ಒಂದನೇ ತರಗತಿ ಮಕ್ಕಳಿಗೆ ಕಂಪ್ಯೂಟರ್, ಎಐ, ರೋಬಾಟ್ ಕಲಿಕೆಗಾಗಿ ‘ಡಿಜಿ ಪ್ರವೇಶ’ ಪಠ್ಯಪುಸ್ತಕ

‘ಡಿಜಿ ಪ್ರವೇಶ’ವೆಂಬ ಪಠ್ಯಪುಸ್ತಕ
‘ಡಿಜಿ ಪ್ರವೇಶ’ವೆಂಬ ಪಠ್ಯಪುಸ್ತಕ
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಮತ್ತು ಕೃತಕ ಬುದ್ಧಿಮತ್ತೆ (ಎಐ), ರೋಬಾಟ್ ತಂತ್ರಜ್ಞಾನದ ಉಪಯೋಗವನ್ನು ಕಲಿಸಲಾಗುತ್ತಿದೆ.
  • ಇದಕ್ಕಾಗಿ ಶಾಲಾ ಶಿಕ್ಷಣ ಇಲಾಖೆಯು ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ‘ಡಿಜಿ ಪ್ರವೇಶ’ ಎಂಬ ಪಠ್ಯಪುಸ್ತಕವನ್ನು ಪ್ರಕಟಿಸಿದೆ.
  • ಮಕ್ಕಳ ವಯಸ್ಸಿಗೆ ಅನುಗುಣವಾಗಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಪುಸ್ತಕ ಪ್ರಕಟಿಸಿದೆ.
ಎನ್.ಎಲ್. ಶಿವಮಾದು
ಬೆಂಗಳೂರು: ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ನೀಡಲು ಸಿದ್ಧತೆ ಮಾಡಿಕೊಂಡಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈಗಾಗಲೇ ಮಾಹಿತಿ ತಂತ್ರಜ್ಞಾನ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಇದೀಗ ‘ಡಿಜಿ ಪ್ರವೇಶ’ವೆಂಬ ಪಠ್ಯಪುಸ್ತಕವನ್ನು ಪ್ರಕಟಿಸಿದೆ.
ತಂತ್ರಜ್ಞಾನ ಕಲಿಕೆಯು ಶೈಕ್ಷಣಿಕ ಗುಣಮಟ್ಟ ಕಲಿಕೆಯ ಭಾಗವಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಮತ್ತು ಕೃತಕ ಬುದ್ಧಿಮತ್ತೆ (ಎಐ), ರೋಬಾಟ್ ತಂತ್ರಜ್ಞಾನದ ಉಪಯೋಗವನ್ನು ಕಲಿಸಲಾಗುತ್ತಿದೆ. ಇದಕ್ಕಾಗಿ ಶಾಲಾ ಶಿಕ್ಷಣ ಇಲಾಖೆಯು ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ‘ಡಿಜಿ ಪ್ರವೇಶ’ ಎಂಬ ಪಠ್ಯಪುಸ್ತಕವನ್ನು ಪ್ರಕಟಿಸಿದೆ.
ಸರ್ಕಾರಿ ಶಾಲಾ ಮಕ್ಕಳು ಕೂಡ ಖಾಸಗಿ ಶಾಲಾ ವಿದ್ಯಾರ್ಥಿಗಳಿಗೆ ಸಮನಾಗಿ ನೇರವಾಗಿ ಕಂಪ್ಯೂಟರ್ ಮತ್ತು ಎಐ ಶಿಕ್ಷಣ ಕಲಿಸುವುದು, ಎಲ್ಲ ವಿಷಯಗಳನ್ನು ಕಲಿಸುವಾಗ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ಒಳಗೊಳ್ಳುವ ಉದ್ದೇಶ ಹೊಂದಲಾಗಿದೆ. ಮಕ್ಕಳ ವಯಸ್ಸಿಗೆ ಅನುಗುಣವಾಗಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಪುಸ್ತಕ ಪ್ರಕಟಿಸಿದೆ.

ಏನೆಲ್ಲ ವಿಷಯ ಕಲಿಕೆ?

ಮನೆ ವತ್ತು ಶಾಲೆಯಲ್ಲಿ ಬಳಸಬಹುದಾದ ಸಾಮಾನ್ಯ ಡಿಜಿಟಲ್ ಸಾಧನಗಳಾದ ಮೊಬೈಲ್ ೆನ್, ದೂರದರ್ಶನ ಮತ್ತು ಕಂಪ್ಯೂಟರ್ ಗುರುತಿಸುವುದು. ದೈನಂದಿನ ಜೀವನದಲ್ಲಿ ಬಳಸುವ ಸಾಮಾನ್ಯ ಸಾಧನಗಳನ್ನು ಅವುಗಳ ಮೂಲ ಉಪಯೋಗಗಳಾದ ಕರೆ ಮಾಡುವುದು, ವೀಕ್ಷಿಸುವುದು ಅಥವಾ ಕಲಿಯುವುದಕ್ಕೆ ಹೊಂದಿಸುವುದಾಗಿದೆ. ಡಿಜಿಟಲ್ ಮತ್ತು ಡಿಜಿಟಲ್ ಅಲ್ಲದ ಸಾಧನಗಳನ್ನು ಅವಲೋಕಿಸಿ ವ್ಯತ್ಯಾಸವನ್ನು ಗುರುತಿಸುವುದು.
ಡಿಜಿಟಲ್ ಸಾಧನಗಳನ್ನು ಬಳಸುವಾಗ ಮೂಲ ಸುರಕ್ಷತಾ ನಿಯಮಗಳನ್ನು ಪಾಲಿಸುವುದು, ಗ್ಯಾಜೆಕ್ಟ್‌ಗಳನ್ನು ಬಳಸುವ ವೇಳೆ ಕುಳಿತುಕೊಳ್ಳಬೇಕಾದ ಭಂಗಿಗಳನ್ನು ಅರಿಯುವುದನ್ನು ತಿಳಿಸಲಾಗುತ್ತದೆ.

