ಡೀಸೆಲ್​ ವ್ಯತ್ಯಯ ವಾಹನ ಸವಾರರು ಪರದಾಟ

ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿಯ ಪೆಟ್ರೋಲ್​ ಪಂಪ್​ನಲ್ಲಿ ಡೀಸೆಲ್​ ಇಲ್ಲದ ಕಾರಣ ಸರಕು ತುಂಬಿದ ಲಾರಿಯೊಂದು ನಿಂತಿರುವುದು.
ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿಯ ಪೆಟ್ರೋಲ್​ ಪಂಪ್​ನಲ್ಲಿ ಡೀಸೆಲ್​ ಇಲ್ಲದ ಕಾರಣ ಸರಕು ತುಂಬಿದ ಲಾರಿಯೊಂದು ನಿಂತಿರುವುದು.
Published on
ಯಾದಗಿರಿ: ದಿನದಿಂದ ದಿನಕ್ಕೆ ತೈಲ ಬೆಳೆ ಹೆಚ್ಚಳವಾಗುತ್ತಿದ್ದು, ಇನ್ನೊಂದೆಡೆ ಪಂಪ್​ಗಳಲ್ಲಿ ಡೀಸೆಲ್​ ಪೂರೈಕೆಯಲ್ಲಿ ವ್ಯತ್ಯಯದಿಂದ ವಾಹನ ಸವಾರರು ತೀವ್ರ ಪರದಾಡುವಂತಾಗಿದೆ.
ಡೀಸೆಲ್​ ಸಿಗದ ಕಾರಣ ರೈತರು, ಟ್ರಾಕ್ಟರ್​, ಲಾರಿ, ಟ್ರಕ್​, ಕ್ರೂಸರ್​, ಟಂಟಂ ಮತ್ತು ಆಟೋ ಸೇರಿ ಇತರೆ ವಾಹನಗಳು ಡೀಸೆಲ್​ ಸಿಗದೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಯಾದಗಿರಿ&ಶಹಾಪುರ ಹಾಗೂ ಯಾದಗಿರಿ&ಸುರಪುರ ರಾಜ್ಯ ಹೆದ್ದಾರಿಗಳಲ್ಲಿ, ಅಲ್ಲಲ್ಲಿ ಸಾಕಷ್ಟು ಪೆಟ್ರೋಲ್​ ಪಂಪ್​ಗಳಿವೆ. ಕಳೆದ 10 ದಿನಗಳಿಂದ ಡೀಸೆಲ್​ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹೆದ್ದಾರಿಯ ಮೇಲೆ ಬಂಕ್​ ಇರುವ ಕಾರಣ ಡೀಸೆಲ್​ ಸಿಗಲಿದೆ ಎಂಬ ಭರವಸೆಯಿಂದ ಬಂದ ವಾಹನಗಳಿಗೆ ನಿರಾಸೆ ತರಿಸಿದೆ.
ಮುಂಗಾರು ಹಂಗಾಮು ಇರುವ ಕಾರಣ ರೈತರು ಟ್ರಾಕ್ಟರ್​ ಮೂಳಕ ರಂಟೆ ಕುಂಟೆ ಹೊಡೆಯಲು ಡೀಸೆಲ್​ ಸಮಸ್ಯೆ ಎದುರಾಗಿದೆ. ಮತ್ತೊಂದಡೆ ಭತ್ತದ ಬೆಳೆಗಾರರು ಭತ್ತ ನಾಟಿಗೊಸ್ಕರ ಭತ್ತದ ಗದ್ದೆಗಳಲ್ಲಿ ಪಟ್ಲರ್​, ಭತ್ತ ಗದ್ದೆ ಹಸನುಗೊಳಿಸಿಲು ಸಿದ್ಧತೆ ಕೈಗೊಂಡಿದ್ದಾರೆ. ರೈತರಿಗೂ ಕೂಡ ಡೀಸೆಲ್​ನ ಬಿಸಿ ತಟ್ಟಿದೆ. ಇದರಿಂದ ಕೆಲವೊಂದು ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಂತಾಗಿವೆ.
ಇನ್ನೂ ದೂರದ ಹುಬ್ಬಳ್ಳಿ&ಧಾರವಾಡ, ಬೆಳಗಾವಿ, ಗೊವಾ ಇತರೆಡೆ ಹೋಗುವ ಸರಕು ತುಂಬಿದ ಲಾರಿಗಳು ಡೀಸೆಲ್​ಸಿಗದ ಕಾರಣ ಹೆದ್ದಾರಿಯಲ್ಲಿಯೇ ಸರಕು ಹೊತ್ತ ಲಾರಿ ನಿಂತುಕೊಂಡಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net