇ ವಿದ್ಯಾರ್ಥಿಗಳಿಂದ ಭಾನುವಾರ ಆಯೋಜಿಸಿದ್ದ ರಜತ ಮಹೋತ್ಸವ, ಗುರುವಂದನೆ ಹಾಗೂ ಸ್ನೇಹ ಸಮ್ಮೇಳನ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಕರ ಗೌರವವೇ ನಿಜವಾದ ಜ್ಞಾನ ಗೌರವ. ಶಿಕ್ಷಕರಿಗೆ ಗೌರವ ನೀಡುವುದು ಯಶಸ್ಸಿನ ಹೆಜ್ಜೆಯಾಗಿದೆ. ಗುರು ಮರದಂತಿದ್ದು, ತಾವೇ ಬೆಂಕಿಯಲ್ಲಿ ನಿಂತು ಶಿಷ್ಯರಿಗೆ ನೆರಳು ಕೊಡುತ್ತಾರೆ ಎಂದು ತಿಳಿಸಿದರು.
ಶಿಕ್ಷಕ ಸಿರಾಜುದ್ದಿನ್​ ಮುಡಬಿ ಮಾತನಾಡಿ, ಗರಿಗರಿ ಬಟ್ಟೆ ಹಾಕಿದರೆ ಶಿಕ್ಷಕರಾಗುವುದಿಲ್ಲ. ವಿದ್ಯಾರ್ಥಿಗಳ ಜ್ಞಾನದ ಇತಿಮಿತಿಯನ್ನು ಅರಿಯಬೇಕು. ತಪ್ಪು ದಾರಿ ಹಿಡಿದರೆ ತಿದ್ದಬೇಕು, ಬೆನ್ನು ತಟ್ಟಿ ಪೋತ್ಸಾಹಿಸಬೇಕು. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೆಕ್ಕಿ ತೆಗೆಯಬೇಕು. ಅಂದಾಗ ಮಾತ್ರ ಉತ್ತಮ ಶಿಕ್ಷಕನಾಗಲು ಸಾಧ್ಯ ಎಂದರು.
ಸಿದ್ದರಾಮಪ್ಪ ಮುನ್ನಹಳ್ಳಿ, ಎಸ್​.ಕೆ.ಕಂಟಿ, ಸುರೇಶ ಕುಲಕರ್ಣಿ, ದೇವಿಂದ್ರಪ್ಪ, ಬಸಣ್ಣ, ಶಕುಂತಲಾ, ಜಯಶ್ರೀ ಮಾತನಾಡಿದರು.
ಪ್ರಮುಖರಾದ ಗುರುಶಿವಲಿಂಗ ಪಾಟೀಲ್​, ಶಿವಲಿಂಗ ತೇಲ್ಕರ್​, ದೇವಿಂದ್ರ ಮೇಲ್ಕೇರಿ, ಅನಿಲ ಕುಮಾರ ನಾಟಿಕರ್​, ಹಳೇ ವಿದ್ಯಾರ್ಥಿಗಳಾದ ಸತೀಶ ಧಂಗಾಪುರ, ರಾಮಚಂದ್ರ ಸುತಾರ, ರವೀಂದ್ರ ಕಣ್ಣಿ, ಗಂಗಾಬಾಯಿ ಪಾಟೀಲ್​, ಬಾಬುರಾವ ಕಣ್ಣಿ, ಮಲ್ಲಿಕಾರ್ಜುನ ಗುಂಡುಗುರ್ತಿ, ವಿಮಲಾ ದರಪಳೆ, ದನ್ನಬಾಯಿ ಗಾಯಕವಾಡ, ವಿದ್ಯಾವತಿ ಸಕ್ಕರಗಿ, ಸಂತೋಷಿ ಪಾಟೀಲ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net