ಒಂದನೇ ತರಗತಿಗೆ ರೋಬಾಟ್ ಪಾಠ

ಒಂದನೇ ತರಗತಿಗೆ ‘ಪುಟ್ಟಿ ಮತ್ತು ರೋಬಾಟ್’ ಎಂಬ ಪಾಠವಿದೆ. ಅದರಲ್ಲಿ ರೋಬಾಟ್ ಯಾವ ರೀತಿ ಕಾರ್ಯನಿರ್ವಹಿಸಲಿದೆ. ಹೇಗೆ ಸೂಚನೆಗಳನ್ನು ನೀಡಬೇಕು, ಸೂಚನೆ ನೀಡದಿದ್ದರೆ ರೋಬಾಟ್ ಹೇಗಿರುತ್ತದೆ ಎಂಬ ಮಾಹಿತಿಯನ್ನು ನೀಡಲಾಗಿದೆ.
‘ಡಿಜಿಟಲ್ ಗೆಳೆಯರು’ ಪಾಠದಲ್ಲಿ ಡಿಜಿಟಲ್ ಸಾಧನಗಳನ್ನು ಆನ್, ಆ್, ಓಪನ್, ಕ್ಲೋಸ್ ಮಾಡುವುದು ಮತ್ತು ನಾವು ನೀಡುವ ಕ್ರಿಯೆಗಳಿಗೆ ಸಾಧನಗಳು ಹೇಗೆ ಪ್ರತಿಕ್ರಿಯೆ ನೀಡುತ್ತವೆ ಎಂಬುದನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ. ಹಾಗೆಯೇ ಸ್ಮಾರ್ಟ್ ಸಾಧನಗಳು ನಾವು ಮಾಡುವ ಸ್ಪರ್ಶ, ಧ್ವನಿಯಿಂದ ಹೇಗೆ ಆಯ್ಕೆಗಳು ತೆರೆದುಕೊಳ್ಳಲಿವೆ. ಅವುಗಳನ್ನು ಅವಲೋಕಿಸುವುದು ಹೇಗೆ ಎಂಬುದನ್ನು ತಿಳಿಸಲಾಗಿದೆ.

ಎರಡನೇ ತರಗತಿಯಲ್ಲಿ ಡಿಜಿಟಲ್ ಸುರಕ್ಷತೆ

ವಿದ್ಯುತ್ ಮತ್ತು ಡಿಜಿಟಲ್ ಸಾಧನಗಳನ್ನು ಬಳಸುವ ವೇಳೆ ಹೇಗೆ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ಸೂಕ್ಷ್ಮ,ವಾಗಿ ತಿಳಿಸಲಾಗಿದೆ. ವಿದ್ಯುತ್ ತಂತಿ, ಪ್ಲಗ್ ಹಾಕುವುದು, ಕಂಪ್ಯೂಟರ್ ಆನ್ ಮಾಡುವ ಬಗ್ಗೆ ಮಾಹಿತಿ ಇದೆ.
ಮೊಬೈಲ್ ೆನ್, ಕಂಪ್ಯೂಟರ್/ಲ್ಯಾಪ್‌ಟಾಪ್, ಡಿಜಿಟಲ್ ಕ್ಯಾಮರಾ, ಪೆನ್ ಡ್ರೈನ್, ಸ್ಮಾರ್ಟ್ ವಾಚ್, ಸ್ಮಾರ್ಟ್ ಟಿವಿಯ ಬಳಕೆಯಿಂದ ಏನಲ್ಲ ಉಪಯೋಗಗಳಿವೆ ಎಂದು ತಿಳಿಸಲಾಗಿದೆ.

ಎನ್‌ಸಿಇಆರ್‌ಟಿಗಿಂತ ವಿಶೇಷ

ಡಿಎಸ್‌ಇಆರ್‌ಟಿ ಪ್ರಕಟಿಸಿರುವ ‘ಡಿಜಿ ಪ್ರವೇಶ’ ಪುಸ್ತಕವು ಶಾಲಾ ಮಕ್ಕಳ ಕಂಪ್ಯೂಟರ್ ಶಿಕ್ಷಣಕ್ಕೆ ಎನ್‌ಸಿಇಆರ್‌ಟಿ ಪ್ರಕಟಿಸಿರುವ ಪುಸ್ತಕಕ್ಕಿಂತ ವಿಭಿನ್ನವಾಗಿದೆ. ಎನ್‌ಸಿಇಆರ್‌ಟಿಯಲ್ಲಿ ಡಿಜಿಟಲ್ ಶಿಕ್ಷಣಕ್ಕೆ ಕುರಿತ ಪಾಠಗಳನ್ನು ವಿವಿಧ ವಿಷಯಗಳ ಪಾಠಗಳಲ್ಲಿಯೇ ಡಿಜಿಟಲ್ ಶಿಕ್ಷಣವನ್ನು ಸಹ ಸೇರ್ಪಡೆ ಮಾಡಿದೆ. ಆದರೆ, ರಾಜ್ಯದಲ್ಲಿ ಅದಕ್ಕಾಗಿಯೇ ಪ್ರತ್ಯೇಕವಾಗಿ ಪಠ್ಯಪುಸ್ತಕ ಪ್ರಕಟಿಸಿ ಹೆಚ್ಚಿನ ಆದ್ಯತೆ ನೀಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net