ಜನರಿಗೆ ಸೌಲಭ್ಯ ತಲುಪಿಸಲು ವಿಳಂಬ ಮಾಡದಿರಿ

ರಾಮದುರ್ಗ ತಹಸೀಲ್ದಾರ್​ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಅಶೋಕ ಪಟ್ಟಣ ಮಾತನಾಡಿದರು. ಅಮರ ನಾಯಕ, ಶ್ರೀನಾಥ ಚಿಮ್ಮಲಗಿ, ಪ್ರಕಾಶ ಗಾಯಕವಾಡ, ಶಿವಪ್ರಕಾಶ ಕರಡಿ, ಡಾ.ಆರ್​.ಎಚ್​.ಬಂತಿ, ಶಂಕರ ಕುಂಬಾರ ಇತರರಿದ್ದರು.
ರಾಮದುರ್ಗ ತಹಸೀಲ್ದಾರ್​ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಅಶೋಕ ಪಟ್ಟಣ ಮಾತನಾಡಿದರು. ಅಮರ ನಾಯಕ, ಶ್ರೀನಾಥ ಚಿಮ್ಮಲಗಿ, ಪ್ರಕಾಶ ಗಾಯಕವಾಡ, ಶಿವಪ್ರಕಾಶ ಕರಡಿ, ಡಾ.ಆರ್​.ಎಚ್​.ಬಂತಿ, ಶಂಕರ ಕುಂಬಾರ ಇತರರಿದ್ದರು.
Published on

ವಿಜಯವಾಣಿ ಸುದ್ದಿಜಾಲ

ಸರ್ಕಾರದ ಸೌಲಭ್ಯ ಸಾರ್ವಜನಿಕರಿಗೆ ತಲುಪಿಸಲು ಅಧಿಕಾರಿಗಳು ದಲ್ಲಾಳಿಗಳ ಮೂಲಕ ಹಣಕ್ಕೆ ಬೇಡಿಕೆ ಇಡುತ್ತಿರುವ ಆರೋಪ ಕೇಳಿಬಂದಿದೆ. ವಿಳಂಬ ಧೋರಣೆ ಅನುಸರಿಸುವುದು, ಲಂಚ ಪಡೆಯುವುದು ಖಚಿತವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಎಚ್ಚರಿಸಿದರು.
ನಗರದ ತಹಸೀಲ್ದಾರ್​ ಕಾರ್ಯಾಲಯದಲ್ಲಿ ಸೋಮವಾರ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ವಿವಿಧ ಇಲಾಖೆಗಳ ಸೌಲಭ್ಯಕ್ಕೆ ಜನತೆ ಪ್ರತಿದಿನ ಅಲೆಯುವಂತಾಗಬಾರದು. ಸರ್ಕಾರಿ ಆಸ್ಪತ್ರೆಯಲ್ಲಿ ಮಾನವೀತೆಯಿಂದ ಸೇವೆ ಸಲ್ಲಿಸಬೇಕು. ಅಧಿ-ಕಾರಿಗಳು, ಜನತೆಯಿಂದ ಯಾವುದೇ ದೂರು ಕೇಳಿ ಬರದಂತೆ ಕೆಲಸ ನಿರ್ವಹಿಸಬೇಕು ಎಂದರು.
ಗ್ರಾಮೀಣ ನೀರು ಸರಬರಾಜು ಎಇಇ ಅಮರ ನಾಯಕ ಮಾತನಾಡಿ, ಮುದೇನೂರ, ಮಾರಡಗಿ ಸೇರಿದಂತೆ ವಿವಿಧೆಡೆ ಕುಡಿಯುವ ನೀರಿಗಾಗಿ ಉಂಟಾಗುವ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕುಡಿಯುವ ನೀರಿಗಾಗಿ ತುರ್ತು ಕ್ರಮ ತೆಗೆದುಕೊಳ್ಳಲು ಮುಖ್ಯಮಂತ್ರಿ ಪ್ರತಿ ತಾಲೂಕಿಗೆ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಿದ್ದಾರೆ. ಅಧಿ-ಕಾರಿಗಳು ಕ್ರಿಯಾಯೋಜನೆ ಸಲ್ಲಿಸಬೇಕು ಎಂದು ಶಾಸಕರು ಸೂಚಿಸಿದರು.
ಬಿತ್ತನೆ ಬಳಿಕ ವಾಡಿಕೆ ಮಳೆಯಾದರೂ ತೇವಾಂಶ ಕೊರತೆಯಿಂದ ಹೆಸರು, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳ ಇಳುವರಿ ಕಡಿಮೆಯಾಗುವ ಸಾಧ್ಯತೆ ದಟ್ಟವಾಗಿದ್ದು, ಮಳೆ ಕೊರತೆಯಿಂದ ವಿಮೆ ಕಂಪನಿಗಳಿಗೆ ಮಧ್ಯಂತರ ಪರಿಹಾರ ನೀಡುವಂತೆ ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿ ವರದಿ ನೀಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಶ್ರೀನಾಥ ಚಿಮ್ಮಲಗಿ ಮಾಹಿತಿ ನೀಡಿದರು.
ತಹಸೀಲ್ದಾರ್​ ಪ್ರಕಾಶ ಗಾಯಕವಾಡ, ಹೆಸ್ಕಾಂ ಎಇಇ ಶಿವಪ್ರಕಾಶ ಕರಡಿ, ಟಿಎಚ್​ಒ ಡಾ.ಆರ್​.ಎಚ್​.ಬಂತಿ, ಶಿಶು ಅಭಿವೃದ್ಧಿ
ಅಧಿ-ಕಾರಿ ಶಂಕರ ಕುಂಬಾರ, ಲೋಕೋಪಯೋಗಿ ಎಇಇ ಎನ್​.ರವಿಕುಮಾರ, ಎಡಿಎಲ್​ಆರ್​ ಪ್ರಕಾಶ ಸತ್ತಿಗೇರಿ, ಬಿಇಒ ಸುರೇಂದ್ರ ಕಾಂಬಳೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net