ಸಮಾಜಕ್ಕೆ ವೈದ್ಯರ ಸೇವೆ ಅಮೂಲ್ಯ

ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂ ಕಲಬುರಗಿಯಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನ ಕಾರ್ಯಕ್ರಮವನ್ನು ಡಾ.ರವೀಂದ್ರನಾಥ ಮೇಟಿ ಉದ್ಘಾಟಿಸಿದರು. ಡಾ.ಶರಣಬಸಪ್ಪ ಗಣಜಲಖೇಡ, ಡಾ.ಶರಣಬಸಪ್ಪ ಕ್ಯಾತನಾಳ, ಡಾ.ನಾಗರಾಜ ಪಾಟೀಲ್​, ಡಾ.ಅಂಬಾರಾಯ ರುದ್ರವಾಡಿ, ಡಾ.ಸಂಧ್ಯಾ ಕಾನೇಕರ್​, ಡಾ.ಅಮೃತಾ ಕುಲಕರ್ಣಿ ಇತರರಿದ್ದರು.
ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂ ಕಲಬುರಗಿಯಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನ ಕಾರ್ಯಕ್ರಮವನ್ನು ಡಾ.ರವೀಂದ್ರನಾಥ ಮೇಟಿ ಉದ್ಘಾಟಿಸಿದರು. ಡಾ.ಶರಣಬಸಪ್ಪ ಗಣಜಲಖೇಡ, ಡಾ.ಶರಣಬಸಪ್ಪ ಕ್ಯಾತನಾಳ, ಡಾ.ನಾಗರಾಜ ಪಾಟೀಲ್​, ಡಾ.ಅಂಬಾರಾಯ ರುದ್ರವಾಡಿ, ಡಾ.ಸಂಧ್ಯಾ ಕಾನೇಕರ್​, ಡಾ.ಅಮೃತಾ ಕುಲಕರ್ಣಿ ಇತರರಿದ್ದರು.
Published on
ಕಲಬುರಗಿ: ವೈದ್ಯ ವೃತ್ತಿ ಕೇವಲ ಉದ್ಯೋಗವಲ್ಲ, ಅದು ಸಮಾಜ ಸೇವೆಯ ಮಹತ್ತರ ಜವಾಬ್ದಾರಿ ಎಂದು ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂದ ಅಧ್ಯಕ್ಷ ಡಾ.ರವೀಂದ್ರನಾಥ ಮೇಟಿ ಹೇಳಿದರು.
ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ನಗರದ ವಿ.ಎಲ್​. ಪಾಟೀಲ್​ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನ ಕಾರ್ಯಕ್ರಮ ಉದ್ಘಾಟಿಸಿದ ಅವರು, ಸರ್ಕಾರಿ ವೈದ್ಯರು ಗ್ರಾಮೀಣ ಸೇರಿ ಎಲ್ಲ ವರ್ಗದ ಜನರಿಗೆ ಗುಣಮಟ್ಟದ ಸೇವೆ ನೀಡುವ ಮೂಲಕ ಆರೋಗ್ಯ ವ್ಯವಸ್ಥೆ ಬಲಪಡಿಸುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಡಾ.ಶರಣಬಸಪ್ಪ ಗಣಜಲಖೇಡ ಮಾತನಾಡಿದರು. ವಿಭಾಗೀಯ ಉಪಾಧ್ಯಕ್ಷರಾದ ಜಿಲ್ಲಾಸ್ಪತ್ರೆ ಆರ್​ಎಂಒ ಡಾ.ನಾಗರಾಜ ಪಾಟೀಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ವಿಭಾಗೀಯ ಸಹ ನಿರ್ದೇಶಕ ಡಾ.ಶಂಕರಪ್ಪ, ವಿಭಾಗೀಯ ಉಪನಿರ್ದೇಶಕ ಡಾ.ಅಂಬಾರಾಯ ರುದ್ರವಾಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ, ಜಿಲ್ಲಾ ಶಸಚಿಕಿತ್ಸಕಿ ಡಾ.ರುಕಿಯಾ ಅಸ್ನಾ ರಬಾ, ಹಿರಿಯ ಶಸಚಿಕಿತ್ಸಕ ಡಾ.ರಾಜಶೇಖರ ಮಾಲಿ ಇತರರಿದ್ದರು.
ಡಾ.ಮೋಹನ್​, ಡಾ.ರುದ್ರಗೌಡ, ಡಾ.ಸತೀಶ್​, ಡಾ.ಶೋಭಾ ಟಿ.ಆರ್​., ಕೃಷ್ಣಪ್ಪ, ಡಾ.ಸಚಿನ್​, ಡಾ.ಶ್ವೇತಾ, ಡಾ.ರವೀಂದ್ರ ಪಾಟೀಲ್​, ಡಾ.ಅಂಬರಪ್ಪ ಜಂಪಾ, ಡಾ.ಗಿರೀಶ್​ ಸ್ವಾಮಿ, ಡಾ.ದೀಪಾ ಸ್ವಾಮಿ, ಡಾ.ವೇಣುಗೋಪಾಲ ದೇಶಪಾಂಡೆ ವಿಶೇಷ ಆಹ್ವಾನಿತರಾಗಿದ್ದರು.
ಡಾ.ವಿನೋದಕುಮಾರ ಎಸ್​.ಎಚ್​., ಡಾ.ಇರ್ಫಾನ್​ ಅಲಿ, ಡಾ.ಸಂತೋಷ ಆಲಗೂರ, ಡಾ.ದೀಪಕಕುಮಾರ ರಾಠೋಡ, ಡಾ.ಸಂಧ್ಯಾ ಕಾನೇಕರ್​, ಡಾ.ಅಮೃತಾ ಕುಲಕರ್ಣಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಅತ್ಯುತ್ತಮ ಸೇವೆ ಸಲ್ಲಿಸಿದ ವೈದ್ಯರು, ನಿವೃತ್ತ ವೈದ್ಯರು, ವೈದ್ಯರ ಪ್ರತಿಭಾವಂತ ಮಕ್ಕಳು ಹಾಗೂ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವೈದ್ಯರನ್ನು ಸತ್ಕರಿಸಲಾಯಿತು.
"

ಸಂಘದ ಸದಸ್ಯರ ಏಕತೆ, ವೈದ್ಯರ ವೃತ್ತಿಪರ ಬೆಳವಣಿಗೆ ಹಾಗೂ ಸಾರ್ವಜನಿಕ ಆರೋಗ್ಯ ಸೇವೆ ಇನ್ನಷ್ಟು ಪರಿಣಾಮಕಾರಿ ಆಗಿಸಲು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವುದು ಅಗತ್ಯ.

— > ಡಾ.ಶರಣಬಸಪ್ಪ ಗಣಜಲಖೇಡ ಜಿಲ್ಲಾಧ್ಯಕ್ಷ, ವೈದ್ಯಾಧಿಕಾರಿಗಳ ಸಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net