ಧರ್ಮಸ್ಥಳದ ಜನಪರ ಕಾರ್ಯ ದೇಶಕ್ಕೆ ಮಾದರಿ

ಕಮಲಾಪುರ ತಾಲೂಕಿನ ಯಕ್ಕಂಚಿ ಕ್ರಾಸ್​ ಬಳಿ ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿಂದ ಹಮ್ಮಿಕೊಂಡ ಕೆರೆ ಹಸ್ತಾಂತರ ಕಾರ್ಯಕ್ರಮದ ನಾಮಫಲಕವನ್ನು ಶಾಸಕ ಬಸವರಾಜ ಮತ್ತಿಮಡು ಅನಾವರಣಗೊಳಿಸಿದರು. ಗಣಪತಿ ಮಾಳಂಜಿ, ಸಿದ್ದಣ್ಣಗೌಡ ಪಾಟೀಲ್​, ಬಸವರಾಜ ಕುಮ್ಮಣಿ, ಗಿರೀಶ ಮಾಲಿಪಾಟೀಲ್​, ಅಭಿಜಿತ್​ ಗಾಯಕವಾಡ ಇತರರಿದ್ದರು.
ಕಮಲಾಪುರ ತಾಲೂಕಿನ ಯಕ್ಕಂಚಿ ಕ್ರಾಸ್​ ಬಳಿ ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿಂದ ಹಮ್ಮಿಕೊಂಡ ಕೆರೆ ಹಸ್ತಾಂತರ ಕಾರ್ಯಕ್ರಮದ ನಾಮಫಲಕವನ್ನು ಶಾಸಕ ಬಸವರಾಜ ಮತ್ತಿಮಡು ಅನಾವರಣಗೊಳಿಸಿದರು. ಗಣಪತಿ ಮಾಳಂಜಿ, ಸಿದ್ದಣ್ಣಗೌಡ ಪಾಟೀಲ್​, ಬಸವರಾಜ ಕುಮ್ಮಣಿ, ಗಿರೀಶ ಮಾಲಿಪಾಟೀಲ್​, ಅಭಿಜಿತ್​ ಗಾಯಕವಾಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಸವರಾಜ ಮತ್ತಿಮಡು ಬಣ್ಣನೆ
  • ಯಕ್ಕಂಚಿಯಲ್ಲಿ ಕೆರೆ ಹಸ್ತಾಂತರ ಕಾರ್ಯಕ್ರಮ
ಕಮಲಾಪುರ: ರಾಜ್ಯದಲ್ಲಿ ಸರ್ಕಾರಗಳು ಮಾಡದ ಅಭಿವೃದ್ಧಿ ಕಾರ್ಯಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡುತ್ತಿದೆ. ಪೂಜ್ಯ ಡಾ.ವೀರೇಂದ್ರ ಹೆಗ್ಗಡೆ ಅವರು ನಿರ್ಗತಿಕರು, ಬಡವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದು, ಅವರ ಸಾಮಾಜಿಕ ಕಳಕಳಿ ಶ್ಲಾನೀಯ ಎಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು
ಯಕ್ಕಂಚಿ ಕ್ರಾಸ್​ ಬಳಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್​, ಕುರಿಕೋಟಾ ಗ್ರಾಮ ಪಂಚಾಯಿತಿ ಹಾಗೂ ಗೋಕಟ್ಟೆ ಕೆರೆ ಅಭಿವೃದ್ಧಿ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ನಮ್ಮೂರು ನಮ್ಮ ಕೆರೆ ಯೋಜನೆಯಡಿ 5.70 ಲಕ್ಷ ರೂ. ವೆಚ್ಚದಲ್ಲಿ ಪುನಶ್ಚೇತನಗೊಂಡ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿ, ಧರ್ಮಸ್ಥಳ ಟ್ರಸ್ಟ್​ ಕಾರ್ಯ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಗಣಪತಿ ಮಾಳಂಜಿ ಪ್ರಾಸ್ತಾವಿಕ ಮಾತನಾಡಿ, ಇಲ್ಲಿವರೆಗೆ 1000 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ಅಲ್ಲದೆ ಕಲಬುರಗಿಯಲ್ಲಿ 650 ಅತಿಥಿ ಶಿಕ್ಷಕರ ನೇಮಕ, ರಾಜ್ಯದಲ್ಲಿ 50 ಸಾವಿರ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ವೃಕ್ಷ ರಕ್ಷಣೆ, ಮಹಿಳಾ ಸಬಲೀಕರಣದಂತಹ ಜನಪರ ಕಾರ್ಯ ಮಾಡಲಾಗಿದೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಿದ್ದಣ್ಣಗೌಡ ಪಾಟೀಲ್​, ಅಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ರಜಬ್​ ಅಲಿ, ಗಿರೀಶ ಮಾಲಿಪಾಟೀಲ್​, ಮಲ್ಲಿಕಾರ್ಜುನ ಮರತೂರಕರ್​, ಸುರೇಶ ಲೇಂಗಟಿ, ಉಮೇಶ ಸಾಗರ, ಬಸವರಾಜ ಕುಮ್ಮಣಿ, ಕೃಷ್ಣ ಪಾಟೀಲ್​, ಸೂರ್ಯಕಾಂತ ಅವರಾದ, ರವಿಕುಮಾರ ನಿಲೂರ್​, ಅಭಿಜಿತ್​ ಗಾಯಕವಾಡ, ಪ್ರಶಾಂತ ಹುಬ್ಬಳ್ಳಿ, ಶರಣಗೌಡ ಹರಕಂಚಿ, ಗ್ಯಾನಪ್ಪ ಕಂಬಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net