ಬಸವಕಲ್ಯಾಣ: ಬಸವ ಧರ್ಮ ಪೀಠ ಬಸವ ಮಹಾಮನೆ ಮಹಾಮಠ ಪರಿಸರದಲ್ಲಿ ಭಾನುವಾರ ಬೆಳಗ್ಗೆ 11-30ಕ್ಕೆ ಪ್ರಥಮ ಮಹಿಳಾ ಮಹಾಬ ಜಗದ್ಗುರು ಪೂಜ್ಯ ಡಾ.ಮಾತೆ ಮಹಾದೇವಿ ಮಾತಾಜಿ ಅವರ 80ನೇ ಹುಟ್ಟುಹಬ್ಬ ಹಾಗೂ 7ನೇ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಲ್ಲಮಪ್ರಭು ಶೂನ್ಯ ಪೀಠ ಜಗದ್ಗುರು ಶ್ರೀ ಸಿದ್ಧ್ದರಾಮೇಶ್ವರ ಸ್ವಾಮೀಜಿ ಹೇಳಿದರು. ಕೂಡಲ ಸಂಗಮ ಬಸವ ಧರ್ಮ ಪೀಠದ ಪೀಠಶಧ್ಯಕ್ಷರಾದ ಪೂಜ್ಯ ಡಾ.ಗಂಗಾದೇವಿ, ಅನುಭವ ಮಂಟಪದ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಕೂಡಲ ಸಂಗಮದ ಶ್ರೀ ಮಹಾದೇಶ್ವರ ಸ್ವಾಮೀಜಿ ಸಾನ್ನಿಧ್ಯ, ಸುಮಂಗಲಿ ಸೇವಾಶ್ರಮದ ಅದ್ಯೆ, ಪದ್ಮಶ್ರೀ ಪುರಸತೆ ಡಾ.ಎಸ್.ಜಿ ಸುಶೀಲಮ್ಮ, ಗೋರ್ಟಾದ ಶ್ರೀ ಪ್ರಭುದೇವರು ಸ್ವಾಮೀಜಿ ಸಮ್ಮುಖ ವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕೆಪಿಸಿಸಿ ಸಹಕಾರ ವಿಭಾಗದ ಅಧ್ಯಕ್ಷ ಧನರಾಜ ತಾಳಂಪಳ್ಳಿ ಹಾಗೂ ಕಲ್ಯಾಣ ಪರ್ವ ಉತ್ಸವ ಸಮಿತಿ ಗೌರವಾಧ್ಯಕ್ಷ ಬಸವರಾಜ ಬುಳ್ಳಾ ಕಾರ್ಯಕ್ರಮ ಉದ್ಘಾಟಿಸುವರು. ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ್ ಗಾದಗಿ ಅಧ್ಯಕ್ಷತೆ ವಹಿಸುವರು. ಪೂಜ್ಯರು, ಗಣ್ಯರು, ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿಯ ಪದಾಧಿಕಾರಿಗಳಿಗೆ ವಿಶೇಷ ಗೌರವ ಸನ್ಮಾನ ಮತ್ತು ಪೂಜ್ಯ ಲಾವಣ್ಯ ಮಾತಾಜಿಯವರ ಅಧ್ಯಕ್ಷತೆಯಲ್ಲಿ ಬಸವಾತ್ಮಜೆ ಮಹಿಳಾ ಸಹಕಾರಿ ಸಂ ನಿಯಮಿತದ ಉದ್ಘಾಟನೆ ನಡೆಯಲಿದ್ದು, ಪದ್ಮಶ್ರೀ ಡಾ.ಎಸ್. ಜಿ.ಸುಶೀಲಮ್ಮ ಉದ್ಘಾಟಿಸುವರು ಎಂದು ಮಾಹಿತಿ ನೀಡಿದರು. ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕು ಎಂದು ರಾಷ್ಟ್ರೀಯ ಬಸವ ದಳದ ತಾಲೂಕು ಅಧ್ಯಕ್ಷ ರವಿ ಕೊಳಕುರ ಮನವಿ ಮಾಡಿದ್ದಾರೆ. ಹುಲಸೂರು ಬಸವ ಕೇಂದ್ರದ ಅಧ್ಯಕ್ಷ ಆಕಾಶ ಖಂಡಾಳೆ, ಜಯಶ್ರೀ ಪಾಟೀಲ್, ಶಿವಕುಮಾರ ಕುದ್ರೆ, ರವಿ ಬೇಲೂರೆ ಇತರರಿದ್ದರು.