ಜೇವರ್ಗಿ, ಕಲಬುರಗಿ, ಕಮಲಾಪೂರ, ಆಳಂದ, ಕಾಳಗಿ, ಅಫಜಲಪುರ ಹಾಗೂ ಚಿಂಚೋಳಿ ತಾಲೂಕಿನ ವಯೋಮಿತಿ 18ರಿಂದ 50 ವರ್ಷದೊಳಗಿನ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಕನಿಷ್ಠ 10ನೇ ತರಗತಿ ಹಾಗೂ ತತ್ಸಮಾನ ಪರೀಕ್ಷೆ ಯಲ್ಲಿ ಉತ್ತೀರ್ಣರಾಗಿರಬೇಕು. ಕಲಬುರಗಿ ಜಿಲ್ಲೆಯ ವಾಸಸ್ಥಳ ಪ್ರಮಾಣಪತ್ರ ಹೊಂದಿರಬೇಕು. ಬೇರೆ ಯಾವುದೇ ವಿಮಾ ಸಂಸ್ಥೆ, ಕಂಪನಿ ಅಥವಾ ಸಂಗಳ ನೇರ ಪ್ರತಿನಿಧಿಯಾಗಿರಬಾರದು.