ಕೌಶಲದಿಂದ ಆರ್ಥಿಕ ಬೆಳವಣಿಗೆ ಸಾಧ್ಯ

ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಸಂವಾದದಲ್ಲಿ ಸಿಯುಕೆ ಸಾಫ್ಟ್​ ಸ್ಕಿಲ್​ ಡೆವಲಪ್ಮೆಂಟ್​ ಸೆಂಟರ್​ ನಿರ್ದೇಶಕಿ ಡಾ.ಸುಷ್ಮಾ ಎಚ್​. ಅವರನ್ನು ಸನ್ಮಾನಿಸಲಾಯಿತು. ಡಾ.ಭೀಮಾಶಂಕರ ಬಿರಾದಾರ, ಡಾ.ಶಾಂತಲಾ ಪಾಟೀಲ್​, ಪವನ ಪಾಟೀಲ್​, ಪ್ರಿಯಾ ಚವ್ಹಾಣ್​ ಇತರರಿದ್ದರು.
ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಸಂವಾದದಲ್ಲಿ ಸಿಯುಕೆ ಸಾಫ್ಟ್​ ಸ್ಕಿಲ್​ ಡೆವಲಪ್ಮೆಂಟ್​ ಸೆಂಟರ್​ ನಿರ್ದೇಶಕಿ ಡಾ.ಸುಷ್ಮಾ ಎಚ್​. ಅವರನ್ನು ಸನ್ಮಾನಿಸಲಾಯಿತು. ಡಾ.ಭೀಮಾಶಂಕರ ಬಿರಾದಾರ, ಡಾ.ಶಾಂತಲಾ ಪಾಟೀಲ್​, ಪವನ ಪಾಟೀಲ್​, ಪ್ರಿಯಾ ಚವ್ಹಾಣ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಸುಷ್ಮಾ ಎಚ್​. ಅನಿಸಿಕೆ
  • ಕಲ್ಯಾಣದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಸಂವಾದ
ಬಸವಕಲ್ಯಾಣ: ಕೌಶಲಾಧಾರಿತ ಶಿಕ್ಷಣ ಇಂದು ಅತ್ಯಂತ ಮಹತ್ವ ಪಡೆದಿದ್ದು, ವಿಕಸಿತ ಭಾರತದ ಕಲ್ಪನೆ ಸಾಧಿಸಲು ದಾರಿಯಾಗಿದೆ. ತಂತ್ರಜ್ಞಾನ ಮತ್ತು ಕೌಶಲಗಳ ಅಭಿವೃದ್ಧಿಯಿಂದ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆ ಸಾಧ್ಯ ಎಂದು ಕಲಬುಗಿರಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಾಫ್ಟ್​ ಸ್ಕಿಲ್​ ಡೆವಲಪ್ಮೆಂಟ್​ ಸೆಂಟರ್​ ನಿರ್ದೇಶಕಿ ಡಾ. ಸುಷ್ಮಾ ಎಚ್​. ಹೇಳಿದರು.
ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಐಕ್ಯುಎಸಿ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ತಂತ್ರಜ್ಞಾನ, ಕೌಶಲಾಭಿವೃದ್ಧಿ ಮತ್ತು ಶಿಕ್ಷಣ ಕುರಿತ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಾಣಿಜ್ಯ ವಿಷಯದ ವ್ಯಾಪ್ತಿ ದೊಡ್ಡದು. ಬ್ಯಾಂಕಿಂಗ್​, ಆರ್​ಬಿಐ, ಐಟಿ, ಅಂತಾರಾಷ್ಟ್ರೀಯ ಆರ್ಥಿಕತೆ ಸೇರಿ ಹಲವು ರಂಗಗಳಲ್ಲಿ ವಿದ್ಯಾರ್ಥಿಗಳು ಹೊಸ ಅವಕಾಶ ಪಡೆಯುವ ಸಾಧ್ಯತೆಗಳಿವೆ. ಈ ಎಲ್ಲ ಸಂಗತಿಗಳು ವಿದ್ಯಾರ್ಥಿಗಳಿಗೆ ತಿಳಿಸಿ ಕೊಡಬೇಕು ಎಂದರು.
ಕಲ್ಯಾಣ ಮೊದಲ ಸಂಸತ್ತಿನ ಪರಿಕಲ್ಪನೆ ನೀಡಿದ ನೆಲ. ಸಮಾನತೆ, ಸ್ವಾತಂತ್ರ್ಯ, ಮಹಿಳಾ ಅಸ್ತಿತ್ವಕ್ಕೆ ಆದ್ಯತೆ ನೀಡಿದ ಬಸವಣ್ಣನವರು ಇಡೀ ಕೌಶಲ ಹೊಂದಿದವರನ್ನು ಅನುಭವ ಮಂಟಪದಲ್ಲಿ ಸೇರಿದ್ದರು. ವಚನಕಾರರದು ಬೌದ್ಧಿಕ, ಆಧ್ಯಾತ್ಮಿಕ ಮತ್ತು ವೈಚಾರಿಕ ಕೌಶಲವಾಗಿತ್ತು ಎಂದು ಪ್ರತಿಪಾದಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ಓದು- ಅಧ್ಯಯನದ ಜತೆಗೆ ತಂತ್ರಜ್ಞಾನದ ಅರಿವು ಮತ್ತು ಹೊಸ ಕೌಶಲಗಳನ್ನು ಕಲಿಯುವುದು ಅನಿವಾರ್ಯವಾಗಿದೆ. ಮಾನವಿಕ ಅಧ್ಯಯನಗಳು ಮನುಷ್ಯ ಜಗತ್ತಿನ ವ್ಯವಹಾರ ಹಾಗೂ ಸಮಾಜದ ಗ್ರಹಿಕೆಗೆ ದಾರಿಯಾಗಿದೆ. ಲೋಕ ವ್ಯವಹಾರದ ಅರಿವಿಗಾಗಿ ತಂತ್ರಜ್ಞಾನ ಮತ್ತು ಕೌಶಲಗಳನ್ನು ಕಲಿಯಬೇಕು ಎಂದು ಸಲಹೆ ನೀಡಿದರು.
ಬಸವೇಶ್ವರ ಪಿಜಿ ಪ್ರಾಚಾಯೆರ್ ಡಾ.ಶಾಂತಲಾ ಪಾಟೀಲ್​, ಪ್ರಿಯಾ ಚವ್ಹಾಣ್​, ಗುರುದೇವಿ ಕಿಚಡೆ, ನಾಗರಾಜ್​ ನಾಸೆ, ಕೃಷ್ಣ ಗೌಳಿ, ಅಶೋಕರಡ್ಡಿ ಗದಲೇಗಾಂವ, ಪ್ರಭಾಕರ ನೌಗಿರೆ, ಶೃತಿ ನೀಲಮಠ, ನಾಗವೇಣಿ ವಟಗೆ ಇದ್ದರು. ಐಕ್ಯುಎಸಿ ಸಂಯೋಜಕ ಪವನ ಪಾಟೀಲ್​ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ರೋಷನ್​ ಬಿ. ವಂದಿಸಿದರು. ಗಂಗಾಧರ ಸಾಲಿಮಠ ನಿರೂಪಣೆ ಮಾಡಿದರು.
"

