ಅಂಗವಿಕಲರಿಗೆ ಅನುಕಂಪ ಬೇಡ ಅವಕಾಶ ನೀಡಿ

ಶಹಾಪುರದಲ್ಲಿ ಶುಕ್ರವಾರ ಸಚಿವ ಶರಣಬಸಪ್ಪ ದರ್ಶನಾಪುರ ಅವರು 47 ಜನ ಅಂಗವಿಕಲರಿಗೆ ದ್ವಿಚಕ್ರ ವಾಹನಗಳನ್ನು ವಿತರಿಸಿದರು.
ಶಹಾಪುರದಲ್ಲಿ ಶುಕ್ರವಾರ ಸಚಿವ ಶರಣಬಸಪ್ಪ ದರ್ಶನಾಪುರ ಅವರು 47 ಜನ ಅಂಗವಿಕಲರಿಗೆ ದ್ವಿಚಕ್ರ ವಾಹನಗಳನ್ನು ವಿತರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ದರ್ಶನಾಪುರ ಸಲಹೆ
  • 47 ಜನ ವಿಕಲಾಂಗರಿಗೆ ದ್ವಿಚಕ್ರವಾಹನಗಳ ವಿತರಣೆ
ಶಹಾಪುರ: ಅಂಗವಿಕಲರಿಗೆ ಅನುಕಂಪ ತೊರಿಸುವ ಬದಲಿಗೆ ಅವರಿಗೆ ಅವಕಾಶ ನೀಡಿದರೇ ಎಲ್ಲರಂತೆ ಜೀವನದಲ್ಲಿ ಸಾಧನೆ ಮಾಡುವ ಶಕ್ತಿ ಅವರಿಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2025&26ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 50 ಲಕ್ಷ ರೂ.ಮೊತ್ತ 47 ದ್ವಿಚಕ್ರವಾಹನಗಳನ್ನು ಖರೀದಿಸಿ ಅರ್ಹ ಅಂಗವಿಕಲರಿಗೆ ವಿತರಿಸಲಾಗಿದೆ ಎಂದರು. ದೇಹದಿಂದ ವಿಕಲಾಂಗರಿರಬಹುದು, ಆದರೆ ಮನಸ್ಸಿನಿಂದ ಸದೃಢರಾಗಿರುವ ನೀವು ಜೀವನದಲ್ಲಿ ಕುಗ್ಗದೆ ನೀವು ಆಯ್ಕೆ ಮಾಡಕೊಂಡ ಕ್ಷೇತ್ರದಲ್ಲಿ ಮುಂದುವರೆಯರಿ ಎಂದು ಸಚಿವರು ಸಲಹೆ ನೀಡಿದರು. ಶಾಸಕರ ಅನುದಾನದಲ್ಲಿ ಯಥಾ ಪ್ರಕಾರವಾಗಿ 15ರಿಂದ 20 ವಾಹನಗಳು ಪ್ರತಿವರ್ಷವೂ ವಿತರಿಸಲಾಗುತ್ತದೆ ಎಂದ ಅವರು, ಸಾರಥಿ ಯೋಜನೆಯಡಿ ಒಂದು ಕೋಟಿ ರೂ.ವೆಚ್ಚದಲ್ಲಿ 26 ಜನರಿಗೆ ಮುಂದಿನ ದಿನಗಳಲ್ಲಿ ವಾಹನಗಳನ್ನು ವಿತರಿಸಲಾಗುವುದು ಎಂದರು. ಅಂಗವಿಕಲರ ಕಲ್ಯಾಣ ಇಲಾಖೆ ಅಧಿಕಾರಿ ಸೇರಿ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net