ರಥಕ್ಕೆ ಚಕ್ರದಡಿ ಸಿಲುಕಿದ ಭಕ್ತ ಸಾವು

 ಧನರಾಜ ಚಾಕುರೆ
ಧನರಾಜ ಚಾಕುರೆ
Published on
ಬಸವಕಲ್ಯಾಣ: ಮಹಾತ್ಮ ಬಸವೇಶ್ವರ ಜಾತ್ರೋತ್ಸವ ನಿಮಿತ್ತ ನಗರದ ರಥ ಮೈದಾನದಲ್ಲಿ ಗುರುವಾರ ಬೆಳಗ್ಗೆ ನಡೆದ ರಥೋತ್ಸವ ವೇಳೆ ಅವಡ ಸಂಭವಿಸಿದ್ದು, ರಥ ಎಳೆಯುವಾಗ ಆಯತಪ್ಪಿ ಬಿದ್ದು ಚಕ್ರದಡಿ ಸಿಲುಕಿ ಗಂಭೀರ ಗಾಯಗೊಂಡಿದ್ದ ಭಕ್ತನೊಬ್ಬ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾನೆ.
ಮೂಲತ@ ಮುಚಳಂಬ ಗ್ರಾಮದ ನಗರದ ಹಿರೇಮಠ ಕಾಲನಿ ನಿವಾಸಿ, ನಿವೃತ್ತ ನೇತ್ರ ಸಹಾಯಕ ಡಾ.ಧನರಾಜ ಚಾಕುರೆ(66)ಮೃತಪಟ್ಟಿದ್ದು, ಪತ್ನಿ, ಮೂವರು ಪುತ್ರಿಯರು, ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಘಾಟಬೋರಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೇತ್ರ ಸಹಾಯಕರಾಗಿ ಸೇವೆ ಸಲ್ಲಿಸಿ ಏಳು ವರ್ಷದ ಹಿಂದೆ ನಿವೃತ್ತಿಯಾಗಿದ್ದ ಧನರಾಜ ಜಾತ್ರೆಯಲ್ಲಿ ಸಾವನ್ನಪ್ಪಿರುವುದು ಕುಟುಂಬಸ್ಥರು ಹಾಗೂ ಬಸವ ಭಕ್ತರಲ್ಲಿ ತೀವ್ರ ನೋವುಂಟು ಮಾಡಿದೆ.
ರಥ ಎಳೆಯುವಾಗ ಆಯತಪ್ಪಿ ಬಿದ್ದ ಧನರಾಜ ಕಾಲುಗಳು ಚಕ್ರಕ್ಕೆ ಸಿಲುಕಿ ಮೊಣಕಾಲವರೆಗೆ ಕಡಿತಗೊಂಡಿದ್ದವು. ರಿಷಬ್​ ಶಿವಾನಂದ ನೇತೆ ಅವರ ಒಂದು ಕಾಲು ರಥದ ಗಾಲಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದರು. ಧನರಾಜ ಅವರಿಗೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಫಲ ನೀಡಿಲ್ಲ. ಇನ್ನು ರಿಷಬ್​ ಸೊಲ್ಲಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತೇರನೆಳೆಯುವಾಗ ನಾಲ್ಕೆದು ಜನ ಕೆಳಗೆ ಬಿದ್ದಿದ್ದರು. ಇದರಲ್ಲಿ ಧನರಾಜ ಅವರ ಎರಡೂ ಕಾಲಿನ ಮೇಲೆ ಚಕ್ರ ಹರಿದರೆ, ರಿಷಬ್​ ಅವರ ಒಂದು ಕಾಲಿನ ಮೇಲಿಂದ ಗಾಲಿ ಹೋಗಿದೆ. ಉಳಿದಂತೆ ಇನ್ನೊಬ್ಬರಿಗೆ ಸಣ್ಣ ಪ್ರಮಾಣದ ಒಳಗಾಯವಾಗಿದ್ದು, ಉಳಿದ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ.
ಮೈದಾನದ ಗೇಟ್​ ಬಳಿಯ ಕಟ್ಟೆ ತಲುಪಿದ ಬಳಿಕ ರಥ ಮರಳಿ ಬರುತ್ತದೆ. ಆದರೆ ಈ ಟನೆಯಿಂದಾಗಿ ರಥ (ಮರಳಿ) ಎಳೆಯುವುದನ್ನು ಕೆಲ ನಿಮಿಷ ನಿಲ್ಲಿಸಲಾಯಿತು. ಗಾಯಾಳುಗಳನ್ನು ಅಸ್ಪತ್ರೆಗೆ ಸಾಗಿಸಿದ ನಂತರ ರಥ ಮೂಲ ಸ್ಥಾನಕ್ಕೆ ಮರಳಿತು.
ಡಿವೈಎಸ್​ಪಿ ಮಡಿವಾಳಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಿಪಿಐ ಅಲಿಸಾಬ್​, ಪಿಎಸ್​ಐ ಚಂದ್ರಶೇಖರ, ಸಂಚಾರಿ ಠಾಣೆ ಪಿಎಸ್​ಐ ಸಿದ್ದೇಶ್ವರ ಜತೆಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net