ಕಲ್ಯಾಣ ಕರ್ನಾಟಕ ಸಾಂಸತಿಕವಾಗಿ ಶ್ರೀಮಂತಿಕೆ ಹೊಂದಿರುವ ನೆಲ. ಅದರಲ್ಲೂ ಬಸವಕಲ್ಯಾಣ ವಚನ ಸಾಹಿತ್ಯದ ಮೂಲಕ ಹೊಸ ಆಲೋಚನೆಗಳು ಕಟ್ಟಿಕೊಟ್ಟ ಸ್ಥಳ. ಎಷ್ಟೆಲ್ಲ ಹೊಸ ಚಿಂತನೆ ಅಂದಿನ ಕಾಲದಲ್ಲಿಯೇ ವಚನಕಾರರು ಕಟ್ಟಿಕೊಟ್ಟಿದ್ದಾರೆ ಎಂಬುವುದು ನಮಗೆ ಬೆರಗಿನ ಸಂಗತಿ.

— > ಡಾ.ಸುಷ್ಮಾ ಎಚ್​. ಸಿಯುಕೆ ಸಾಫ್ಟ್​ ಸ್ಕಿಲ್​ ಡೆವಲಪ್ಮೆಂಟ್​ ಸೆಂಟರ್​ ನಿರ್ದೇಶಕಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net