ಕನಕಪುರ: ತಾಲೂಕಿನ ಛತ್ರ ಗ್ರಾಮದ ಬಳಿಯ ಬೆಂಗಳೂರು ರಸ್ತೆಯಲ್ಲಿ ಶುಕ್ರವಾರ ಸಂಜೆ ಆಟೋ ಪಲ್ಟಿಯಾಗಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ತಾಲೂಕಿನ ಮುಳ್ಳಹಳ್ಳಿ ಗ್ರಾಪಂ ವ್ಯಾಪ್ತಿಯ ಮಾದರಹಳ್ಳಿ ಮಲ್ಲೆಶ್(30) ಮೃತ. ಕನಕಪುರದಿಂದ ಹಾರೋಹಳ್ಳಿ ಕಡೆ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿದ ಆಟೋ ರಸ್ತೆಯ ಪಕ್ಕಕ್ಕೆ ಪಲ್ಟಿ ಹೊಡೆದಿದ್ದು, ತಲೆ, ಮುಖಕ್ಕೆ ಬಲವಾಗಿ ಪೆಟ್ಟಾಗಿ ಮಲ್ಲೇಶ್ ಸ್ಥಳದಲ್ಲೇ ಅಸುನೀಗಿದ್ದಾರೆ. ಸರ್ಕಲ್ ಇನ್ಸ್ಪೆಕ್ಟರ್ ಅನಂತರಾಮ್, ಸಬ್ ಇನ್ಸ್ಪೆಕ್ಟರ್ಗಳಾದ ರಾಮಕೃಷ್ಣರಾವ್ ಹಾಗೂ ಪಾಂಡು ಸ್ಥಳಕ್ಕೆ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.