ಬಡ ವಿದ್ಯಾರ್ಥಿಗಳಿಗೆ ವಾರ್ಷಿಕ ಶುಲ್ಕ ವಿತರಣೆ Distribution
ಬೈರಮಂಗಲದಲ್ಲಿರುವ ವೃಷಭಾವತಿ ಪ್ರೌಢಶಾಲೆಯಲ್ಲಿನ Distributionಬಡ ವಿದ್ಯಾರ್ಥಿಗಳ ಶಾಲೆಯ ವಾರ್ಷಿಕ ಶುಲ್ಕದ ಚೆಕ್ ಅನ್ನು ಆಸರೆ ಸಂಸ್ಥೆಯಿಂದ ನೀಡಲಾಯಿತು. ದಾನಿ ಮಿಶಾ ಗಣೇಶ್, ರೋಟರಿ ಬಿಡದಿ ಸೆಂಟ್ರಲ್ ನ ಕಾರ್ಯದರ್ಶಿ ಕೆ.ಎನ್.ಎನ್ ರಮೇಶ್ ವೃಷಭಾವತಿ ವಿದ್ಯಾ ಸಂಸ್ಥೆಯ ಪ್ರಕಾಶ್, ಪ್ರಾಂಶುಪಾಲ ಪ್ರಕಾಶ್, ಆಸರೆ ಸಂಸ್ಥೆ ಮಹೇಶ್ ಬಸವರಾಜ ಅರಸ್ ಸತೀಶ್, ಪ್ರೀತಿ, ವೇದರತ್ನ, ನಟರಾಜ ಇದ್ದರು.
ಬಿಡದಿ: ಬೈರಮಂಗಲದಲ್ಲಿನ ಅನುದಾನಿತ ಶಾಲೆ ವೃಷಭಾವತಿ ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಬಡ ಹಾಗೂ ಅನಾಥ ಮಕ್ಕಳ ವಿದ್ಯಾಭ್ಯಾಸ ಮುಂದುವರಿಸಲು 30ರಿಂದ 40 ಮಕ್ಕಳ ಶಾಲಾ ಶುಲ್ಕವನ್ನು ಆಸರೆ ಸಂಸ್ಥೆಯಿಂದ ನೀಡಲಾಯಿತು.
ವೃಷಭಾವತಿ ವಿದ್ಯಾಸಂಸ್ಥೆ ಅಧ್ಯಕ್ಷ ವಿಷಕಂಠಪ್ಪ ಅವರಿಗೆ ಚೆಕ್ ಹಸ್ತಾಂತರಿಸಲಾಯಿತು. ಪ್ರತಿ ವರ್ಷವೂ ಆಸರೆ ಸಂಸ್ಥೆಯಿಂದ ವಿದ್ಯಾರ್ಥಿಗಳ ಶಾಲಾ ಶುಲ್ಕವನ್ನು ಪಾವತಿ ಮಾಡಿಕೊಂಡು ಬರಲಾಗುತ್ತಿದೆ.Distribution
ಮುಖ್ಯ ದಾನಿಗಳಾದ ಮಿಶಾ ಗಣೇಶ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಕಳೆದ ವರ್ಷ ಆಶ್ರಯ ಸಂಸ್ಥೆಯಿಂದ ಪ್ರಯೋಜನ ಪಡೆದುಕೊಂಡ ವಿದ್ಯಾರ್ಥಿಗಳಲ್ಲಿ ಐದು ಜನ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ವಿಶೇಷವಾಗಿತ್ತು.