ಡಿವೈಎಸ್‌ಪಿ, ಪಿಎಸ್‌ಐ ಹೆಸರು ಬರೆದಿಟ್ಟು ಆತ್ಮಹತ್ಯೆ

police
police
Published on
ಬೆಳಗಾವಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ರವೀಂದ್ರ ದಾನವ್ವಗೋಳ (42) ಹಣಕಾಸಿನ ವ್ಯವಹಾರದ ವಿಷಯವಾಗಿ ಡಿವೈಎಸ್‌ಪಿ, ಪಿಎಸ್‌ಐ ಸೇರಿ ಎಂಟು ಜನರ ಹೆಸರನ್ನು ಡೆತ್ ನೋಟ್‌ದಲ್ಲಿ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಕುಲಗೋಡ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದಾಖಲಾಗಿದೆ.
ಗ್ರಾಮದ ಲಕ್ಷ್ಮಣ ಮತ್ತು ಭರಮಪ್ಪಗೆ ನೀಡಿದ್ದ 8 ಲಕ್ಷ ರೂ. ಹಣ ವಾಪಸ್ ಕೇಳಿದಕ್ಕೆ ಜೀವ ಬೆದರಿಕೆ ಹಾಕಿರುವುದು ಹಾಗೂ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಳ್ಳಲಾ ಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net