ಡಾ.ಶ್ರೀ ಮುಮ್ಮಡಿ ನಿರ್ವಾಣಶ್ರೀಗಳು ಸಾಮಾಜಿಕ ಕಳಕಳಿ

Dr. Sri Mummadi Nirvanashri's Social Concern
Dr. Sri Mummadi Nirvanashri's Social Concern
Published on
ಕನಕಪುರ: ಶರಣ ಪರಂಪರೆಗೆ ನಾಂದಿ ಹಾಡಿ ಸಿದ್ಧಗಂಗಾ ಮಠದ ಕಲ್ಯಾಣದ ಶರಣ ಪರಂಪರೆಯನ್ನು ಮುಂದುವರಿಸಿಕೊಂಡು ಅಪಾರ ಕೊಡುಗೆ ನೀಡಿದೆ. ಅದನ್ನು ಇಂದಿಗೂ ಲಿಂಗೈಕ್ಯರು ಮುಂದುವರಿಸಿಕೊಂಡು ಬಂದಿದ್ದಾರೆಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪತಿಳಿಸಿದರು.
ಶ್ರೀಗಳ ಪುಣ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜತೆಗೆ ಲಿಂಗಾಯತ ಪರಂಪರೆಯಲ್ಲಿ ಜಾತಿ, ಲಿಂಗ ಮತ್ತು ವರ್ಗಭೇದವಿಲ್ಲದ ಸಮಾನತೆಯ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಲಿಂಗೈಕ್ಯರ ಸರಳತೆ ಮತ್ತು ನಿಷ್ಕಲ್ಮಶ ಪ್ರೀತಿ ಸಮಾಜಕ್ಕೆ ನಿಜವಾದ ಸ್ಪೂರ್ತಿಯಾಗಿದೆ. ದೇಗುಲಮಠವು ಇತಿಹಾಸದಲ್ಲಿ ಧಾರ್ಮಿಕ ಬೇರುಗಳು ಗಟ್ಟಿಯಾಗಲು ಇತಿಹಾಸ ಮತ್ತು ಪೂರ್ವಜರ ಸಂಸ್ಕೃತಿಯನ್ನು ಧಾರ್ಮಿಕ ಮತ್ತು ಆಧ್ಯಾತ್ಮಿಕ ನೆಲೆಯಲ್ಲಿ ಉಳಿಸಿಕೊಂಡು ಬಂದಿದೆ. ಇಂತಹ ತಪಸ್ಸಿನ ಮಠವನ್ನು ಮುನ್ನಡೆಸಲು ಎಲ್ಲರೂ ಶಕ್ತಿ ತುಂಬಬೇಕು ಎಂದರು.
ಕನಕಪುರ ದೇಗುಲ ಮಠ:ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, 50 ವರ್ಷಗಳ ಸುದೀರ್ಘ ಅವರ ಸೇವಾ ಅವಧಿಯಲ್ಲಿ ಆಧ್ಯಾತ್ಮಿಕ ಮತ್ತು ಸಾಮಾಜಿಕ, ಶೈಕ್ಷಣಿಕ ರಂಗದಲ್ಲಿ ಅವಸ್ಮರಣೀಯ ಸೇವೆ ಸಲ್ಲಿಸಿದ್ದಾರೆ. ಇಂತಹ ಮಠಕ್ಕೆ ಭಕ್ತರ ಸಲಹೆ ಸಹಕಾರ ಅಗತ್ಯವಾಗಿದೆ. ಮಠದ ಅಸ್ಥಿತ್ವ ಮತ್ತು ಅಭಿವೃದ್ಧಿಗೆ ಭಕ್ತರೇ ಬೆನ್ನೆಲುಬು. ಭಕ್ತರು ಮಠದ ಮೇಲಿಡುವ ಅಪಾರ ನಂಬಿಕೆ, ಒಗ್ಗಟ್ಟಿನ ಶಕ್ತಿ, ಅಭಿಮಾನ ಮತ್ತು ಭಕ್ತಿಯೇ ಮಠದ ಮೂಲ ಶಕ್ತಿಯಾಗಿದೆ. ಕನಕಪುರದಲ್ಲಿ ಮರಳೆಗವಿ ಮಠ ಹಾಗೂ ದೇಗುಲ ಮಠವು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿರುವುದು ನಮ್ಮೆಲ್ಲರ ಭಾಗ್ಯ, ಲಿಂಗೈಕ್ಯ ಶ್ರೀಗಳು ಸಮಾಜಕ್ಕೆ ಬೆಳಕಾಗಿ ಹೊರಹೊಮ್ಮಿದ್ದಾರೆ ಎಂದರು.
