ಹೋಟೆಲ್​ನಲ್ಲಿ ಗೃಹ ಬಳಕೆ ಸಿಲಿಂಗಡರ್​ ಜಪ್ತಿ

ಗುರುಮಠಕಲ್​ನ ವಿವಿಧ ಹೋಟೆಲ್​ಗಳಲ್ಲಿ ಅನಧಿಕೃತವಾಗಿ ಗೃಹಬಳಕೆ ಸಿಲಿಂಡರ್​ ಉಪಯೋಗಿಸುತ್ತಿರುವುದನ್ನು ತಹಸೀಲ್ದಾರ್​ ಚನ್ನಮಲ್ಲಪ್ಪ ಂಟಿ ನೇತೃತ್ವದಲ್ಲಿ ಪತ್ತೆ ಹಚ್ಚಿ ಸಿಲಿಂಡರ್​ ವಶಪಡಿಸಿಕೊಂಡರು.ನರಸಿಂಹಸ್ವಾಮಿ, ಅಯ್ಯಪ್ಪ ಹೀರೆಮಠ, ಅನ್ವರ್​ ಇತರರಿದ್ದರು.

Published on
ಗುರುಮಠಕಲ್​: ಮಧ್ಯಪ್ರಾಚ್ಯ ಯುದ್ಧದ ಪರಿಹಾಣ ಸಿಲಿಂಡರ್​ ಕೊರೆತೆಯಾಗಿದ್ದರಿಂದ ಅಕ್ರಮವಾಗಿ ಹೋಟೆಲ್​ಗಳಲ್ಲಿ ಗೃಹ ಬಳಕೆ ಸಿಲಿಂಡರ್​ ಬಳಸುತ್ತಿದ್ದಾರೆ ಎಂಬ ದೂರಿನ ಮೇರೆಗೆ ಅಧಿಕಾರಿಗಳು ದಾಳಿ ಮಾಡಿ ಏಳು ಸಿಲಿಂಡರ್​ಗಳನ್ನು ವಶಪಡಿಸಿಕೊಂಡ ಟನೆ ಶುಕ್ರವಾರ ನಡೆದಿದೆ.
ಪಟ್ಟಣದ ವಿವಿಧ ಹೋಟೆಲ್​ಗಳ ಮೇಲೆ ಅನಧಿಕೃತವಾಗಿ ಬಳಸುತ್ತಿರುವವರ ವಿರುದ್ಧ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ಆಹಾರ ಇಲಾಖೆ ಉಪನಿರ್ದೇಶಕರು ಹಾಗೂ ತಹಸೀಲ್ದಾರ್​ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಅಕ್ರಮವಾಗಿ ಗೃಹ ಬಳಕೆಯ ಏಳು ಸಿಲಿಂಡರ್​ ವಶಪಡಿಸಿಕೊಳ್ಳಲಾಗಿದೆ.
ನಂತರ ತಹಸೀಲ್ದಾರ್​ ಚನ್ನಮಲ್ಲಪ್ಪ ಂಟಿ ಗ್ಯಾಸ್​ ಏಜೆನ್ಸಿ ಮಾಲೀಕರಿಗೆ ಹಾಗೂ ಹೋಟೆಲ್​ ವ್ಯಾಪಾರಿಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದು, ಗೃಹ ಬಳಕೆಯ ಸಿಲಿಂಡರ್​ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಬಾರದು. ಗ್ಯಾಸ್​ ಸಿಲಿಂಡರ್​ಗಳ ದುರುಪಯೋಗ ಆಗದಂತೆ ಜನರಿಗೆ ಅರಿವು ಮೂಡಿಸುವ ಕೆಲಸ ಗ್ಯಾಸ್​ ಏಜೆನ್ಸಿಗಳು ಮಾಡಬೇಕು ಎಂದು ತಾಕೀತು ಮಾಡಿದರು.
ಈ ವೇಳೆ ಉಪತಹಸೀಲ್ದಾರ್​ ನರಸಿಂಹಸ್ವಾಮಿ, ಆಹಾರ ಇಲಾಖೆಯ ಅಯ್ಯಪ್ಪ ಹೀರೆಮಠ, ಅನ್ವರ್​, ಗ್ಯಾಸ್​ ಏಜೆನ್ಸಿ ಮಾಲಿಕರು ಬಸಪ್ಪ ಮೇಧಾ, ಮಲ್ಲಪ್ಪ, ದೇವಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net