ಚಿಂಚೋಳಿ: ಬಂಜಾರ ಸಮಾಜವು ಸಾಕಷ್ಟು ಹಿಂದುಳಿದಿದ್ದು, ಜನರು ಬಡತನದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಶ್ರೀಮಂತ, ಬಡವ ಎನ್ನದೆ ಸಮಾನತೆಯಿಂದ ಒಗ್ಗೂಡಿ ಬದುಕು ಕಟ್ಟಿಕೊಳ್ಳಬೇಕು ಎಂದು ಸಮಾಜದ ಮುಖಂಡ ಮಾಣಿಕ ಜಾಧವ್ ಹೇಳಿದರು. ವೆಂಕಟಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಪುನಾಯಕ ತಾಂಡಾದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಂಜಾರ ಸಮಾಜದ ಮಹಾಪಂಚಯತ್ ಸಭೆಯಲ್ಲಿ ವರದಣೆ ನಿಮೂರ್ಲನೆ, ಮೂಢನಂಬಿಕೆ ನಿಷೇಧ ಕುರಿತು ನಿರ್ಯಣ ಮಂಡಿಸಿ ಮಾತನಾಡಿದ ಅವರು, ವಿವಾಹದಲ್ಲಿ ಡಿಜೆ, ಹಳದಿ ಕಾರ್ಯಕ್ರಮ ನಿಷೇಧ. ವರದಣೆಗಾಗಿ ಹುಡಗ& ಹುಡುಗಿ ಕಡೆಯವರು ಡಿಮಾಂಡ್ ಮಾಡುವಂತಿಲ್ಲ ಎಂದು ತಿಳಿಸಿದರು. ರಾಮಶೆಟ್ಟಿ, ಜಗನ್ನಾಥ ರಾಠೋಡ್, ವಿಠ್ಠಲ್ ಕಾರಭಾರಿ, ತುಕಾರಾಮ ಮೋಟಿಮೋಕ್, ಬಲಭೀಮ, ಹರಿಸಿಂಗ್ ಮಾಸ್ಟರ್, ಭೀಮಶೆಟ್ಟಿ ಚವ್ಹಾಣ್, ಮಾರುತಿ ಮಾಸ್ಟರ್, ರಾಜು ರಾಠೋಡ್, ಹೀರಾಲಾಲ್ ಚವ್ಹಾಣ್, ಲಿಂಬಾಜಿ ನಾಯಕ, ಗೋಪಾಲ ಖೀಮು ನಾಯಕ, ಜೈಪಾಲ್ ನಾಯಕ, ಭೀಮಜಿ ನಾಯ್ಕ, ಗೋಪಾಲ ನಾಯಕ, ತುಕಾರಾಮ ನಾಯಕ, ಮಾಣಿಕ್ ನಾಯಕ, ಶಂಕರ ನಾಯಕ, ಪ್ರೇಮ್ಸಿಂಗ್ ನಾಯಕ, ಸುಭಾಷ ನಾಯಕ ಇತರರಿದ್ದರು.