ಇದಲ್ಲದೆ, ನಿವೃತ್ತಿ ಅಂಚಿನಲ್ಲಿ ಇರುವ ಅಧಿಕಾರಿಗಳಿಗೆ ವರ್ಗಾವಣೆಯಿಂದ ವಿನಾಯಿತಿ ನೀಡಬೇಕು. ಕುಟುಂಬ, ವೈದ್ಯಕೀಯ ಚಿಕಿತ್ಸೆ, ಮಕ್ಕಳ ಶಿಕ್ಷಣ, ವಯಸ್ಸಾದ ಪೋಷಕರು ಮತ್ತು ನಿವೃತ್ತಿಗೆ ಸಂಬಂಧಿಸಿದ ದಾಖಲೆ ನಿರ್ವಹಣೆ ಅಗತ್ಯವಿದೆ. ಆದರಿಂದ ಒಂದು ವರ್ಷಕ್ಕಿಂತ ಕಡಿಮೆ ಸೇವೆ ಉಳಿದಿರುವ ನೌಕರರಿಗೆ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡುವಂತೆ ಕೋರಿದ್ದ ಮನವಿಗೆ ಕಂದಾಯ ಇಲಾಖೆ ಸಮ್ಮತಿಸಿದೆ. ಇಂತಹ ಉದ್ಯೋಗಿಗಳಿಗೆ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡಲಾಗಿದೆ. ಇದು ಹಿರಿಯ ಉಪ-ನೋಂದಣಿದಾರರು ಮತ್ತು ಉಪ-ನೋಂದಣಿದಾರರಿಗೆ ಪ್ರತ್ಯೇಕ ಹಿರಿತನದ ಪಟ್ಟಿಯನ್ನು ಸಹ ಅನುಮೋದಿಸಿತು.