ಭಕ್ತ ಸಮೂಹವೇ ದೊಡ್ಡ ಆಸ್ತಿ:ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ನಿರ್ವಾಣ ಶ್ರೀಗಳು ಬಸವಣ್ಣನವರ ಹಾದಿಯಂತೆ ಸಮಾನತೆ, ನಾಯಕತ್ವ, ದಯೆಯೇ ಧರ್ಮದ ಮೂಲ ಎಂಬ ಜೀವನದ ಮೌಲ್ಯಗಳ ಮೂಲಕ ಮಠದಲ್ಲಿ ಹೊಸದಿಕ್ಕನ್ನು ತೋರಿಸಿದರು. ಭೌತಿಕವಾಗಿ ನಮ್ಮನ್ನು ನಿರ್ವಾಣ ಶ್ರೀಗಳು ಅಗಲಿದ್ದರೂ ಅವರು ನಮ್ಮ ಜತೆಯಲ್ಲಿದ್ದಾರೆ. ಅವರ ನೆನೆಪುಗಳು, ಮೌಲ್ಯಗಳು ಮತ್ತು ಆಲೋಚನೆಗಳು ಸದಾ ನಮ್ಮೊಂದಿಗೆ ಜೀವಂತವಾಗಿದೆ, ಅವರೊಂದಿಗಿನ ಒಡನಾಟ ಮತ್ತು ಪ್ರೀತಿ ಎಂದಿಗೂ ಅಳಿಸುವುದಿಲ್ಲ, ನೋವು ಸಮಾಜಕ್ಕೆ ದಾರಿದೀಪವಾಗಿ ಎಲ್ಲರನ್ನು ಮುನ್ನಡೆಸುತ್ತದೆ ಎಂದರು.
ಶೈಕ್ಷಣಿಕ ಪ್ರಗತಿ:ಕೇಂದ್ರ ಸಚಿವ ವಿ. ಸೋಮಣ್ಣ ಮಾತನಾಡಿ, ಶ್ರೀಗಳಿಗೆ ಬಡವರ, ಕೃಷಿಕರ ಬಗ್ಗೆ ಎಲ್ಲಿಲ್ಲದ ಪ್ರೀತಿಯಿತ್ತು. ಎಲ್ಲವನ್ನು ಸಮಾನತೆಯತ್ತ ಕೊಂಡೊಯ್ಯವ ಪ್ರಗತಿಯ ಶ್ರೇಷ್ಠ ಕಾರ್ಯ ಅವರಲ್ಲಿತ್ತು. ಕನಕಪುರವು ಸಾಕ್ಷರತೆಯಲ್ಲಿ ಅತಿ ಹೆಚ್ಚು ಹೆಗ್ಗಳಿಕೆಯನ್ನು ಹೊಂದಿದೆ. ಇದಕ್ಕೆ ಶ್ರೀಕ್ಷೇತ್ರ ಮರಳೆಗವಿ ಮಠ, ದೇಗುಲ ಮಠ ಹಾಗೂ ಕರ್ಮಯೋಗಿ ಪೂಜ್ಯ ಕರಿಯಪ್ಪನವರ ವಿದ್ಯಾಸಂಸ್ಥೆಗಳು ಸರ್ಕಾರಗಳು ಮಾಡಲಾಗದ ಶೈಕ್ಷಣಿಕ ಪ್ರಗತಿಯನ್ನು ಮಾಡಿವೆ ಎಂದರು.
ರಾಜ್ಯದ ರಾಜಕಾರಣದಲ್ಲಿ ಅತ್ಯಂತ ಮಹೋನ್ನತ ಪದವಿಯನ್ನು ಪಡೆಯಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅನೇಕ ಗೊಂದಲಗಳ ನಡುವೆಯೇ ಸೌಮ್ಯ ಸ್ವಭಾವದಿಂದ ಸಿಎಂ ಗಾದೆಯನ್ನು ಏರಿದ್ದಾರೆ. ತಾಳಿದವನು ಬಾಳಿಯಾನು ಎನ್ನುವ ಗಾದೆಯನ್ನು ನಿಜ ಮಾಡಿರುವ ಡಿ.ಕೆ.ಶಿವಕುಮಾರ್ ತಾಳ್ಮೆಯಿಂದಲೇ ಗದ್ದುಗೆಯನ್ನು ಗೆದ್ದಿದ್ದಾರೆ.
ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಮಠ, ಮೈಸೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net