ಎಸ್​ಐಆರ್​ನಲ್ಲಿ ಶಿಸ್ತುಬದ್ಧ ಕಾರ್ಯ ಅವಶ್ಯ

ಸೇಡಂನಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್​ ಪಕ್ಷದ ಬಿಎಲ್​ಎಗಳ ಸಭೆಯಲ್ಲಿ ಮಾಜಿ ಸಚಿವೆ ಉಮಾಶ್ರೀ ಮಾತನಾಡಿದರು. ಎಂಎಲ್​ಸಿ ಜಗದೇವ ಗುತ್ತೇದಾರ್​, ನಾಗೇಶ್ವರರಾವ ಮಾಲಿಪಾಟೀಲ್​, ಬಸವರಾಜ ಪಾಟೀಲ್​ ಊಡಗಿ, ಶಿವರಶಣರೆಡ್ಡಿ ಪಾಟೀಲ್​, ರವೀಂದ್ರ ನಂದಿಗಾಮ, ಲಲಿತಾ ಯಾಕಾಪುರ ಇದ್ದರು.
ಸೇಡಂನಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್​ ಪಕ್ಷದ ಬಿಎಲ್​ಎಗಳ ಸಭೆಯಲ್ಲಿ ಮಾಜಿ ಸಚಿವೆ ಉಮಾಶ್ರೀ ಮಾತನಾಡಿದರು. ಎಂಎಲ್​ಸಿ ಜಗದೇವ ಗುತ್ತೇದಾರ್​, ನಾಗೇಶ್ವರರಾವ ಮಾಲಿಪಾಟೀಲ್​, ಬಸವರಾಜ ಪಾಟೀಲ್​ ಊಡಗಿ, ಶಿವರಶಣರೆಡ್ಡಿ ಪಾಟೀಲ್​, ರವೀಂದ್ರ ನಂದಿಗಾಮ, ಲಲಿತಾ ಯಾಕಾಪುರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವೆ ಉಮಾಶ್ರೀ ಅನಿಸಿಕೆ
  • ಸೇಡಂನಲ್ಲಿ ಕಾಂಗ್ರೆಸ್​ ಕಾರ್ಯಕರ್ತರ ಸಭೆ
ಸೇಡಂ: ಎಸ್​ಐಆರ್​ ಪ್ರಕ್ರಿಯೆಯಲ್ಲಿ ಬಿಎಲ್​ಒ ಮತ್ತು ಉಸ್ತುವಾರಿಗಳು ಸೇರಿ ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ಆದರೆ ಲೋಪದೋಷಗಳ ಬಗ್ಗೆ ಸ್ಪಷ್ಟತೆ ಇಟ್ಟುಕೊಂಡು ಶಿಸ್ತುಬದ್ಧವಾಗಿ ಕೆಲಸ ಮಾಡುವುದು ಅವಶ್ಯವಾಗಿದೆ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.
ಬ್ಲಾಕ್​ ಕಾಂಗ್ರೆಸ್​ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್​ಐಆರ್​) ಕುರಿತು ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಶಿಸ್ತುಬದ್ಧವಾಗಿ ಕಾರ್ಯವಾದರೆ ಮಾತ್ರ ಮತದಾರರ ಹೆಸರುಗಳು ಉಳಿಸಿಕೊಳ್ಳಲು ಸಾಧ್ಯ. ಆದ್ದರಿಂದ ಬಿಎಲ್​ಎಗಳ ಜವಾಬ್ದಾರಿಯುತವಾಗಿ ಬೂತ್​ ಮಟ್ಟದಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್​ ಸದಸ್ಯ ಜಗದೇವ ಗುತ್ತೇದಾರ್​ ಮಾತನಾಡಿ, ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗುವ ಕಾರ್ಯಕರ್ತರು ಎಸ್​ಐಆರ್​ ಪ್ರಕ್ರಿಯೆಯಲ್ಲೂ ಮನೆ& ಮನೆಗೆ ತೆರಳಿ ಯಶಸ್ವಿ ಕೆಲಸಕ್ಕೆ ಕೈಜೋಡಿಸಬೇಕು ಎಂದು ತಿಳಿಸಿದರು.
ರಾಜ್ಯ ತೋಟಗಾರಿಕೆ ಮಹಾಮಂಡಳಿ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ್​ ಊಡಗಿ ಮಾತನಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗೇಶ್ವರರಾವ್​ ಮಾಲಿಪಾಟೀಲ್​, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಸೋಮಶೇಖರ ಹಿರೇಮಠ, ಸೇಡಂ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ್​, ಮುಧೋಳ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ರವೀಂದ್ರ ನಂದಿಗಾಮ, ಮಹಿಳಾ ಕಾಂಗ್ರೆಸ್​ ಅಧ್ಯೆ ಲಲಿತಾ ಯಾಕಾಪುರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net