ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆ ಮತ್ತು 4 ಲಕ್ಷ ಕೊಳವೆಬಾವಿಗಳನ್ನು ಬಳಕೆ ಮಾಡಲಾಗುತ್ತಿದೆ. ಒಟ್ಟಾರೆ 2,825 ಎಂಎಲ್‌ಡಿ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಇದರಲ್ಲಿ 2,580 ಎಂಎಲ್‌ಡಿ ತ್ಯಾಜ್ಯ ನೀರು ಉತ್ಪತ್ತಿಯಾಗುತ್ತಿದೆ. ಈ ಪೈಕಿ 1,364 ಎಂಎಲ್‌ಡಿ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲು ಮಾತ್ರ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ 1,215 ಎಂಎಲ್‌ಡಿ ನೀರು ಸಂಸ್ಕರಣೆಯಾಗುತ್ತಿದೆ. 1,147 ಎಂಎಲ್‌ಡಿ ನೀರು ಸಂಸ್ಕರಣೆಗೆ ಎಸ್‌ಟಿಪಿ ಕೆಲಸ ಕಾಮಗಾರಿ ಆರಂಭವಾಗಬೇಕಿದೆ. 2029ರೊಳಗೆ 9 ಎಸ್‌ಟಿಪಿ ಕೇಂದ್ರಗಳ ಸಂಸ್ಕರಣೆ ಸಾಮರ್ಥ್ಯ ಪೂರ್ಣಗೊಳ್ಳಲಿದೆ ಎಂದರು.