2023ರಿಂದ ಇಲ್ಲಿವರೆಗೆ ಮತೇತ್ರದ ಅಭಿವೃದ್ಧಿಗಾಗಿ 1 ಸಾವಿರ ಕೋಟಿ ರೂ.ಗೂ ಅಧಿಕ ಅನುದಾನ ತರುವ ಮೂಲಕ ಜನರಿಂದ ಉತ್ತಮರೆನಿಸಿಕೊಂಡಿದ್ದಾರೆ. ಸೇಡಂನಲ್ಲಿ ಒಲಿಂಪಿಕ್ ಮಾದರಿಯ ಈಜುಕೊಳ, ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೇಗೇರಿಸಿದ್ದು, ಬಸವೇಶ್ವರ ವೃತದಿಂದ ಕೋಡ್ಲಾ ಕ್ರಾಸ್ವರೆಗೆ ಚತುಷ್ಪಥ ರಸ್ತೆ, ಬೀದಿ ದೀಪಗಳ ಅಳವಡಿಕೆ, ನೀಲಹಳ್ಳಿಯಲ್ಲಿ 75ಕೋಟಿ ವೆಚ್ಚದ ಜಿಟಿಟಿಸಿ ಕಾಲೇಜು ಸ್ಥಾಪನೆ, ಸರ್ಕಾರಿ ಆಸ್ಪತ್ರೆಯನ್ನು 100ರಿಂದ 150ಹಾಸಿಗೆಗೆ ಹೆಚ್ಚಿಸಿದ್ದು ಪ್ರಮುಖ ಯೋಜನೆಗಳಾಗಿವೆ. ಇದರೊಟ್ಟಿಗೆ ಕಾಗಿಣಾ ಏತ ನೀರಾವರಿ ಯೋಜನೆಗೆ ವೇಗ ನೀಡುವ ಮೂಲಕ ಕೆಲಸ ಆರಂಭಿಸಿದ್ದು, ಹೆಚ್ಚುವರಿಯಾಗಿ ಹಣ ತರುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲು ಶ್ರಮಿಸುತ್ತಿದ್ದಾರೆ.