

ಕಮಲಾಪುರ: ಮಹಾಗಾಂವ್ ಕ್ರಾಸ್ನಿಂದ ಆಳಂದ ತಾಲೂಕಿನ ಮುಖ್ಯ ರಸ್ತೆವರೆಗೂ ಸಂಪರ್ಕ ಕಲ್ಪಿಸುವ ರೋಡ್ನಲ್ಲಿನ ತಗ್ಗು& ಗುಂಡಿಗಳನ್ನು ಟಂಟಂ ಹಾಗೂ ಆಟೋ ಚಾಲಕರೇ ಮುರುಮ್ ಹಾಕಿ ಮುಚ್ಚಿದ ಪ್ರಸಂದ ಶನಿವಾರ ನಡೆದಿದೆ. ಮಹಾಗಾಂವ್ ಕ್ರಾಸ್ನಿಂದ ಆಳಂದ ತಾಲೂಕಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ&32ರ ಸುಮಾರು 3 ಕಿಮೀ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು. ಸಾಕಷ್ಟು ಬಾರಿ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತು ಆಟೋ ಹಾಗೂ ಟಂಟಂ ಚಾಲಕರು ವೈಯಕ್ತಿಕ ಹಣ ಖರ್ಚು ಮಾಡಿ ತಗ್ಗುಗಳನ್ನು ಮುಚ್ಚಿದ್ದಾರೆ. ಚಾಲಕರಾದ ಬಸವರಾಜ ಠಕರಿ, ಶಿವಕುಮಾರ ಮಲ್ಕಪಗೋಳ, ಮೆಹಬೂಬ್, ಮೈನೋದ್ದಿನ್ ಮುಲ್ಲಾ, ರಿಯಾಜ್ ಬಳಗಾರ್, ಅಜಯ, ಗಣಪತಿ, ಸುನೀಲ್, ವಿಕಾಸ, ಭಗವಂತ ಇತರರಿದ್ದರು.