10ಕ್ಕೆ ಸಚಿವರು, ಶಾಸಕರಿಗೆ ಡಿಕೆಶಿ ಔತಣಕೂಟ

 DCM D.K. Shivakumar
DCM D.K. Shivakumar
Published on
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷನಾಗಿ ಶುಕ್ರವಾರ(ಮಾ.6)ಕ್ಕೆ 6 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಮಾ.10ರಂದು ಸಚಿವರಿಗೆ ಮತ್ತು ಶಾಸಕರಿಗೆ ಔತಣಕೂಟ ಏರ್ಪಡಿಸಿರುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಅಧ್ಯಕ್ಷ ಸ್ಥಾನ ಅಲಂಕರಿಸಿ 6 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಔತಣಕೂಟ ಏರ್ಪಡಿಸಿದ್ದೆನೆ. ಸಿಎಂ ಸಿದ್ದರಾಮಯ್ಯ ಸೇರಿ ಎಲ್ಲ ಸಚಿವರು, ಕಾಂಗ್ರೆಸ್ ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ಔತಣಕೂಟ ಆಯೋಜನೆ ಮಾಡಿದ್ದೇನೆ. ಇಲ್ಲವಾದರೆ, ಪ್ರತಿಯೊಬ್ಬರೂ ಹೂಗುಚ್ಛ ತಂದು ವ್ಯರ್ಥ ಮಾಡುತ್ತಾರೆ. ಆದರಿಂದ ನಾನೇ ಅವರನ್ನು ಕರೆದಿದ್ದೇನೆ ಎಂದರು.
ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರ 8 ವರ್ಷಗಳ ಅಧ್ಯಕ್ಷ ಸ್ಥಾನದ ದಾಖಲೆ ಮುರಿಯುತ್ತೀರಾ? ಎಂದು ಕೇಳಿದಾಗ, ಅಂತಹ ಆಸೆ ನನಗಿಲ್ಲ.
ಹೊಸಬರು ಮತ್ತು ಬಿಸಿ ರಕ್ತದವರು ಬರಬೇಕೆಂಬುದು ನನ್ನ ಆಸೆ. ನಾನೂ ಸೇರಿ ಕೆಲವರು ಮೊದಲಬಾರಿ ಶಾಸಕ ಆದ ಕೂಡಲೇ ಸಚಿವ ಸ್ಥಾನ ಅನುಭವಿಸಿದವರು. ಹೊಸಬರಿಗೆ ಅವಕಾಶ ಮಾಡಿಕೊಡಬೇಕೆಂಬುದು ನನ್ನ ಆಶಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net