ಡಾ.ಅಂಬೇಡ್ಕರ್​ ವಿಚಾರ ಜಗತ್ತಿಗೆ ಮಾದರಿ

ಕಲಬುರಗಿ ಜಗತ್​ ವೃತ್ತದಲ್ಲಿನ ಡಾ.ಅಂಬೇಡ್ಕರ್​ ಪ್ರತಿಮೆಗೆ ಡಾ.ಅಲ್ಲಮಪ್ರಭು ಖೂಬಾ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಯಶ್ವಂತರಾಯ ಅಷ್ಟಗಿ, ಶರಣಗೌಡ ಪಾಟೀಲ್​ ಇತರರಿದ್ದರು.
ಕಲಬುರಗಿ ಜಗತ್​ ವೃತ್ತದಲ್ಲಿನ ಡಾ.ಅಂಬೇಡ್ಕರ್​ ಪ್ರತಿಮೆಗೆ ಡಾ.ಅಲ್ಲಮಪ್ರಭು ಖೂಬಾ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಯಶ್ವಂತರಾಯ ಅಷ್ಟಗಿ, ಶರಣಗೌಡ ಪಾಟೀಲ್​ ಇತರರಿದ್ದರು.
Published on
ಕಲಬುರಗಿ: ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್​ ಆಚಾರ&ವಿಚಾರ ಜಗತ್ತಿಗೆ ಮಾದರಿ ಎಂದು ಶರಣಬಸವೇಶ್ವರ ಸಂಸ್ಥಾನದ ಆಡಳಿತಾಧಿಕಾರಿ ಡಾ.ಅಲ್ಲಮಪ್ರಭು ಖೂಬಾ ಹೇಳಿದರು.
ಅವರ 135ನೇ ಜನ್ಮದಿನದ ನಿಮಿತ್ತ ಕಲಬುರಗಿ ಜಗತ್​ ವೃತ್ತದಲ್ಲಿ ಡಾ.ಅಂಬೇಡ್ಕರ್​ ಪ್ರತಿಮೆಗೆ ಮಂಗಳವಾರ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಮಾತನಾಡಿದ ಅವರು, ಬುದ್ಧ, ಬಸವ ಮತ್ತು ಅಂಬೇಡ್ಕರ್​ ಅವರ ಆಚಾರ&ವಿಚಾರಗಳು ಜಗತ್ತಿಗೆ ಮಾದರಿಯಾಗಿವೆ. ಅವರ ಚಿಂತನೆಗಳು ಸಮಾನತೆ ಪ್ರತಿಪಾದಿಸುತ್ತವೆ. ಡಾ.ಅಂಬೇಡ್ಕರ್​ ಅವರು ಶಿಣ, ಸಂಟನೆ ಮತ್ತು ಹೋರಾಟದ ಮೂಲಕ ಸಮಾಜಕ್ಕೆ ದಾರಿದೀಪವಾಗಿದ್ದರೆ, ಶರಣಬಸವೇಶ್ವರ ಸಂಸ್ಥಾನವು ಶಿಣದ ಮೂಲಕ ಕಲ್ಯಾಣ ಕರ್ನಾಟಕದ ಮಕ್ಕಳ ಭವಿಷ್ಯ ರೂಪಿಸಲು ಮಾತೋಶ್ರೀ ಡಾ.ದಾಾಯಿಣಿ ಅವ್ವಾಜಿ ಅಧ್ಯತೆಯಲ್ಲಿ ಶಿಣ, ದಾಸೋಹ ೇತ್ರಕ್ಕೆ ಮಹತ್ತರ ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿದರು.
ಕಲಬುರಗಿ &ಯಾದಗಿರಿ ಹಾಪ್​ಕಾಮ್ಸ್​ ನಿರ್ದೇಶಕ ರಾಜಕುಮಾರ ಕೋಟೆ ಮಾತನಾಡಿ, ಬುದ್ಧ ಮತ್ತು ಬಸವಾದಿ ಶರಣರ ಆಶಯಗಳನ್ನು ನೈಜವಾಗಿ ಅನುಷ್ಠಾನಗೊಳಿಸಿದವರು ಡಾ.ಬಾಬಾಸಾಹೇಬ ಅಂಬೇಡ್ಕರ್​ ಎಂದು ಹೇಳಿದರು.
ಶರಣಗೌಡ ಪಾಟೀಲ ಪಾಳಾ, ಪ್ರೊ.ಯಶ್ವಂತರಾಯ ಅಷ್ಟಗಿ ಮಾತನಾಡಿ, ದೇಶಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ ಮಹಾನ್​ ನಾಯಕ ಡಾ. ಅಂಬೇಡ್ಕರ್​ ಆಶಯದಂತೆ ಬದುಕಿದಾಗ ಮಾತ್ರ ನಮ್ಮ ಜೀವನ ಸಾರ್ಥಕ. ಅವರ ವಿಚಾರಗಳನ್ನು ಕೇವಲ ಭಾಷಣಗಳಲ್ಲಿ ಹೇಳುವುದಕ್ಕಿಂತ ನಿಜ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಮಹಾತ್ಮರಿಗೆ ಗೌರವ ಸಲ್ಲಿಸಿದಂತಾಗಲಿದೆ ಎಂದು ಹೇಳಿದರು.
ಅಂಬಾರಾಯ ಕೋಣೆ, ಶ್ರೀಶೈಲ ಬಿರಾದಾರ, ರಮೇಶ ಅಷ್ಠಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net