ಎಸ್/ಎಸ್‌ಟಿ ವಿದ್ಯಾರ್ಥಿಗಳಿಗೆ ಆರ್‌ಟಿಇ ಬಂಪರ್: ಹೊಸ ನಿಯಮವೇನು ಗೊತ್ತಾ?

ಶಿಕ್ಷಣ ಹಕ್ಕು ಕಾಯ್ದೆ ಅಡಿ
ಶಿಕ್ಷಣ ಹಕ್ಕು ಕಾಯ್ದೆ ಅಡಿ
Published on

ಪ್ರಮುಖ ಮುಖ್ಯಾಂಶಗಳು

  • 2025-26ನೇ ಸಾಲಿನಲ್ಲಿ 8ನೇ ತರಗತಿ ವ್ಯಾಸಂಗ ಮಾಡಿದ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳು 2026-27ನೇಸಾಲಿಗೆ ಅದೇ ಶಾಲೆಯಲ್ಲಿಯೇ 10ನೇ ತರಗತಿವರೆಗೂ ಮುಂದುವರಿಸಬಹುದು ಕ್ರಮ
  • 2026-27ನೇಸಾಲಿಗೆ ಅದೇ ಶಾಲೆಯಲ್ಲಿಯೇ 10ನೇ ತರಗತಿವರೆಗೂ ಮುಂದುವರಿಸಬಹುದು ಕ್ರಮ ವಹಿಸುವಂತೆ ರಾಜ್ಯದ ಎಲ್ಲ ಜಿಲ್ಲಾ ಉಪ ನಿರ್ದೇಶಕರಿಗೆ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.
  • ಒಂದು ವೇಳೆ 9 ಮತ್ತು 10ನೇ ತರಗತಿಯಲ್ಲಿದ್ದು, ಕಾರಣಾಂತರಗಳಿಂದ ವರ್ಗಾವಣೆ ಪ್ರಮಾಣಪತ್ರ (ಟಿಸಿ) ನೀಡಿದ್ದರೆ, ಅದೇ ಶಾಲೆಯಲ್ಲಿಯೇ ಮುಂದುವರಿಸಲು ಅನುಮತಿ
ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ (ಆರ್‌ಟಿಇ) 8ನೇ ತರಗತಿವರೆಗೂ ಇದ್ದ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುವಂತೆ 9 ಮತ್ತು 10ನೇ ತರಗತಿವರೆಗೂ ವಿಸ್ತರಿಸಿ ಶಾಲಾ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ.
2025-26ನೇ ಸಾಲಿನಲ್ಲಿ 8ನೇ ತರಗತಿ ವ್ಯಾಸಂಗ ಮಾಡಿದ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳು 2026-27ನೇಸಾಲಿಗೆ ಅದೇ ಶಾಲೆಯಲ್ಲಿಯೇ 10ನೇ ತರಗತಿವರೆಗೂ ಮುಂದುವರಿಸಬಹುದು ಕ್ರಮ ವಹಿಸುವಂತೆ ರಾಜ್ಯದ ಎಲ್ಲ ಜಿಲ್ಲಾ ಉಪ ನಿರ್ದೇಶಕರಿಗೆ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.
ಒಂದು ವೇಳೆ 9 ಮತ್ತು 10ನೇ ತರಗತಿಯಲ್ಲಿದ್ದು, ಕಾರಣಾಂತರಗಳಿಂದ ವರ್ಗಾವಣೆ ಪ್ರಮಾಣಪತ್ರ (ಟಿಸಿ) ನೀಡಿದ್ದರೆ, ಅದೇ ಶಾಲೆಯಲ್ಲಿಯೇ ಮುಂದುವರಿಸಲು ಅನುಮತಿ ನೀಡಿಸುವಂತೆಯೂ ಕ್ರಮ ವಹಿಸುವಂತೆ ತಿಳಿಸಲಾಗಿದೆ. 
ಈ ಬಾರಿಯ ಬಜೆಟ್‌ನಲ್ಲಿ ಯೋಜನೆಯನ್ನು ೋಷಿಸಲಾಗಿತ್ತು. ಅದರಂತೆ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
"

ಆರ್‌ಟಿಇ ಕೇಂದ್ರ ಸರ್ಕಾರದ ಯೋಜನೆಯಾಗಿರುವ ಕಾರಣ ಮತ್ತು 8ನೇ ತರಗತಿವರೆಗೆ ಮಾತ್ರ ಯೋಜನೆ ಇರುವುದರಿಂದ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರದ ಅನುಮತಿ ಮತ್ತು ಕಾನೂನು ತಿದ್ದುಪಡಿ ಬೇಕಾಗಬಹುದು.

— - ಡಿ. ಶಶಿಕುಮಾರ್, ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ


"

14 ವರ್ಷದೊಳಗಿನ ನಿಯಮಗಳಲ್ಲಿ ಬದಲಾವಣೆ ಮಾಡಿದ್ದಲ್ಲಿ ಕಾನೂನು ತಿದ್ದುಪಡಿ ಅವಶ್ಯವಿರುತ್ತದೆ. ಆದರೆ, ಯೋಜನೆಯನ್ನು 10ನೇ ತರಗತಿವರೆಗೂ ವಿಸ್ತರಣೆ ಮಾಡಿರುವುದರಿಂದ ಇದಕ್ಕೆ ಕಾನೂನು ತಿದ್ದುಪಡಿ ಅವಶ್ಯವಿಲ್ಲ.

— - ವಿಕಾಸ್ ಕಿಶೋರ್ ಸೂರಳ್ಕರ್, ಶಾಲಾ ಶಿಕ್ಷಣ ಆಯುಕ್ತ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net